ಭಾರೀ ವಿವಾದಕ್ಕೆ ಗುರಿಯಾಗಿದ್ದ 59 ಸಾವಿರ ಕೋಟಿ ರೂಪಾಯಿಯ ರಫೇಲ್ ಡೀಲ್ ಬಗ್ಗೆ ತನಿಖೆ ನಡೆಸಲು ಫ್ರೆಂಚ್ ಸರ್ಕಾರ ನ್ಯಾಯಾಧೀಶರನ್ನು ನೇಮಕ ಮಾಡಿದ್ದು, ರಫೇಲ್​ ವಿವಾದಕ್ಕೆ ಮರುಜೀವ ಬಂದಿದೆ. ಈ ನಡುವೆ ಇಂದು ಕಾಂಗ್ರೆಸ್ ನಾಯಕರು ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿಯನ್ನು ಮಾಡಿದ್ದು, ಇಷ್ಟಾದರೂ ಸರ್ಕಾರ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲು ಮುಂದಾಗಿಲ್ಲ ಎಂದು ಆರೋಪಿಸಿದೆ.

ರಫೇಲ್​ ಡೀಲ್​ ಸಂದರ್ಭದಲ್ಲಿ ಮದ್ಯವರ್ತಿಗಳಿಗೆ ಭಾರೀ ಮೊತ್ತದ ಹಣ ಸಂದಾಯ ಮಾಡಲಾಗಿದೆ. ಈ ಬಗ್ಗೆ ದಾಖಲೆಗಳು ಈಗ ಲಭ್ಯವಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಕುರಿತೆ ಟ್ವೀಟ್​ ಮಾಡಿ ಮೋದಿ ಸರ್ಕಾರವನ್ನು ಪ್ರಶ್ನೆ ಮಾಡಿರುವ ಕಾಂಗ್ರೆಸ್ ವರಿಷ್ಠ, ಸಂಸದ ರಾಹುಲ್ ಗಾಂಧಿ, ಪ್ರಕರಣದ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ನೇಮಕ ಮಾಡಲು ಸರ್ಕಾರ ಏಕೆ ಸಿದ್ಧವಾಗಿಲ್ಲ ಎಂಬುದಕ್ಕೆ ಇಲ್ಲಿ ಕೆಲವು ಆಯ್ಕೆಗಳಿವೆ. ಮೊದಲು ಅಪರಾಧ ಮನಸ್ಸಾಕ್ಷಿ ಕಾಡುವುದು, ಸ್ನೇಹಿತರನ್ನು ರಕ್ಷಣೆ ಮಾಡುವುದು ಹಾಗೂ ಜೆಪಿಸಿಗೆ ರಾಜ್ಯಸಭಾ ಸ್ಥಾನದ ಅಗತ್ಯವಿಲ್ಲ. ಇಲ್ಲಿ ನೀಡಿರುವ ಎಲ್ಲ ಆಯ್ಕೆಗಳು ಸರಿಯಾಗಿದೆ ಎಂದು ಬರೆದುಕೊಂಡಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್​ ಬೆನ್ನಲ್ಲೇ ಮಾತನಾಡಿರುವ ಕಾಂಗ್ರೆಸ್ ವಕ್ತಾರ ಪವನ್​ ಖೇರಾ, ಫ್ರೆಂಚ್ ಸರ್ಕಾರ ರಫೇಲ್​ ಡೀಲ್ ಬಗ್ಗೆ ತನಿಖೆ ನಡೆಸಲು ನ್ಯಾಯಾಧೀಶರನ್ನು ನೇಮಕ ಮಾಡಿ 24 ಗಂಟೆಗಳು ಕಳೆದಿದೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆ, ಪಕ್ಷಪಾತ ಹಾಗೂ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ. ಈಗ ಇಡೀ ವಿಶ್ವ ಹಾಗೂ ರಾಷ್ಟ್ರ ದೆಹಲಿಯತ್ತ ನೋಡುತ್ತಿದೆ. ಆದರೂ ಸರ್ಕಾರ ಮೌನ ವಹಿಸಿರುವುದು ಯಾಕೆ..? ಎಂದು ಪ್ರಶ್ನಿಸಿದ್ದಾರೆ. ಆದರೆ ಬಿಜೆಪಿ ಕಾಂಗ್ರೆಸ್ ಆರೋಪಿಗಳನ್ನು ತಿರಸ್ಕಾರ ಮಾಡಿದ್ದು, ಆರಂಭದಿಂದಲೂ ರಫೇಲ್​ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಸುಳ್ಳು ಹೇಳಿಕೊಂಡೆ ಬಂದಿದ್ದಾರೆ ಎಂದು ಟೀಕೆ ಮಾಡಿದೆ.

ಇದನ್ನೂ ಓದಿ: ರಫೇಲ್​​ ಹಗರಣದ ತನಿಖೆಗಾಗಿ ಹೊಸ ನ್ಯಾಯಾಧೀಶರ ನೇಮಿಸಿದ ಫ್ರೆಂಚ್ ಸರ್ಕಾರ

The post ರಫೆಲ್ ವಿಮಾನ ಭ್ರಷ್ಟಾಚಾರ ಆರೋಪ ಪ್ರಕರಣ; ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕೆಂಡ appeared first on News First Kannada.

Source: newsfirstlive.com

Source link