ರಣವೀರ್ ಬೆತ್ತಲೆ ಫೋಟೋಶೂಟ್ ಪ್ರಕರಣದಲ್ಲಿ ಶೀಘ್ರದಲ್ಲೇ ಪೊಲೀಸರು ರಣವೀರ್ ಸಿಂಗ್ ಅವರ ಹೇಳಿಕೆಯನ್ನು ಪಡೆಯಬಹುದು. ಹೀಗಿರುವಾಗಲೇ ನೆಟ್ಟಿಗರು ಹಳೆ ವಿಚಾರವನ್ನು ಎಳೆದು ತಂದಿದ್ದಾರೆ.

ಶಾರುಖ್-ರಣವೀರ್
ಶಾರುಖ್ ಖಾನ್ (Shah Rukh Khan) ವಿವಾದಗಳಿಂದ ದೂರ ಇರೋಕೆ ಪ್ರಯತ್ನಿಸುತ್ತಾರೆ. ಆದರೆ, ಕೆಲವೊಮ್ಮೆ ಅವರು ಮಾಡದೆ ಇರುವ ತಪ್ಪಿನಿಂದ ವಿವಾದಕ್ಕೆ ತುತ್ತಾಗುತ್ತಾರೆ. ಅವರು ಯಾರ ಬಗ್ಗೆಯೂ ಅಷ್ಟಾಗಿ ಕಮೆಂಟ್ ಮಾಡೋಕೆ ಹೋಗುವುದಿಲ್ಲ. ಆದರೆ, ಐದು ವರ್ಷಗಳ ಹಿಂದೆ ರಣವೀರ್ ಸಿಂಗ್ ಬಗ್ಗೆ ಒಂದು ಮಾತನ್ನು ಹೇಳಿದ್ದರು ಶಾರುಖ್. ಅದು ಈಗ ನಿಜವಾಗಿದೆ! ರಣವೀರ್ (Ranaveer Singh) ಬಟ್ಟೆ ಧರಿಸದೆ ಇರುವ ಕಾರಣಕ್ಕೆ ಕೇಸ್ ಹಾಕಿಸಿಕೊಳ್ಳುತ್ತಾರೆ ಎಂದು ಶಾರುಖ್ ಖಾನ್ ಹೇಳಿದ್ದರು.
ರಣವೀರ್ ಸಿಂಗ್ ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ಬಟ್ಟೆ ಧರಿಸದೆ ಮಾಡಿರುವ ನ್ಯೂಡ್ ಫೋಟೋಶೂಟ್ ಸಾಕಷ್ಟು ವಿವಾದ ಸೃಷ್ಟಿಸಿದೆ. ರಣವೀರ್ ವಿರುದ್ಧ ಎನ್ಜಿಒ ಸಂಸ್ಥೆ ದೂರೊಂದನ್ನು ನೀಡಿದ್ದು, ಇದರ ಅನ್ವಯ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಶೀಘ್ರದಲ್ಲೇ ಪೊಲೀಸರು ರಣವೀರ್ ಸಿಂಗ್ ಅವರ ಹೇಳಿಕೆಯನ್ನು ಪಡೆಯಬಹುದು. ಹೀಗಿರುವಾಗಲೇ ನೆಟ್ಟಿಗರು ಹಳೆ ವಿಚಾರವನ್ನು ಎಳೆದು ತಂದಿದ್ದಾರೆ.
2017ರಲ್ಲಿ ತೆರೆಗೆ ಬಂದ ‘ಡಿಯರ್ ಜಿಂದಗಿ’ ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ಆಲಿಯಾ ಭಟ್ ಒಟ್ಟಾಗಿ ನಟಿಸಿದ್ದರು. ಈ ಚಿತ್ರದ ಪ್ರಮೋಷನ್ಗೆ ಆಲಿಯಾ ಹಾಗೂ ಶಾರುಖ್ ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು. ಆ ಸಂದರ್ಭದಲ್ಲಿ ಕರಣ್ ಪ್ರಶ್ನೆ ಒಂದನ್ನು ಕೇಳಿದ್ದರು. ಇದಕ್ಕೆ ಶಾರುಖ್ ಖಾನ್ ಫನ್ನಿ ಆಗಿ ಉತ್ತರಿಸಿದ್ದರು.
‘ರಣವೀರ್ ಸಿಂಗ್ ಅವರು ಅರೆಸ್ಟ್ ಆಗುವುದು ಅಥವಾ ಅವರ ವಿರುದ್ಧ ಕೇಸ್ ಬೀಳುವುದು ಯಾವ ಕಾರಣಕ್ಕೆ’ ಎಂದು ಕರಣ್ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಶಾರುಖ್ ಖಾನ್ ಅವರು, ‘ಬಟ್ಟೆ ಧರಿಸಿದ್ದಕ್ಕೆ ಅಥವಾ ಬಟ್ಟೆ ಧರಿಸದೆ ಇರುವುದಕ್ಕೆ’ ಎಂದು ಹಾಸ್ಯ ರೀತಿಯಲ್ಲಿ ಉತ್ತರಿಸಿದರು ಶಾರುಖ್. ಈ ಮಾತು ನಿಜವಾಗಿದೆ.