ರತ್ನಾನಿ ಕ್ಯಾಮರಾ ಕಣ್ಣಲ್ಲಿ Mr&Mrs ರಾಮಾಚಾರಿ; ಕಣ್​ ಸೆಳೆಯುತ್ತಿದೆ ಯಶ್ ದಂಪತಿ ಫೋಟೋ


ರಾಕಿಂಗ್​ ಸ್ಟಾರ್​ ಯಶ್​ ಮತ್ತೆ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಹೌದು, ಬಾಲಿವುಡ್​ ಲೋಕದ ಖ್ಯಾತ ಸೆಲೆಬ್ರಿಟಿ ಪೋಟೋಗ್ರಾಫರ್​ ಡಬೂ ರತ್ನಾನಿ ಜೊತೆ ಈ ಹಿಂದೆ ಫೊಟೋಶೂಟ್​ ಮಾಡಿಸಿಕೊಂಡು ಸದ್ದು ಮಾಡಿದ್ದ ರಾಕಿ ಭಾಯ್​ ಇದೀಗ ಮತ್ತೆ ಸೆಲೆಬ್ರಿಟಿ ಫೊಟೋಗ್ರಾಫರ್​ ಕ್ಯಾಮರಾ ಕಣ್ಣಿಗೆ ಪೋಸ್​ ನೀಡಿದ್ದಾರೆ.

ವಿಶೇಷ ಏನಂದ್ರೆ ಫೋಟೋಗ್ರಾಫರ್​ ರತ್ನಾನಿ ಬಾಲಿವುಡ್​ ಅಂಗಳದಲ್ಲಿ ಯಾರದ್ದೇ ಫೋಟೋ ಕ್ಲಿಕ್ಕಿಸಿದರು ಅದನ್ನು ಸೋಷಿಯಲ್​ ಮೀಡಿಯಾಗಳಲ್ಲಿ ಹರಿ ಬಿಡುತ್ತಾರೆ. ಆದ್ರೆ ಈ ಬಾರಿ ಫಾರ್​​ ಏ ಚೇಂಜ್​ ಎಂಬಂತೆ ಪತ್ನಿ ರಾಧಿಕಾ ಪಂಡಿತ್​ ಕೂಡ ರಾಕಿಂಗ್​​ ಸ್ಟಾರ್​ ಜೊತೆಯಾಗಿದ್ದು ಅದ್ದಯು ಅವರ ಚಿತ್ತರಗಳು ಸಾಕಷ್ಟು ವೈರಲ್​ ಆಗುತ್ತಿವೆ.

ಇನ್ನು ಕೆಜಿಎಫ್​ನಿಂದ ಪ್ಯಾನ್​ ಇಂಡಿಯಾ ಸ್ಟಾರ್​ ಆದ ಯಶ್​ ಪದೇ ಪದೇ ಮುಂಬೈಗೆ ಹಾರಿ ಫೋಟೋ ಶೂಟ್​ ಮಾಡಿಸಿಕೊಳ್ಳುತ್ತಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಜೊತೆಗೆ ಅಭಿಮಾನಿಗಳು ಯಶ್​ ಬಾಲಿವುಡ್​ನಲ್ಲಿ ಮಿಂಚಲು ತಯಾರಿ ನಡೆಸಿದ್ದಾರಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

News First Live Kannada


Leave a Reply

Your email address will not be published. Required fields are marked *