ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬ್ಲ್ಯಾಕ್​ ಮೇಲ್ ಆರೋಪ ಹೊತ್ತಿರುವ ಆರೋಪಿಗಳ ನಿರೀಕ್ಷಣಾ ಜಾಮೀನು ಭವಿಷ್ಯ ಜೂನ್ 8ಕ್ಕೆ ನಿರ್ಧಾರವಾಗಲಿದೆ.

ರಮೇಶ್ ಜಾರಕಿಹೊಳಿಗೆ ಬ್ಲ್ಯಾಕ್‌ಮೇಲ್ ಆರೋಪ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್ ಕೋರ್ಟ್​ನಲ್ಲಿ ಎರಡೂ ಕಡೆ ವಾದ-ಪ್ರತಿವಾದ ಅಂತ್ಯಗೊಂಡಿದೆ. ನಿರೀಕ್ಷಣಾ ಜಾಮೀನು ಅರ್ಜಿದಾರರ, SIT ಪರ ವಕೀಲರ ವಾದ-ಪ್ರತಿವಾದ ಇಂದು ಮುಕ್ತಾಯವಾಗಿದೆ.

ಜೂನ್ 8ಕ್ಕೆ ಸಿಟಿ ಸಿವಿಲ್‌ ಕೋರ್ಟ್ ತೀರ್ಪುನ್ನ ಕಾಯ್ದಿರಿಸಿದೆ. ಆರೋಪಿ ನರೇಶ್ ಗೌಡ, ಶ್ರವಣ್ ನಿರೀಕ್ಷಣಾ ಜಾಮೀನು ಅರ್ಜಿಯ ಭವಿಷ್ಯ ಅಂದು ನಿರ್ಧಾರವಾಗಲಿದೆ.

The post ರಮೇಶ್ ಜಾರಕಿಹೊಳಿ ಸಿಡಿ ಕೇಸ್​; ಜೂ.8ಕ್ಕೆ ನರೇಶ್ ಗೌಡ, ಶ್ರವಣ್ ಭವಿಷ್ಯ appeared first on News First Kannada.

Source: newsfirstlive.com

Source link