ರದ್ದಾಗಿದ್ದ ಜನೋತ್ಸವ ಸಮಾವೇಶವನ್ನು ಆಗಸ್ಟ್ 28ರಂದು ನಡೆಸಲು ಬಿಜೆಪಿ ನಿರ್ಧಾರ | BJP Janostav Program to be healed on August 28 in Doddaballapur


ಜುಲೈ 28ರಂದು ನಿಗದಿಯಾಗಿ ರದ್ದುಗೊಂಡಿದ್ದ ಜನೋತ್ಸವ ಸಮಾವೇಶವನ್ನು ಆಗಸ್ಟ್ 28ರಂದು ಬಿಜೆಪಿ ನಡೆಸಲು ತೀರ್ಮಾನ ಕೈಗೊಂಡಿದೆ.

ರದ್ದಾಗಿದ್ದ ಜನೋತ್ಸವ ಸಮಾವೇಶವನ್ನು ಆಗಸ್ಟ್ 28ರಂದು ನಡೆಸಲು ಬಿಜೆಪಿ ನಿರ್ಧಾರ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಜುಲೈ 28ರಂದು ನಿಗದಿಯಾಗಿ ರದ್ದುಗೊಂಡಿದ್ದ ಜನೋತ್ಸವ (Janostav) ಸಮಾವೇಶವನ್ನು ಆಗಸ್ಟ್ 28ರಂದು ಬಿಜೆಪಿ (BJP) ನಡೆಸಲು ತೀರ್ಮಾನ ಕೈಗೊಂಡಿದೆ. ಈ ಜನೋತ್ಸವ ಸಮಾವೇಶವು ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ತುಮಕೂರು ಜಿಲ್ಲೆಯ 3-4 ತಾಲೂಕಿಗೆ ಸೀಮಿತವಾಗಿ ಸಮಾವೇಶ ಮಾಡಲಾಗುತ್ತದೆ.

ಹಾಗೇ ರಾಜ್ಯದ ವಿವಿಧ ಕಡೆ 4-5 ಸಮಾವೇಶ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ನಂತರ ರಾಜ್ಯಮಟ್ಟದಲ್ಲಿ ಒಂದು ದೊಡ್ಡ ಸಮಾವೇಶ ಮಾಡಲು ಬಿಜೆಪಿ ಚಿಂತನೆ ನಡೆಸಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವರು ಭೇಟಿಯಾಗಿದ್ದಾರೆ.ಈ ವೇಳೆ ಆಗಸ್ಟ್ 28ರಂದು ನಡೆಯುವ ಜನೋತ್ಸವ ಸಮಾವೇಶಕ್ಕೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *