ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರದ ಬಗ್ಗೆ ಕಾಂಗ್ರೆಸ್​ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿ.. ಅದು ಬಿಜೆಪಿಗೆ ಸಂಬಂಧಪಟ್ಟ ವಿಚಾರ. ಜನ ನೋಡುತ್ತಿದ್ದಾರೆ ಎಂದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿ ಬಗ್ಗೆ ಮಾತನಾಡಿ.. ಮಧ್ಯಂತರ ಚುನಾವಣೆ ಬಗ್ಗೆ ಭವಿಷ್ಯ ಹೇಳಲ್ಲ. ಕಾಂಗ್ರೆಸ್ ಪಕ್ಷದ ಗೊಂದಲದ ಬಗ್ಗೆ ಹೈಕಮಾಂಡ್ ಗಮನಿಸಲಿದೆ. ಕಾಂಗ್ರೆಸ್​ನಲ್ಲಿ ಯಾರೇ ಸಿಎಂ ಆದರೂ ಹೃದಯಪೂರ್ವಕ ಸ್ವಾಗತ. 2023 ಜನರಿಗೆ ಒಳ್ಳೆಯದು ಆಗಲು ಕಾಂಗ್ರೆಸ್ ಸರ್ಕಾರ ರಚನೆ ಆಗಬೇಕು. ಹೈಕಮಾಂಡ್ ನಿರ್ಧರಿಸುವ ವ್ಯಕ್ತಿ ಸಿಎಂ ಆಗಲಿದ್ದಾರೆ ಎಂದರು.

The post ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ: ಜನ ಎಲ್ಲವನ್ನೂ ನೋಡುತ್ತಿದ್ದಾರೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್ appeared first on News First Kannada.

Source: newsfirstlive.com

Source link