ಮುಂಬೈ: ಮಹಾರಾಷ್ಟ್ರದ ಖೇದಮಾಧಿಲ ರತ್ನಾಗಿರಿ ಜಿಲ್ಲೆಯ Lotte MIDC ಫಾರ್ಮಾಸ್ಯುಟಿಕಲ್ಸ್​ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಕೆಮಿಕಲ್ ಕಂಪನಿಯಲ್ಲಿ ಭಾರೀ ಸ್ಫೋಟ ಉಂಟಾದ ಬಳಿಕ ಬೆಂಕಿ ಎಲ್ಲೆಡೆ ಹರಡಿದೆ. ಸ್ಥಳಕ್ಕೆ ಆಗ್ನಿಶಾಮಕ ದಳದ ವಾಹನಗಳು ದೌಡಾಯಿಸಿವೆ.

ಇಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಸ್ಪೋಟ ಸಂಭವಿಸಿದೆ ಎಂದು ತಿಳಿದುಬಂದಿದೆ ಸ್ಫೋಟದಿಂದ ಕಂಪನಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಘಟನೆ ನಡೆದ ಸ್ಥಳದಿಂದ ಸುಮಾರು 10 ಕಿಮೀ ದೂರದಿಂದಲೂ ದಟ್ಟ ಹೊಗೆ ಆಗಸಕ್ಕೆ ಚಿಮ್ಮುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು.

ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿರುವ ಕುರಿತು ಇದುವರೆಗೂ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. Lotte MIDC ಕಂಪನಿಯಲ್ಲಿ ಸಂಭವಿಸುತ್ತಿರುವ ಆರನೇ ಅವಘಡ ಇದಾಗಿದೆ. ಕಳೆದ ಮಾರ್ಚ್​ 20 ರಂದು ಘರ್ದಾದ Lotte MIDC ಕಂಪನಿಯಲ್ಲಿ ಇಂತಹದ್ದೆ ಸ್ಫೋಟ ಸಂಭವಿಸಿತ್ತು. ಅಂದು ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

The post ರತ್ನಗಿರಿಯ ಫಾರ್ಮಾಸ್ಯುಟಿಕಲ್ಸ್​ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ appeared first on News First Kannada.

Source: newsfirstlive.com

Source link