ಬಾಲಿವುಡ್ ಸಿನಿಮಂದಿಗೂ ವಿವಾದಗಳಿಗೂ ಎಲ್ಲಿಲ್ಲದ ನಂಟು. ವಿವಾದಗಳಿಲ್ಲದೆ ಬಾಲಿವುಡ್ ಸೆಲೆಬ್ರೆಟಿಗಳಿಗೆ ಒಂದು ನಿದ್ದೆಯೇ ಬರುವುದಿಲ್ಲ ಅಂತಾ ಅನ್ನಿಸುತ್ತೆ. ಸೆಲಬ್ರಿಟಿಗಳ ವಿರುದ್ಧ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿರುವ ನಟ ಕಮಲ್ ಖಾನ್, ಇದೀಗ ಹೊಸ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ.

ಈ ಬಾರಿ ಅವರ ಮಾತಿನ ಬಾಣಕ್ಕೆ ತುತ್ತಾಗಿರುವವರು ನಾಯಕ ನಟ ರಣ್ವೀರ್ ಸಿಂಗ್. ರಣ್ವೀರ್ಸಿಂಗ್ ಅವರು ತಮ್ಮ ಸ್ವಂತ ಟ್ಯಾಲೆಂಟ್ನಿಂದ ಬಾಲಿವುಡ್ ಸಿನಿ ರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಆದರೆ ಕಮಲ್ ಖಾನ್ ಸಿಡಿಸಿರುವ ಹೊಸ ಬಾಂಬ್ ಪ್ರಕಾರ, ಖ್ಯಾತ ಸಿನಿಮಾ ಸಂಸ್ಥೆ ಯಶ್ ರಾಜ್ ಫಿಲಂಸ್ ಸಂಸ್ಥೆಗೆ 20 ಕೋಟಿ ರೂಪಾಯಿ ಕೊಟ್ಟಿದ್ದರು ಎಂದಿದ್ದಾರೆ.
‘ಬ್ಯಾಂಡ್ ಬಾಜಾ ಬಾರಾತ್’ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದ ರಣವೀರ್ ನಟನೆಯ ಈ ಸಿನಿಮಾಗೆ ಯಶ್ ರಾಜ್ ಫಿಲಂಸ್ ಹಣ ಹೂಡಿತ್ತು. ಈ ಸಿನಿಮಾ ಮೂಲಕ ತಮ್ಮ ಪುತ್ರನನ್ನು ನಾಯಕನಾಗಿ ಲಾಂಚ್ ಮಾಡಲು ರಣ್ ವೀರ್ ಸಿಂಗ್ ತಂದೆ, ಸಂಸ್ಥೆಯ ಮುಖ್ಯಸ್ಥ ಆದಿತ್ಯ ಚೋಪ್ರಾ ಅವರಿಗೆ 20 ಕೋಟಿ ರೂ. ಕೊಟ್ಟಿದ್ದರು ಎಂದಿದ್ದಾರೆ. ಸದ್ಯ ಕಮಲ್ ಖಾನ್ ಸಿಡಿಸಿರುವ ಬಾಂಬ್ ಗೆ ಇಡೀ ಬಾಲಿವುಡ್ ಗಪ್-ಚುಪ್ ಆಗಿದೆ.