ಬೆಂಗಳೂರು: ಎಸ್ಎಸ್ಎಲ್‌ಸಿ ಪರೀಕ್ಷೆಯನ್ನ ರದ್ದುಗೊಳಿಸಿ ಅಂತ ಕೋರಿ ಹೈಕೋರ್ಟ್​ಗೆ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಪಿಯು ಪರೀಕ್ಷೆ ರದ್ದು ಮಾಡಲು ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ರದ್ದುಗೊಳಿಸಿ ಎಂದು ಸಿಂಗ್ರೆಗೌಡ ಅನ್ನೋರು ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದು: ಒಂದು ಹಾಲ್​ನಲ್ಲಿ 12 ವಿದ್ಯಾರ್ಥಿಗಳಿಗಷ್ಟೇ ಅವಕಾಶ: SSLC ಪರೀಕ್ಷೆ ಹೇಗೆ ನಡೆಯಲಿದೆ..?

ಕೋವಿಡ್ 19 ಮಧ್ಯೆ ಸರ್ಕಾರ SSLC ಪರೀಕ್ಷೆಯನ್ನು ನಡೆಸುತ್ತಿದೆ. ಸರ್ಕಾರದ ಈ ನಿರ್ಧಾರ ಸರಿ ಇಲ್ಲ. 3ನೇ ಅಲೆ ಬರುವ ಬಗ್ಗೆ ತಜ್ಞರು ಎಚ್ಚರಿಕೆಯನ್ನ ನೀಡಿದ್ದಾರೆ. ಇದರಲ್ಲಿ ಹಲವಾರು ಮಕ್ಕಳಿಗೆ ಕೊವೀಡ್ 19 ಹರಡುವ ಸಂಭವ ಇದೆ. ಬೇರೆ ರಾಜ್ಯಗಳು ಮಕ್ಕಳ ಹಳೆಯ ದಾಖಲೆಗಳ ನೋಡಿ ಪಾಸ್ ಮಾಡ್ತಿದ್ದಾರೆ. ಅದೇ ರೀತಿ ನಮ್ಮ ಮಕ್ಕಳನ್ನು ಪಾಸ್ ಮಾಡಬೇಕು ಅಂತ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಿಗ್​ ಬ್ರೇಕಿಂಗ್; ಶಿಕ್ಷಣ ಸಚಿವರಿಂದ SSLC ಪರೀಕ್ಷಾ ದಿನಾಂಕ ಘೋಷಣೆ

The post ರದ್ದಾಗುತ್ತಾ SSLC ಪರೀಕ್ಷೆ? ಹೈಕೋರ್ಟ್​ಗೆ ಮತ್ತೊಂದು ಅರ್ಜಿ ಸಲ್ಲಿಕೆ appeared first on News First Kannada.

Source: newsfirstlive.com

Source link