ಮುಂಬೈ: ಬಾಲಿವುಡ್ ಹ್ಯಾಂಡ್‍ಸಮ್ ಹೀರೋ ರಣ್‍ವೀರ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸ್ಟ್ರಾಂಗ್ ಲುಕ್ ನೀಡಿದ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋಗೆ ಪತ್ನಿ, ನಟಿ ದೀಪಿಕಾ ಪಡುಕೋಣೆ ಕಮೆಂಟ್ ಮಾಡಿದ್ದಾರೆ.

ರಣ್‍ವೀರ್ ಸಿಂಗ್ ಕಪ್ಪು ಬಣ್ಣದ ಟೀಶರ್ಟ್ ಸ್ಟ್ರಾಂಗ್ ಲುಕ್ ನೀಡಿರುವ ಮೂರು ಫೋಟೋಗಳನ್ನು ಹಂಚಿಕೊಂಡಿದ್ದರು. ಫೋಟೋ ಅಪ್ಲೋಡ್ ಆಗುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಶೇರ್ ಮಾಡಿಕೊಳ್ಳಲಾರಂಭಿಸಿದರು. ಮಹಿಳಾ ಅಭಿಮಾನಿಗಳಂತೂ ಫೈರ್ ಎಮೋಜಿ ಹಾಕಿ ರಿಪ್ಲೈ ಮಾಡಿದ್ದಾರೆ. ಈ ಎಲ್ಲದರ ಮಧ್ಯೆ ದೀಪಿಕಾ ಕ್ಯಾಪ್ಟಿಲ್ ಲೆಟರ್ ನಲ್ಲಿ ಮೈನ್ (ನನ್ನವ) ಎಂದು ಬರೆದು ಎಮೋಜಿ ಹಾಕಿದ್ದಾರೆ.

ಇನ್ನೂ ಈ ಫೋಟೋಗೆ ನಟ ಸೋನು ಸೂದ್ ಫೈರ್ ಎಮೋಕಿ ಹಾಕಿದ್ರೆ, ಗಾಯಕ ಹಿಮೇಶ್ ರಶ್ಮಿಯಾ ಶಾನ್‍ದಾರ್, ಜಬರ್ ದಸ್ತ್ ಅಂತೆ ಕಮೆಂಟ್ ಮಾಡಿದ್ದಾರೆ. ಗಾಯಕ ವಿಶಾಲ್ ದದಲಾನಿ, ವಾಹ್! ಏನು ಇನ್‍ಟೆನ್ಸಿಟಿ ನಿಮ್ಮದು. ನಿನ್ನೆ ಪಾರ್ಕ್ ನಲ್ಲಿ ಭೇಟಿಯಾಗಿದ್ದೆ. ನಿಜವಾಗಲೂ ನೀವು ಮ್ಯಾಡ್ ಮ್ಯಾನ್ ಅಂತ ಹಾಡಿ ಹೊಗಳಿದ್ದಾರೆ. ಹಾಲಿವುಡ್ ನಟ ಸ್ಟೈಲಿನ್ ಗೆ ರಣ್‍ವೀರ್ ಅವರನ್ನ ಅರ್ಜುನ್ ಕಪೂರ್ ಹೋಲಿಸಿದ್ದಾರೆ.

ಸದ್ಯ ರಣ್‍ವೀರ್ ಸಿಂಗ್ ಮುಂಬೈನಲ್ಲಿದ್ದು, ದೊಡ್ಡ ಪ್ರೊಜೆಕ್ಟ್ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಪ್ರೊಜೆಕ್ಟ್ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದ್ದು, ಅಧಿಕೃತವಾಗಬೇಕಿದೆ. ಶೀಘ್ರದಲ್ಲಿಯೇ ತಮ್ಮ ಮುಂದಿನ ಪ್ರೊಜೆಕ್ಟ್ ರಣ್‍ವೀರ್ ರಿವೀಲ್ ಮಾಡಲಿದ್ದಾರೆ.

 

View this post on Instagram

 

A post shared by Ranveer Singh (@ranveersingh)

ಕೊರೊನಾ ಮತ್ತು ಲಾಕ್‍ಡೌನ್ ನಿಂದಾಗಿ ರಣ್‍ವೀರ್ ಅಭಿನಯದ ಚಿತ್ರ ’83’ ಬಿಡುಗಡೆ ದಿನಾಂಕ ಪದೇ ಪದೇ ಮುಂದೂಡಿಕೆಯಾಗುತ್ತಿದೆ. ಕ್ರಿಕೆಟಿಗ ಕಪಿಲ್ ದೇವ್ ಜೀವನಾಧರಿತ ಸಿನಿಮಾ ಇದಾಗಿದ್ದು, ರಿಲೀಸ್ ದಿನಾಂಕ ನಿಗದಿಯಾಗಿಲ್ಲ. ಈ ಚಿತ್ರದಲ್ಲಿ ರಣ್‍ವೀರ್ ಪತ್ನಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಈ ಹಿಂದೆ ರಾಮ್‍ಲೀಲಾ, ಬಾಜೀರಾವ್ ಮಸ್ತಾನಿ ಮತ್ತು ಪದ್ಮಾವತ್ ಚಿತ್ರದಲ್ಲಿ ದೀಪಿಕಾ ಮತ್ತು ರಣ್‍ವೀರ್ ಜೊತೆಯಾಗಿ ತೆರೆ ಹಂಚಿಕೊಂಡಿದ್ದರು.

The post ರಣ್‍ವೀರ್ ಸ್ಟ್ರಾಂಗ್ ಲುಕ್‍ಗೆ ದೀಪಿಕಾ ಕಮೆಂಟ್ appeared first on Public TV.

Source: publictv.in

Source link