‘ರಮೇಶ್​​​​ ಜಾರಕಿಹೊಳಿ ರಾಕ್ಷಸ’ ಎಂದ ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್


ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿಯ‌ನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪರೋಕ್ಷವಾಗಿ ರಾಕ್ಷಸನಿಗೆ ಹೋಲಿಸಿದ್ದಾರೆ.

ಬೆಳಗಾವಿ ತಾಲೂಕಿನ ಮಾವಿನಕಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎರಡು ವರ್ಷದ ಹಿಂದೆಯೇ ನಾಲ್ಕೂವರೆ ಕೋಟಿ ರೂಪಾಯಿ ಟೆಂಡರ್ ಆಗಿ ವರ್ಕ್ ಆರ್ಡರ್ ಆಗಿತ್ತು. ಆದ್ರೆ ರಮೇಶ್ ಜಾರಕಿಹೊಳಿ ನೀರಾವರಿ ಮಂತ್ರಿ ಆದ ತಕ್ಷಣ ಬೆಳಗಾವಿ ಗ್ರಾಮೀಣಕ್ಕೆ ಮಂಜೂರಾದ ಎಲ್ಲ ಅನುದಾನವನ್ನ ನಿಲ್ಲಿಸಿದ್ರು. ಸದ್ಯ ಹದಿನೈದು ದಿನಗಳ ಹಿಂದೆ ಸಿಎಂ ಬೊಮ್ಮಾಯಿ ಸಾಹೇಬ್ರಿಗೆ ರಿಕ್ವೆಸ್ಟ್ ಮಾಡಿಕೊಂಡ ಮೇಲೆ ನಮಗೆ ಅನುಕೂಲ ಮಾಡಿಕೊಟ್ರು. ಇದ್ರಿಂದ ಈಗ ಮಾವಿನಕಟ್ಟಿ ಮಗಳಾಗಿ ನಾನು ಹೇಳಿದ ಕೆಲಸವನ್ನ ಮಾಡಿದ್ದೇನೆ.

ಇನ್ನು ಜೀವನದಲ್ಲಿ ಆಗಾಗ ರಾಕ್ಷಸರು ಬರ್ತಿರ್ತಾರೆ ಆದ್ರೆ ನಿಮ್ಮ ಆಶೀರ್ವಾದ ಇರೋ ತನಕ ನಾನು ಕೆಲಸ ಮಾಡ್ತೇನೆ ಅಂತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಮೇಶ್ ಜಾರಕಿಹೊಳಿಯನ್ನ ಪರೋಕ್ಷವಾಗಿ ರಾಕ್ಷಸನಿಗೆ ಹೋಲಿಸಿದ್ದಾರೆ.

 

News First Live Kannada


Leave a Reply

Your email address will not be published. Required fields are marked *