ರನ್​ಮಶೀನ್ ಕೊಹ್ಲಿಗೆ ಶತಕದ ದಾಹ- ಕಿವೀಸ್ ವಿರುದ್ಧ ನನಸಾಗುತ್ತಾ ಕೊಹ್ಲಿ ಕನಸು?


ಖಾಯಂ ನಾಯಕ ವಿರಾಟ್​ ಕೊಹ್ಲಿಯ ಕಮ್​ಬ್ಯಾಕ್​ನಿಂದ ಟೀಮ್​ ಇಂಡಿಯಾದ ಮಿಡಲ್​ ಆರ್ಡರ್​​ ಬಲವೇನೋ ಹೆಚ್ಚಿದೆ. ಆದ್ರೆ, ಕಮ್​ ಬ್ಯಾಕ್​ ಸ್ಟಾರ್​​ ಕೊಹ್ಲಿ ಮುಂದೆ ಸವಾಲಿನ ಬೆಟ್ಟವೇ ಇದೆ. ವಿಶ್ರಾಂತಿಯ ಬಳಿಕ ತಂಡಕ್ಕೆ ಕಮ್​ಬ್ಯಾಕ್​ ಮಾಡಿರೋ ಕೊಹ್ಲಿ ಮುಂದಿರೊ ಚಾಲೆಂಜಸ್​​​ಗಳ ಡಿಟೇಲ್ಸ್​ ಇಲ್ಲಿದೆ.

ಮೊದಲ ಪಂದ್ಯದಲ್ಲಿ ಮಿಡಲ್​ ಆರ್ಡರ್​ ವೈಫಲ್ಯದ ಸಮಸ್ಯೆ ಎದುರಿಸಿದ್ದ ಟೀಮ್​ ಇಂಡಿಯಾ, ಕೊಹ್ಲಿ ಕಮ್​ಬ್ಯಾಕ್​ನಿಂದ ಬಲ ಬಂತು ಅನ್ನೋ ಭಾವನೆಯಲ್ಲಿದೆ. ಅಭಿಮಾನಿಗಳ ವಲಯದಲ್ಲೂ ಕೊಹ್ಲಿ ಮೇಲೆ ನಿರೀಕ್ಷೆಯ ಭಾರವೇ ಇದೆ. ಆದ್ರೆ, ಕಮ್​ಬ್ಯಾಕ್​ ಮಾಡಿರುವ ಟೀಮ್​ ಇಂಡಿಯಾ ನಾಯಕನ ಮುಂದೆ ಹಲವು ಸವಾಲುಗಳಿವೆ.

ವಿರಾಟ್​​ ಕೊಹ್ಲಿ ಶತಕ ಸಿಡಿಸಿ ಆಗಿದೆ 2 ವರ್ಷ.!
ವಿಶ್ರಾಂತಿ ಬಳಿಕ ಕಮ್​ಬ್ಯಾಕ್​ ಮಾಡ್ತಿದ್ದಂತೆ ಕೊಹ್ಲಿಗೆ ಎದುರಾಗಇರುವ ಮೊದಲ ಪ್ರಶ್ನೆಯೇ ಇದಾಗಿದೆ. ವಿರಾಟ್​ ಕೊಹ್ಲಿ ಕೊನೆಯ ಶತಕ ಸಿಡಿಸಿದ್ದು, 2019ರಲ್ಲಿ ಬಾಂಗ್ಲಾದೇಶ ವಿರುದ್ಧ. ಅದಾದ ಬಳಿಕ ಮೂರು ಮಾದರಿಯ ಕ್ರಿಕೆಟ್​​ನಲ್ಲಿ ಸಕ್ರಿಯರಾಗಿದ್ರೂ ಮೂರಂಕಿ ಗಡಿ ದಾಟುವಲ್ಲಿ ಕೊಹ್ಲಿ ವಿಫಲರಾಗಿದ್ದಾರೆ. ಹೀಗಾಗಿ ಆ ಶತಕದ ಬರವನ್ನ ನೀಗಿಸಿಕೊಳ್ಳಬೇಕಾದ ಸವಾಲು ಕೊಹ್ಲಿ ಮುಂದಿದೆ. ಶತಕದ ಬರ ಮಾತ್ರವಲ್ಲ.. ಫಾರ್ಮ್​ ಸಮಸ್ಯೆಯೂ ಕೊಹ್ಲಿಯನ್ನ ಕಾಡ್ತಿದೆ.

ಎಲ್ಲಾ ಮಾದರಿಯೂ ಸೇರಿ 56 ಇನ್ನಿಂಗ್ಸ್​ಗಳಿಂದ ಬಂದಿಲ್ಲ ಶತಕ
ಟೆಸ್ಟ್​​, ಏಕದಿನ, ಟಿ20 ಈ ಮೂರು ಮಾದರಿಯಲ್ಲಿ ಕಳೆದ 56 ಇನ್ನಿಂಗ್ಸ್​​ಗಳಿಂದ ಕೊಹ್ಲಿ ಶತಕ ಸಿಡಿಸಿಲ್ಲ. ಕೊನೆಯ ಶತಕ ಸಿಡಿಸಿದ ಬಳಿಕ 21 ಇನ್ನಿಂಗ್ಸ್​​ಗಳನ್ನಾಡಿರುವ ಕೊಹ್ಲಿ, ಕೇವಲ 5 ಬಾರಿ ಮಾತ್ರ ಅರ್ಧಶತಕದ ಗಡಿ ದಾಟಿದ್ದಾರೆ. ಇನ್ನೂ ಈ 21 ಇನ್ನಿಂಗ್ಸ್​​ಗಳಲ್ಲಿ 3 ಬಾರಿ ಡಕೌಟ್​​ ಆಗಿದ್ರೆ, 4 ಬಾರಿ ಒಂದಂಕಿ ಮೊತ್ತಕ್ಕೆ ಔಟ್​ ಆಗಿದ್ದಾರೆ. ಇನ್ನು ಕೊನೆಯ ಶತಕದ ಬಳಿಕ ಕೊಹ್ಲಿ ಟೆಸ್ಟ್​ ಸರಾಸರಿ ಕೇವಲ 26.80 ಆಗಿದೆ.

ನಾಯಕನಾಗಿ ಯಶಸ್ಸು ಕಂಡಿದ್ರೂ, ಬ್ಯಾಟ್ಸ್​​ಮನ್​ ಆಗಿ ಟೆಸ್ಟ್​ ಮಾದರಿಯಲ್ಲಿ ಕಳೆದ 2 ವರ್ಷಗಳಿಂದ ಕೊಹ್ಲಿ ಕುಸಿತ ಕಂಡಿದ್ದಾರೆ. ಈಗಾಗಲೇ ರಹಾನೆ, ಪೂಜಾರರ ಫಾರ್ಮ್​ ಬಗ್ಗೆ ಹೆಚ್ಚು ಚರ್ಚೆಯಾಗ್ತಿದ್ದು, ಈ ಟೆಸ್ಟ್​ನಲ್ಲಿ ವೈಫಲ್ಯ ಕಂಡರೆ ಕೊಹ್ಲಿ ಸ್ಥಾನದ ಬಗ್ಗೆ ಚರ್ಚೆ ಆರಂಭವಾದ್ರೂ ಅಚ್ಚರಿಯಿಲ್ಲ. ಇದರಿಂದ ಪಾರಾಗಬೇಕಂದ್ರೆ, ಕೊಹ್ಲಿ ಮಾಸ್ಟರ್​ಕ್ಲಾಸ್​ ಇನ್ನಿಂಗ್ಸ್​ ಕಟ್ಟಲೇಬೇಕಿದೆ.

ಡ್ರೆಸ್ಸಿಂಗ್​ ರೂಮ್​ನಲ್ಲಿ ಗೌರವ ಉಳಿಸಿಕೊಳ್ಳುವ ಸವಾಲು..
ಈಗಾಗಲೇ ಟಿ20 ನಾಯಕತ್ವ ತೊರೆದಿರುವ ಕೊಹ್ಲಿಗೆ ಏಕದಿನ ನಾಯಕತ್ವದಿಂದಲೂ ಕೊಕ್​ ಕೊಡಲಾಗುತ್ತೆ ಎಂಬ ಮಾತುಗಳು ಕೇಳಿ ಬರ್ತಿವೆ. ಅದಲ್ಲದೇ ಇಂಗ್ಲೆಂಡ್​ ಪ್ರವಾಸದ ಬಳಿಕ ಡ್ರೆಸ್ಸಿಂಗ್​ ರೂಮ್​ನಲ್ಲಿ ಕೊಹ್ಲಿ ರೆಸ್ಪೆಕ್ಟ್​​ ಕಳೆದುಕೊಂಡಿದ್ದಾರೆ ಎಂಬ ಸುದ್ದಿಯೂ ಸದ್ದು ಮಾಡಿತ್ತು. ಬ್ಯಾಟಿಂಗ್​ ಫಾರ್ಮ್​ ಕಂಡುಕೊಂಡ್ರೆ ಮಾತ್ರ ಕೊಹ್ಲಿ ಈ ಸವಾಲನ್ನು ಮೀರಲು ಸಾಧ್ಯ.

News First Live Kannada


Leave a Reply

Your email address will not be published. Required fields are marked *