ಬೆಂಗಳೂರು: ದೆಹಲಿಗೆ ತೆರಳಿದ್ದ ಗೋಕಾಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಕಳೆದ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ.

ರಮೇಶ್ ಜಾರಕಿಹೊಳಿ ವಿರುದ್ಧದ ಸಿ.ಡಿ ಬಹಿರಂಗ ಆರೋಪ ಪ್ರಕರಣದ ಹಿನ್ನೆಲೆ ದೆಹಲಿಗೆ ತೆರಳಿದ್ದರು ಎನ್ನಲಾಗಿತ್ತು. ನಿನ್ನೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿರೋ ಅವರು, ಸದಾಶಿವನಗರದ ನಿವಾಸಕ್ಕೆ ಬಂದು ವಾಸ್ತವ್ಯ ಹೂಡಿದ್ದಾರೆ. ಇಂದು ರಮೇಶ್​ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ‌ ಆಗುವ ಸಾಧ್ಯತೆಗಳಿವೆ.

ದೆಹಲಿ ಭೇಟಿ ಬಹುತೇಕ ಸಫಲ
ರಮೇಶ್ ಜಾರಕಿಹೊಳಿಯ ದೆಹಲಿ ದಂಡಯಾತ್ರೆ ಬಹುತೇಕ ಸಫಲವಾಗಿದೆ ಅಂತ  ಆಪ್ತ ಮೂಲಗಳು ಮಾಹಿತಿ ನೀಡಿವೆ. ದೆಹಲಿಗೆ ತೆರಳಿದ್ದ ರಮೇಶ್ ಜಾರಕಿಹೊಳಿ, ದೇವೆಂದ್ರ ಫಡ್ನವಿಸ್‌ರನ್ನು ಭೇಟಿಯಾಗಿ ವಾಪಸ್ ಆಗಿದ್ದಾರೆ. ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ದೆಹಲಿಯಿಂದ ಬಂದು, ಸಿಎಂರನ್ನು ಭೇಟಿಯಾಗಿ ಬೆಳಗಾವಿ ಹಿಂತಿರುಗಲಿದ್ದಾರೆ. ಬೆಳಗಾವಿಗೆ ಬಂದು ಸುದ್ದಿಗೋಷ್ಟಿ ನಡೆಸುವ ಸಾಧ್ಯತೆಯಿದೆ. ಇಲ್ಲವಾದ್ರೆ, ಬೆಂಗಳೂರಿನಲ್ಲೇ ಸಿಎಂ ಭೇಟಿ ಬಳಿಕ ಮಾಧ್ಯಮಗಳ ಮುಂದೆ ರಮೇಶ್ ಜಾರಕಿಹೊಳಿ ಹಾಜರಾಗಬಹುದು ಎನ್ನಲಾಗ್ತಿದೆ.

 

The post ರಮೇಶ್ ಜಾರಕಿಹೊಳಿ ದೆಹಲಿ ದಂಡಯಾತ್ರೆ ಬಹುತೇಕ ಸಫಲ, ಇಂದು ಸಿಎಂ ಭೇಟಿ ಸಾಧ್ಯತೆ appeared first on News First Kannada.

Source: newsfirstlive.com

Source link