ಬೆಂಗಳೂರು: ಕೊರೊನಾ ಅಬ್ಬರದ ನಡುವೆಯೂ ಇದೀಗ ಮಾಜಿ ಸಚಿವ ಎನ್ನಲಾದ ರಮೇಶ್ ಜಾರಕಿಹೋಳಿಯವರ ಸಿಡಿ ಕೇಸ್​ ಮತ್ತೆ ಬೆಳಕಿಗೆ ಬಂದಿದೆ. ​ಮತ್ತೊಮ್ಮೆ ಜಾರಕಿಹೊಳಿ ಮೇಲೆ ಗಂಭೀರ ಆರೋಪ ಮಾಡುತ್ತ ಸಂತ್ರಸ್ತ ಯುವತಿಯಿಂದ ಕಮಲ್ ಪಂತ್​ಗೆ ಮತ್ತೊಂದು ಪತ್ರವನ್ಗನ ಬರೆದಿದ್ದಾಳೆ. ರಮೇಶ್​ ಜಾರಕಿಹೊಳಿಯವರ ಕಡೆಯಿಂದ ಸಂತ್ರಸ್ತೆ ಪರ ವಕೀಲರಾದ ಸೂರ್ಯ ಮುಕುಂದರಾಜ್ ಮತ್ತು ಜಗದೀಶ್ ಕುಮಾರ್ ಅವರಿಗೆ ವಾಟ್ಸ್​​ಅಪ್​ ಕರೆ ಮಾಡಿ ಹಣದ ಆಫರ್​ನ್ನ ನೀಡಿದ್ದಾರೆ ಅಂತ ಆರೋಪಿಸಿದ್ದಾರೆ. ಈ ಕೂಡಲೇ ರಮೇಶ್​ ಜಾರೆಕಿಹೊಳಿಯವರನ್ನ ಬಂಧಿಸಿ ಅಂತ ಪತ್ರ ಬರೆದಿದ್ದಾಳೆ.

ರಮೇಶ್​ ಜಾರಕಿಹೊಳಿ ಮಗನ ಸ್ನೇಹಿತನಿಂದ ಆಫರ್​?
ಸಾಕ್ಷ್ಯ ನಾಶ ಮಾಡಲು ರಮೇಶ್ ಜಾರಕಿಹೊಳಿ ಯತ್ನಿಸ್ತಾಯಿದ್ದಾರೆ. ಸಂತ್ರಸ್ತೆ ಪರ ವಕೀಲರಿಗೆ ರಮೇಶ್​ ಜಾರಕಿಹೊಳಿ ಮಗ ಅಮರ್ ನಾಥ್ ಜಾರಕಿಹೊಳಿಯ ಸ್ನೇಹಿತ ಎಂದು ಫೋನ್​ ಕರೆ ಮಾಡಿದ್ದ ಪ್ರದೀಪ್ ಕೋಟಿಗಟ್ಟಲೇ ಆಫರ್ ನೀಡಿದ್ದಾನೆ. 15 ದಿನಗಳಿಂದ ವಕೀಲರಿಗೆ ಫೋನ್​ ಮಾಡಿ ಕೋಟಿ ಕೋಟಿ ಆಮಿಷ ಒಡ್ಡಿದ್ದಾರೆ. ಪ್ರಭು ಪಾಟೀಲ್​ ಎಂಬಾತ ಪ್ರದೀಪ್​ ಹೆಸ್ರಲ್ಲಿ ವಕೀಲರಿಗೆ ಕರೆ ಮಾಡಿದ್ದಾನೆ. ವಕೀಲರು ಯಾವಾಗ ಇಈ ವಿಷಯವನ್ನ ತನಿಖಾಧಿಕಾರಿಗಳ ಗಮನಕ್ಕೆ ತರ್ತಿನಿ ಅಂತ ಹೇಳಿದ್ರೋ, ಆ ಕೂಡಲೇ ಫೋನ್​ ಕರೆಯನ್ನ ಕಟ್​ ಮಾಡಿದ್ದಾನೆ ಅಂತ ಸಂತ್ತಸ್ತ ಯುವತಿ ದೂರಿನಲ್ಲಿ ಗಂಭೀರವಾಗಿ ಆರೋಪಿಸಿದ್ದಾಳೆ.

The post ರಮೇಶ್ ಜಾರಕಿಹೊಳಿ ಸಿಡಿ ಕೇಸ್; ಸಂತ್ರಸ್ತೆಯಿಂದ ಕಮಿಷನರ್​ಗೆ ಬಂತು ಮತ್ತೊಂದು ಪತ್ರ appeared first on News First Kannada.

Source: newsfirstlive.com

Source link