ಹೈಕೋರ್ಟ್
ಬೆಂಗಳೂರು: ಬಿಜೆಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಮತ್ತು ಸುಲಿಗೆ ಆರೋಪದ ಪ್ರತಿದೂರು ಕುರಿತ ವರದಿಗಳನ್ನು ಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ಬೆಂಗಳೂರು ಪೊಲೀಸ್ ವಿಶೇಷ ತನಿಖಾ ತಂಡದ ಮುಖ್ಯಸ್ಥರಿಗೆ ಸೂಚಿಸಿದೆ. ಈ ವರ್ಷದ ಆರಂಭದಲ್ಲಿ ಜುಲೈನಲ್ಲಿ ಎಸ್‌ಐಟಿಯು ಲೈಂಗಿಕ ದೌರ್ಜನ್ಯ ಮತ್ತು ಸುಲಿಗೆ ದೂರುಗಳ ತನಿಖೆಯ ವರದಿಗಳನ್ನು ಹೈಕೋರ್ಟ್‌ಗೆ ಸಲ್ಲಿಸಿದಾಗ ಅವುಗಳನ್ನು ಕೆಳ ಅಥವಾ ಅಧೀನ ನ್ಯಾಯಾಲಯದಲ್ಲಿ ಸಲ್ಲಿಸಲು ಅನುಮತಿ ಕೋರಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಮೇ ಯಿಂದ ಜುಲೈ ವರೆಗೆ ತನಿಖೆಯ ಪ್ರಮುಖ ಭಾಗಕ್ಕೆ ರಜೆಯ ಮೇಲೆ ಎಸ್‌ಐಟಿ ಮುಖ್ಯಸ್ಥರು ಗೈರಾಗಿದ್ದಾರೆ. ಹೀಗಾಗಿ ಈ ಬಗ್ಗೆ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ತನಿಖೆ ನಡೆಸಿದ ನಂತರ ತನಿಖಾ ವರದಿಗಳನ್ನು ಮರು ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಎಸ್‌ಐಟಿಗೆ ಹೇಳಿದೆ. ತನಿಖೆಯ ಅಂತಿಮ ವರದಿಗಳನ್ನು ಸೂಕ್ತ ಆದೇಶಕ್ಕಾಗಿ ಎಸ್‌ಐಟಿ ಮುಖ್ಯಸ್ಥರ ಮುಂದೆ ಇಡಬೇಕಿತ್ತು. ಹೀಗಾಗಿ ಎಸ್‌ಐಟಿ ಮುಖ್ಯಸ್ಥರು ತನಿಖಾ ವರದಿಯನ್ನು ಪರಿಶೀಲಿಸಿ ವರದಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯ ಸಲ್ಲಿಸಲು ಮತ್ತು ಪ್ರಕರಣದ ವಿಚಾರಣೆಯನ್ನು ನವೆಂಬರ್ 29 ಕ್ಕೆ ಕರ್ನಾಟಕ ಹೈಕೋರ್ಟ್ ಮುಂದೂಡಿದೆ.
ಎಸ್‌ಐಟಿ ತನಿಖೆಯ ಅಂತಿಮ ವರದಿಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಲು ಅನುಮತಿ ನೀಡುವಂತೆ ರಾಜ್ಯ ಅಡ್ವಕೇಟ್ ಜನರಲ್ ಮಾಡಿದ ಮನವಿಯನ್ನು ಕರ್ನಾಟಕ ಹೈಕೋರ್ಟ್ ಪುರಸ್ಕರಿಸಿಲ್ಲ. ಬದಲಾಗಿ ಜುಲೈ 27 ರಂದು, ಬಿಜೆಪಿ ಶಾಸಕರ ವಿರುದ್ಧದ ಅತ್ಯಾಚಾರದ ಆರೋಪದ ತನಿಖೆಯಲ್ಲಿ ಅಂತಿಮ ವರದಿ ಸಲ್ಲಿಸದಂತೆ ಮತ್ತು ಶಾಸಕರು ಮಾಡಿದ ಸುಲಿಗೆ ಆರೋಪಗಳ ಸಮಾನಾಂತರ ತನಿಖೆ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ.
ಮಾರ್ಚ್ 2 ರಂದು ದೂರದರ್ಶನ ವಾಹಿನಿಗಳಲ್ಲಿ ಲೈಂಗಿಕ ಸಿಡಿ ಪ್ರಸಾರವಾದ ನಂತರ ಮಾರ್ಚ್ 3 ರಂದು ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ನಂತರ ಎಸ್‌ಐಟಿ ಜುಲೈ 19 ರಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಂತ್ರಸ್ತೆ ಮಾಡಿದ ಲೈಂಗಿಕ ದೌರ್ಜನ್ಯದ ಆರೋಪ ಮತ್ತು ಮಾಜಿ ಸಚಿವರು ಮಾಡಿದ ಸುಲಿಗೆ ಆರೋಪಗಳ ತನಿಖೆಯ ಪ್ರಗತಿಯ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿತು.
ತನಿಖೆಯ ಸಂದರ್ಭದಲ್ಲಿ ಎಸ್‌ಐಟಿ ಮುಖ್ಯಸ್ಥರು ಸುಮಾರು ಮೂರು ತಿಂಗಳ ಕಾಲ ರಜೆಯಲ್ಲಿದ್ದರೂ ಎಸ್‌ಐಟಿಯಿಂದ ತನಿಖೆ ಹೇಗೆ ನಡೆಸಲಾಯಿತು ಎಂದು ಸದ್ಯ ಹೈಕೋರ್ಟ್ ಪ್ರಶ್ನೆ ಎತ್ತಿದೆ.
ಇದನ್ನೂ ಓದಿ:
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಪಿಐಎಲ್ಗಳ ವಿಚಾರಣೆ
Dr K Sudhakar On Ramesh Jarkiholi : ರಮೇಶ್ ಜಾರಕಿಹೊಳಿ ಕೂಡ ಮನುಷ್ಯರೇ ಅಲ್ವಾ, ಅವರಿಗೂ ನೋವಾಗಿದೆ