ಬಹು ವಿವಾದಿತ ರಫೇಲ್​ ಹಗರಣದ ತನಿಖೆಗಾಗಿ ಫ್ರೆಂಚ್ ಸರ್ಕಾರ ನ್ಯಾಯಾಧೀಶರ ನೇಮಿಸಿ ಆದೇಶಿಸಿದೆ. ಇದರಿಂದ ಹಗರಣಕ್ಕೆ ಮರುಜೀವ ಬಂದಂತಾಗಿದೆ.

ಭಾರತ ಸರ್ಕಾರ ಫ್ರೆಂಚ್​​ ಕಂಪನಿಯಿಂದ 36 ರಫೆಲ್ ಯುದ್ಧ ವಿಮಾನಗಳನ್ನು ಖರೀದಿ ಮಾಡಿತ್ತು. 2016ರಲ್ಲಿ ಭಾರತ ಪ್ರೆಂಚ್ ಕಂಪನಿ ಡೆಸ್ಸಾಲ್ಟ್ ಏರ್‍ಕ್ರಾಫ್ಟ್ ಜೊತೆಗೆ ಈ ವ್ಯವಹಾರದಲ್ಲಿ ಸುಮಾರ 59 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ರಫೇಲ್​​ ವಿಮಾನ ಖರೀದಿಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಫ್ರೆಂಚ್​​​ ಮೂಲದ ಸರ್ಕಾರೇತರ ಸಂಸ್ಥೆ ಶೆರ್ಪಾ​ ದೂರು ನೀಡಿತ್ತು. ಆದರೆ, ಈ ಆರೋಪವನ್ನು 2018ರಲ್ಲಿ ತಿರಸ್ಕರಿಸಲಾಗಿತ್ತಾದರೂ ಈಗ ಮತ್ತೆ ಮರುಜೀವ ಬಂದಿದೆ.

ರಫೆಲ್ ಹಗರಣ ಅತ್ಯಂತ ಸೂಕ್ಷ್ಮ ಪ್ರಕರಣ. ಈ ಕೇಸ್​​ ವಿಚಾರಣೆಗೆ ನಾವು ಮುಕ್ತ ಮನಸ್ಸು ಹೊಂದಿದ್ದೇವೆ. ಹೀಗಾಗಿ ರಫೇಲ್​ ಹಗರಣವನ್ನ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೇವೆ. ಇದಕ್ಕಾಗಿ ನ್ಯಾಯಾಧೀಶರನ್ನು ನೇಮಿಸಿದ್ದೇವೆ ಎಂದು ಫ್ರೆಂಚ್​​ ಸರ್ಕಾರ ಹೇಳಿದೆ.
ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್​​ ಸಂಸ್ಥೆಗೆ ಈ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆಗೆ ಯಾವುದೇ ಅನುಭವ ಇಲ್ಲ. ಇದರಲ್ಲಿ ಅವ್ಯವಹಾರ ನಡೆದಿದೆ, ಕೂಡಲೇ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್​ ಸೇರಿದಂತೆ ಫ್ರಾನ್ಸ್​ನ ಕೆಲವು ಎನ್​​ಜಿಒಗಳು ಹೋರಾಟ ಮಾಡಿದ್ದವು.

2019 ನವೆಂಬರ್​​ನಲ್ಲಿ ರಫೇಲ್​ ಹಗರಣದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿತ್ತು. ಈ ಮೂಲಕ ಸಾರ್ವಜನಿಕ ಹಿತಾಕಸ್ತಿ ಅರ್ಜಿಯನ್ನು ತಿರಸ್ಕರಿಸಿತ್ತು.

ಇದೀಗ ಫ್ರೆಂಚ್ ಸರ್ಕಾರ ಪ್ರಕರಣದ ತನಿಖೆಗೆ ಹೊಸ ನ್ಯಾಯಾಧೀಶರನ್ನ ನೇಮಿಸಿದ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಸಂಸದ ಶಶಿ ತರೂರ್ ಸಾಲು ಸಾಲು ಟ್ವೀಟ್​ಗಳನ್ನು ಮಾಡಿದ್ದು ರಫೇಲ್​ನ ಸತ್ಯ ಸುಮ್ಮನೆ ಇರುವುದಿಲ್ಲ ಎಂದಿದ್ದಾರೆ.

 

The post ರಫೇಲ್​​ ಹಗರಣಕ್ಕೆ ಮರುಜೀವ: ತನಿಖೆಗಾಗಿ ಹೊಸ ನ್ಯಾಯಾಧೀಶರ ನೇಮಿಸಿದ ಫ್ರೆಂಚ್ ಸರ್ಕಾರ appeared first on News First Kannada.

Source: newsfirstlive.com

Source link