ರಮಣಶ್ರೀ ಆಸ್ಪತ್ರೆ ವಿರುದ್ಧ ಅಪ್ಪು ಫ್ಯಾನ್ಸ್​ ಆರೋಪ -ಡಾ.ರಮಣ್​ ರಾವ್ ಹೇಳಿದ್ದೇನು..?


ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಅವರ ಕುಟುಂಬದ ವೈದ್ಯ ಮತ್ತು ಅಪ್ಪುಗೆ ಚಿಕಿತ್ಸೆ ನೀಡಿದ್ದ ರಮಣಶ್ರೀ ಆಸ್ಪತ್ರೆಯ ವೈದ್ಯ ಡಾ.ರಮಣ್​ ರಾವ್​ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ಅಪ್ಪು ಸಾವಿನ ತನಿಖೆ ಆಗ್ರಹಿಸಿ ಅವರ ಅಭಿಮಾನಿಗಳು ಒತ್ತಾಯಿಸುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಡಾ.ರಮಣ್​ ರಾವ್ ನಿವಾಸಕ್ಕೆ ಪೊಲೀಸ್​ ಭದ್ರತೆ ನಿಯೋಜನೆ ಮಾಡಲಾಗಿದೆ.

ಇವೆಲ್ಲವೂ ನೋವಿನ ಆರೋಪಗಳು
ಇನ್ನು ಅಪ್ಪು ಸಾವಿನ ಕುರಿತು ಎದ್ದಿರುವ ಹಲವಾರು ಪ್ರಶ್ನೆಗಳ ಕುರಿತು ವೈದ್ಯ ಡಾ.ರಮಣ್​ ರಾವ್ ನ್ಯೂಸ್​​ಫಸ್ಟ್​ನ ಜೊತೆ ಮಾತನಾಡಿದ್ದು.. ಅಪ್ಪು ಅಗಲಿದ ನೋವಿನಲ್ಲಿರುವ ಅಭಿಮಾನಿಗಳು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಸಹಜ ಎಂದಿದ್ದಾರೆ. ಇನ್ನು ಯಾವುದೇ ಗಣ್ಯ ವ್ಯಕ್ತಿಯ ದಿಢೀರ್​ ಸಾವಾದಾಗ ಇಂತಹ ಪ್ರಕ್ರಿಯೆಗಳು ಬರಲಾರಂಭಿಸುತ್ತವೆ ಎಂದಿದ್ದಾರೆ.

ಅಪ್ಪು ನಾವಿನ ಮುನ್ನ ಪ್ರಥಮ ಚಿಕಿತ್ಸೆಗಾಗಿ ರಮಣಶ್ರೀ ಆಸ್ಪತ್ರೆಗೆ ಬಂದಿದ್ದು, ಅಲ್ಲಿ ನಡೆದ ಪ್ರಕ್ರಿಯೆಗಳ ಕುರಿತು ಅವರು ಸವಿವರವಾಗಿ ಮಾಹಿತಿ ನೀಡಿದ್ದಾರೆ. ಅಂದು ಅಪ್ಪು ಬೆಳಗ್ಗೆ 11-15 ರಂದು ಆಸ್ಪತ್ರೆಗೆ ಬಂದರು. ನಾನು ಎಲ್ಲ ರೀತಿಯ ಟೆಸ್ಟ್​ಗಳನ್ನೂ ಮಾಡಿದೆ. ಆದರೆ ಅವರಿಗೆ ಆಗ ಎಲ್ಲವೂ ನಾರ್ಮಲ್​ ಇತ್ತು.

ಇನ್ನು ಇಸಿಜಿ ಮಾಡಿದಾಗ ಬಳಲಿರುವುದು ಕಂಡು ಬಂತು. ಆಗ ತಕ್ಷಣವೇ ಕೆಲವೊಂದು ಮಾತ್ರೆ ನೀಡಿ ವಿಕ್ರಂ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದೇನೆ. ಆಗ ತಕ್ಷಣವೇ ಅವರು ಅಲ್ಲಿಂದ ಹೊರಟಿದ್ದಾರೆ. ಇವೆಲ್ಲವೂ ಕೇವಲ 10 ರಿಂದ 15 ನಿಮಿಷಗಳಲ್ಲಿ ಮುಗಿದಿದೆ ಎಂದಿದ್ದಾರೆ.

ಆಂಬ್ಯುಲೈನ್ಸ್​ ವೈವಸ್ಥೆ ಮಾಡಲಿಲ್ಲವೇಕೆ?
ಇನ್ನು ವಿಕ್ರಂ ಆಸ್ಪತ್ರೆಗೆ ಆಂಬ್ಯಲೈನ್ಸ್​ನಲ್ಲಿ ಏಕೆ ಅಪ್ಪುವನ್ನು ಕಳುಹಿಸಲಿಲ್ಲ ಎಂಬ ಆರೊಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಕ್ರಂ ಆಸ್ಪತ್ರೆಯಿಂದ ಆಂಬ್ಯುಲೆನ್ಸ್​ ಬರಲು 15 ನಿಮಿಷಗಳು ಹಿಡಿಯುತ್ತಿತ್ತು. ಹೀಗಾಗಿ ತತ್​ಕ್ಷಣವೇ ಅವರದೇ ಕಾರಿನಲ್ಲಿ ಶಿಫ್ಟ್​ ಮಾಡಲಾಯಿತು.

ಅಪ್ಪು ನನಗೆ ಅಪ್ಪಾಜಿ ಎಂದು ಕರೆಯುತ್ತಿದ್ದರು. ಅವರು ನನ್ನ ಮಗನ ಸಮಾನ. ನನ್ನ ಮಗನಿಗೆ ಏನು ಚಿಕಿತ್ಸೆ ನೀಡುತ್ತಿದ್ದೇನೋ ಅದೇ ಚಿಕಿತ್ಸೆಯನ್ನು ಅಪ್ಪುಗೆ ನೀಡಿದ್ದೇನೆ. ಅಪ್ಪು ಆಸ್ಪತ್ರೆಗೆ ಬಂದಾಗ ಯಾವುದೇ ರೀತಿಯಲ್ಲಿ ಕಾಲಹರಣ ಆಗಿಲ್ಲ. ನಾನು ಅಟೆಂಡ್​​ ಮಾಡಿದ್ದ ಪೆಷೆಂಟ್​ಗೆ ರಿಕ್ವೆಸ್ಟ್​ ಮಾಡಿಕೊಂಡು ಅಪ್ಪುಗೆ ಟ್ರೀಟ್ಮೆಂಟ್ ಮಾಡಿದ್ದೇನೆ.

ದಿನ ಕಳೆದಂತೆ ಅಪ್ಪುವಿನ ಕುರಿತಾಗಿ ಎಲ್ಲ ವಿಚಾರಗಳು ಅವರ ಅಭಿಮಾನಿಗಳಿಗೆ ಅರ್ಥವಾಗುತ್ತದೆ. ಸದ್ಯ ಅವರು ನೋವಿನಲ್ಲಿರೋದ್ರಿಂದ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಮಂದೆ ಎಲ್ಲವೂ ಸರಿ ಹೋಗುತ್ತೆ ಎಂದಿದ್ದಾರೆ.

News First Live Kannada


Leave a Reply

Your email address will not be published. Required fields are marked *