ಬೆಂಗಳೂರು: ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ(ಎಸ್‍ಐಟಿ) ತನ್ನ ಅಂತಿಮ ತನಿಖಾ ವರದಿಯನ್ನು ಹೈಕೋರ್ಟ್‍ಗೆ ಸಲ್ಲಿಕೆ ಮಾಡಿದೆ.

ಈಗಾಗಲೇ ಮೂರು ತಿಂಗಳಿನಿಂದ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸುತ್ತಿದ್ದ ಮುಖ್ಯ ನ್ಯಾಯಮೂರ್ತಿಗಳು ಫೈನಲ್ ರಿಪೋರ್ಟ್ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದ್ದರು.

ನ್ಯಾಯಾಲಯಕ್ಕೆ ಕೇವಲ ರಮೇಶ್ ಜಾರಕಿಹೊಳಿ ಅತ್ಯಾಚಾರ ಪ್ರಕರಣ ಮಾತ್ರ ಅಲ್ಲದೇ ಸದಾಶಿವನಗರ ಬ್ಲಾಕ್ ಮೇಲ್ ಕೇಸ್ ಗೆ ಸಂಬಂಧಪಟ್ಟಂತೆ ಅಂತಿಮ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ : ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮುಗಿದ ಅಧ್ಯಾಯ: ರಮೇಶ್ ಜಾರಕಿಹೊಳಿ

ಕುತೂಹಲ ಅಂದರೆ ಮಂಗಳವಾರ ಅರ್ಜಿ ಮತ್ತೆ ಹೈಕೋರ್ಟ್ ಅಲ್ಲಿ ವಿಚಾರಣೆಗೆ ಬರಲಿದ್ದು, ನಿರ್ಣಾಯಕ ಹಂತದ ವಿಚಾರಣೆ ಇದಾಗಲಿದೆ. ಫೈನಲ್ ರಿಪೋರ್ಟ್ ಆಲಿಸುವ ನ್ಯಾಯಾಲಯ ಯಾವ ಆದೇಶ ನೀಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

The post ರಮೇಶ್ ಜಾರಕಿಹೊಳಿ ಕೇಸ್ : ಹೈಕೋರ್ಟ್‍ಗೆ ಫೈನಲ್ ರಿಪೋರ್ಟ್  ಸಲ್ಲಿಕೆ appeared first on Public TV.

Source: publictv.in

Source link