ಒನ್ ಆಂಡ್ ಓನ್ಲಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ನಟನೆಯ ಕನ್ನಡಿಗ ಚಿತ್ರದ ಶೂಟಿಂಗ್ ಕೆಲಸ ಮತ್ತೆ ಚುರುಕಾಗಿದೆ. ಎರಡನೇ ಲಾಕ್ ಡೌನ್ ಆದ ಕಾರಣ ಒಂದಷ್ಟು ಶೂಟಿಂಗ್ ಬಾಕಿ ಉಳಿಸಿಕೊಂಡಿದ್ದ ಕನ್ನಡಿಗ ಸಿನಿಮಾ ತಂಡ ಮತ್ತೆ ಚಿತ್ರೀಕರಣದತ್ತ ಮುಖ ಮಾಡಿದೆ.
ಆಲ್ ಮೋಸ್ಟ್ ಆಲ್ ಟಾಕಿ ಪೋಷನ್ ಮುಗಿಸಿದ್ದ ಬಿ.ಎಮ್​.ಗಿರಿರಾಜ್ ನಿರ್ದೇಶನದ ಕನ್ನಡಿ ಸಿನಿಮಾ ತಂಡ ಈಗ ಹಾಡುಗಳ ಚಿತ್ರೀಕರಣಕ್ಕೆ ಅಣಿಯಾಗಿದೆ. ಕನ್ನಡಿಗ ಸಿನಿಮಾ ಹಾಡಿನ ಚಿತ್ರೀಕರಣದ ವಿಶೇಷವೆಂದ್ರೆ ರವಿಚಂದ್ರನ್ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡಿರೋದು.

ಹೌದು.. ಶಿವರಾಜ್ ಕುಮಾರ್ , ಕನಸುಗಾರನ ರವಿಮಾಮನ ನಿರೀಕ್ಷಿತ ಸಿನಿಮಾ ಕನ್ನಡಿಗ ಸಿನಿಮಾದ ಜನಪದ ಶೈಲಿಯ ಟೈಟಲ್ ಟ್ರ್ಯಾಕ್ ಒಂದಕ್ಕೆ ಹಿನ್ನಲೆ ಧ್ವನಿಯಾಗಿದ್ದಾರೆ. ಈ ಹಾಡಿನ ಚಿತ್ರೀಕರಣ ಶುರುವಾಗಿದ್ದು ಹನುಮ ಭಕ್ತ ನಿರ್ದೇಶಕ ಎ.ಹರ್ಷ ನೃತ್ಯ ಸಂಯೋಜನೆಯಲ್ಲಿ ಹಾಡು ಚಿತ್ರೀಕರಣವಾಗಲಿದೆ.

ಸುಮಾರು 40 ವರ್ಷದಿಂದಲೂ ರವಿಚಂದ್ರನ್ ಹಾಗೂ ಶಿವಣ್ಣ ಉತ್ತಮ ಸ್ನೇಹಿತರು. ಈ ಇಬ್ಬರು ಹಿಂದೆ ಒಟ್ಟಿಗೆ ‘ಕೋಂದಂಡ ರಾಮ’ ಸಿನಿಮಾದಲ್ಲಿ ನಟಿಸಿದ್ದರು. ಈಗ ರವಿಚಂದ್ರನ್ ಅವರ ಚಿತ್ರಕ್ಕೆ ಶಿವಣ್ಣ ಹಾಡುತ್ತಿರೋದು ಅಭಿಮಾನಿಗಳಿಗೆ ಖುಷಿಯ ವಿಚಾರ.

The post ರವಿಚಂದ್ರನ್ ‘ಕನ್ನಡಿಗ’ ಸಿನಿಮಾಗೆ​ ಶಿವಣ್ಣನ ಗಾಯನ​​​​.. ಜನಪದ ಶೈಲಿಯ ಹಾಡು ಕೇಳೋಕೆ ನೀವ್ ರೆಡೀನಾ..? appeared first on News First Kannada.

Source: newsfirstlive.com

Source link