ರಮೇಶ್ ಜಾರಕಿಹೊಳಿ ಮಂಚದಲ್ಲೇ ಮಾತಾಡಿದಾಗ ಬಿಜೆಪಿಗರ ಧ್ವನಿ ಬಿದ್ದುಹೋಗಿತ್ತಾ? -ಡಿಕೆಎಸ್ ಪ್ರಶ್ನೆ

ಬೆಂಗಳೂರು: ಡಿ.ಕೆ.ಶಿವಕುಮಾರ್ ಕಮೀಷನ್ ಗಿರಾಕಿ ಎಂದಿದ್ದ ಕೆಪಿಸಿಸಿ ಮಾಧ್ಯಮ ಸಂಯೋಜಕ ಎಂ.ಎ.ಸಲೀಂ ಅವರನ್ನ ಉಚ್ಛಾಟನೆ ಮಾಡಲಾಗಿದೆ. ಇದೇ ವಿಚಾರವಾಗಿ ಡಿಕೆ ಶಿವಕುಮಾರ್​​ಗೆ ಸಲೀಂ ಕ್ಷಮೆ ಕೂಡ ಕೇಳಿದ್ದಾರೆ.

ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್​.. ಯಾರ್ಯಾರು ಏನು ಹೇಳಬೇಕು ಹೇಳಿದ್ದಾರೆ. ಹೇಳಿಕೆಯನ್ನು‌ ಯಾರ್ಯಾರು ಹೇಗೆ ಬಳಸಿಕೊಳ್ಳಬೇಕು ಬಳಸಿಕೊಂಡಿದ್ದಾರೆ. ನಾನು ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ. ಅವರವರ ಅರಿವಿಗೆ, ಚಿಂತನೆಗೆ ಬಿಡುತ್ತೇನೆ. ಇದು ನನ್ನ ವೈಯಕ್ತಿಕ ವಿಚಾರ ಅಲ್ಲ. ಇದು ಪಕ್ಷದ ವಿಚಾರ, ಅರಿವಿಗೆ ತಕ್ಕಂತಿರಲಿ ಎಂದಿದ್ದಾರೆ.

ಸಲೀಂ ಪರ್ಸೆಂಟೇಜ್ ಆರೋಪ ಬಿಜೆಪಿಗೆ ಅಸ್ತ್ರವಾದ ವಿಚಾರಕ್ಕೆ ಪ್ರತಿಕ್ರಿಯಿಸಿ.. ಯಡಿಯೂರಪ್ಪ ವಿರುದ್ಧ ಅವರ ಪಕ್ಷದವರು ಮಾತನಾಡಿಲ್ವಾ? ಯಡಿಯೂರಪ್ಪ, ವಿಜಯೇಂದ್ರ, ಅವರ ಕುಟುಂಬದ ಬಗ್ಗೆ ಮಾತನಾಡಿದ್ದರು. ಯತ್ನಾಳ್, ಹೆಚ್.ವಿಶ್ವನಾಥ್ ಆರೋಪ ಮಾಡಿದ್ದರು. ರಮೇಶ್ ಜಾರಕಿಹೊಳಿ ಮಂಚದಲ್ಲೇ ಮಾತನಾಡಿದ್ದರು. ಸಿ.ಪಿ.ಯೋಗೇಶ್ವರ್ ಕೂಡ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು. ಆಗ ಬಿಜೆಪಿ ನಾಯಕರ ಧ್ವನಿ ಬಿದ್ದುಹೋಗಿತ್ತಾ? ಯಾಕೆ ಅವರ ಮುಖಂಡರ ಬಗ್ಗೆ ಮಾತನಾಡಲಿಲ್ಲ? ತಮ್ಮ ನಾಯಕರ ಭ್ರಷ್ಟಾಚಾರದ ಬಗ್ಗೆ ಸ್ವರವೇ ಬರಲಿಲ್ಲ ಎಂದು ಡಿಕೆಎಸ್​ ಕಿಡಿಕಾರಿದರು.

ಇದನ್ನೂ ಓದಿ: ದೊಡ್ಡ ತಪ್ಪಾಗಿದೆ, ಯಾವ ಮುಖ ಇಟ್ಕೊಂಡು DKS ಭೇಟಿಯಾಗಲಿ -ಕಣ್ಣೀರಿಟ್ಟ ಸಲೀಂ

The post ರಮೇಶ್ ಜಾರಕಿಹೊಳಿ ಮಂಚದಲ್ಲೇ ಮಾತಾಡಿದಾಗ ಬಿಜೆಪಿಗರ ಧ್ವನಿ ಬಿದ್ದುಹೋಗಿತ್ತಾ? -ಡಿಕೆಎಸ್ ಪ್ರಶ್ನೆ appeared first on News First Kannada.

News First Live Kannada

Leave a comment

Your email address will not be published. Required fields are marked *