ರವಿಮಾಮಾ ಪ್ರೇಕ್ಷಕ ಪ್ರಭುಗಳಿಗೆ ಕೇಳಿದ ವರವೇನು ಗೊತ್ತಾ? ನೀವು ಈ ಕೋರಿಕೆ ಈಡೇರಿಸ್ತೀರಾ?


ಕನ್ನಡ ಚಿತ್ರರಂಗದಲ್ಲಿ ಕಲಾ ಸೇವೆಗೆ ಮೀಸಲಾಗಿರುವ ಕುಟುಂಬಗಳು ಅಂದ್ರೆ ಥಟ್​ ಅಂತ ನೆನಪಾಗೋದು ಒಂದು ದೊಡ್ಮನೆ, ಮತ್ತೊಂದು ನಿರ್ಮಾಪಕ ವೀರಸ್ವಾಮಿಯವರ ಕುಟುಂಬ. ಅದರಲ್ಲೂ ವೀರಸ್ವಾಮಿ ಅವರ ಸುಪುತ್ರ ಕ್ರೇಜಿಸ್ಟಾರ್​ ರವಿಚಂದ್ರನ್​ ನಿದ್ರೆಯಲ್ಲೂ ಸಿನಿಮಾ ಬಗ್ಗೆ ಕನಸು ಕಾಣೋ ಕನಸುಗಾರ..ಈಗ ಈ ಕನಸುಗಾರನ ಕುಡಿಯ ಚಿತ್ರ ಮುಗಿಲ್​ಪೇಟೆ ರಿಲೀಸ್​​ಗೆ ಸಿದ್ದವಾಗಿದ್ದು, ಈ ಸುಸಂದರ್ಭದಲ್ಲಿ ಮುಗಿಲ್​ ಪೇಟೆ ಬಳಗದ ಸಮ್ಮುಖದಲ್ಲಿ ಕ್ರೇಜಿಸ್ಟಾರ್​ ರವಿಚಂದ್ರನ್​ ತನ್ನ ಮಗನಿಗಾಗಿ ಅಭಿಮಾನಿ ದೇವರುಗಳಲ್ಲಿ ವರ ಕೇಳಿದ್ದಾರೆ.. ಆ ವರವಾದ್ರು ಏನು ಗೊತ್ತಾ?

ಸ್ಯಾಂಡಲ್​ವುಡ್​ನ ಸಾಹೇಬ ಜೂನಿಯರ್​ ಕ್ರೇಜಿಸ್ಟಾರ್​‘ ಮುಗಿಲ್​ ಪೇಟೆ’ ಚಿತ್ರದ ಮೂಲಕ ಅದೃಷ್ಟ ಪರಿಕ್ಷೇಗೆ ಸಿದ್ದರಾಗಿದ್ದಾರೆ..ಈಗಾಗಲೇ ಟ್ರೈಲರ್​ ಹಾಗೂ ಹಾಡುಗಳಿಂದ‘ಮುಗಿಲ್ ಪೇಟೆ’ ಸಿನಿಮಾ ಚಿತ್ರಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ.. ಅಲ್ಲದೆ ಚಿತ್ರತಂಡ ಕೂಡ ಭರ್ಜರಿ ಪ್ರಚಾರದ ಮೂಲಕ ಮುಗಿಲ್​ ಪೇಟೆಗೆ ಪ್ರೇಕ್ಷಕ ಮಹಾ ಪ್ರಭುಗಳನ್ನು ಕರೆದೊಯ್ಯಲು ಸಿದ್ದವಾಗಿದೆ..

ರಾಜ್ಯಾದ್ಯಂತ ಪ್ರವಾಸ ಮಾಡಿರುವ ಚಿತ್ರತಂಡ  ಮಾಧ್ಯಮಗಳ ಮುಂದೆ ಹಾಜರಾಗಿದ್ರು.. ಈ ಕುಟುಂಬಕ್ಕೆ ಯಜಮಾನನಾಗಿ ರವಿಮಾಮ ಮುಂದಾಳತ್ವ ವಹಿಸಿದ್ರು.. ಅಲ್ಲದೆ ಮುಗಿಲ್​ ಪೇಟೆ ಕುಟುಂಬದ ಸಮ್ಮುಖದಲ್ಲೇ ಕನಸುಗಾರ ರವಿಚಂದ್ರನ್​ ತನ್ನ ಮಗ ಮನುಗಾಗಿ ಅಭಿಮಾನಿ ದೇವರುಗಳಲ್ಲಿ ಒಂದು ವರ ಕೇಳಿದ್ದಾರೆ ನೋಡಿ.. ನನ್ನ ಮಕ್ಕಳೆಂದುಕೊಂಡು ಸಿನಿಮಾ ನೋಡಲು ಬರಬೇಡಿ ಅವರು ಬೆಳಿಯಬೇಕು ಅವನಲ್ಲಿ ಪ್ರತಿಭೆ ಇದ್ದರೆ ಅವನು ಬೆಳೆಯುತ್ತಾನೆ ಹಾಗಾಗಿ ರವಿಚಂದ್ರನ್​ ಮಗನ ಸಿನಿಮಾ ಅಂದುಕೊಳ್ಳಬೇಡಿ ಎಂದಿದ್ದಾರೆ.

‘ಮುಗಿಲ್​ ಪೇಟೆ ’ ಅವಿಭಕ್ತ ಕುಟುಂಬದಂತಿದ್ದು ಬಹು ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ.. ಭರತ್​ ನವುಂದ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ರಂಗಾಯಣ ರಘು ವಿಭಿನ್ನ ಪಾತ್ರದಲ್ಲಿ ಕಾಣಸಿದ್ದು, ಚಿತ್ರದ ಬಗ್ಗೆ ಹಾಗೂ ವೀರಸ್ವಾಮಿ ಅವರ ಕುಟುಂಬ ಸಿನಿಮಾ ಪ್ರೇಮದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಮುಗಿಲ್​ ಪೇಟೆ ಚಿತ್ರದ ಮೂಲಕ ಕಾಮಿಡಿ ಡಾನ್​ ಸಾಧು ಮಹಾರಾಜ್​ ಲಿಮ್ಕಾ ದಾಖಲೆ ಸೇರಲು ಸಜ್ಜಾಗಿದ್ದಾರೆ.. ಚಿತ್ರದಲ್ಲಿ 15 ಕ್ಕೂ ಶೇಡ್​ಗಳಲ್ಲಿ ಕಾಣಿಸಿರುವ ಸಾಧು ಕೋಕಿಲ ‘ಮುಗಿಲ್​ ಪೇಟೆ’ ಚಿತ್ರ ಹಾಗೂ ತಂಡದ ಎಫರ್ಟ್​ಬಗ್ಗೆ ಮೆಚ್ಚುಗೆ ಮಾತುಗಳನಾಡಿದ್ದಾರೆ..

ಮುಗಿಲ್​ ಪೇಟೆಯಲ್ಲಿ ಮನುಗೆ ಅಮ್ಮನಾಗಿ ಹಿರಯವ ನಟಿ ತಾರಾ ಕಾಣಿಸಿದ್ದಾರೆ.. ಕ್ರೇಜಿಸ್ಟಾರ್​ ಕುಟುಂಬದ ಸಿನಿಮಾ ಪ್ರೇತಿಗೆ ಮನಸೋತಿರುವ ತಾರ ಕನಸುಗಾರನ ಮಕ್ಕಳ ಡೆಡಿಕೇಶನ್​ ಗೆ ಫುಲ್​ ಮಾರ್ಕ್ಸ್​ ನೀಡಿದ್ದಾರೆ.. ಅಷ್ಟೇ ಅಲ್ಲ ಮನು ಮುಗಿಲ್​ ಪೇಟೆ ಚಿತ್ರದ ಮೂಲಕ ಗೆದ್ದೆ ಗೆಲ್ತಾನೆ ಅನ್ನೋ ಭವಿಷ್ಯ ನುಡಿದಿದ್ದಾರೆ.

ಇನ್ನು ಮುಗಿಲ್ ಪೇಟೆ ಚಿತ್ರದಲ್ಲಿ ಕವಲುದಾರಿ ಖ್ಯಾತಿಯ ರಿಷಿ ವಿಶೇಷ ಪಾತ್ರದಲ್ಲಿ ಕಾಣಿಸಿದ್ದು, ಪಾತ್ರದ ಬಗ್ಗೆ ಗುಟ್ಟು ಬಿಟ್ಟು ಕೊಡದೆ. ಮುಗಿಲ್​ ಪೇಟೆ ಜರ್ನಿಯ ಬಗ್ಗೆ ಮೆಲುಕು ಹಾಕಿದ್ದಾರೆ.

ಕ್ರೇಜಿಸ್ಟಾರ್​ ಪುತ್ರ ಮನು ‘ಮುಗಿಲ್​ ಪೇಟೆ ಚಿತ್ರಕ್ಕೆ ಸಖತ್ ಎಫರ್ಟ್ ಹಾಕಿದ್ದಾರೆ.. ಚಿತ್ರಕ್ಕಾಗಿ ಮನು ತನ್ನ ಹೆಸರು, ಲುಕ್​, ಚೇಂಜ್​ ಮಾಡಿಕೊಳ್ಳೋದ್ರ ಜೊತೆಗೆ ತನ್ ಪಾತ್ರಕ್ಕೆ ಡಬ್ಬಿಂಗ್​ ಮೂಲಕ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಮನುಗೆ ನಾಯಕಿಯಾಗಿ ಖಯಾದು ನಟಿಸಿದ್ದು, ಈ ಮುದ್ದಾದ ಜೋಡಿ ಸ್ಯಾಂಡಲ್​ ವುಡ್​ನಲ್ಲಿ ಮೋಡಿ ಮಾಡಲು ಸಿದ್ದವಾಗಿದೆ..

ಮನು ಮುಗಿಲ್​ ಪೇಟೆ ಚಿತ್ರವನ್ನು ತುಂಬಾ ಇಷ್ಟ ಪಟ್ಟು ಮಾಡಿರೋ ಕಾರಣ. ಈ ಸಿನಿಮಾವನ್ನು ಏನಾದರು ಮಾಡಿ ಪ್ರೇಕ್ಷಕ ಪ್ರಭುಗಳ ಮಡಿಲಿಗೆ ಸೇರಿಸಲೇ ಬೇಕೆಂಬ ಹಠದಲ್ಲಿ ಮನು ಜೊತೆ ಕ್ರೇಜಿಸ್ಟಾರ್​, ತಮ್ಮ ವಿಕ್ರಂ, ತಂಗಿ ಅಂಜಲಿ ಮನು ಬೆನ್ನಿಗೆ ನಿಂತಿದ್ದಾರೆ. ಅಲ್ಲದೆ ಈ ಚಿತ್ರವನ್ನು ಕೆಅರ್​ಜಿ ಸ್ಟೂಡಿಯೋ ಮೂಲಕ ರಾಜ್ಯಾದ್ಯಂತ ರಿಲೀಸ್​ ಆಗ್ತಿದ್ದು, ನಾಳೆ ಪ್ರೇಕ್ಷಕ ಮಹಾಪ್ರಭು ಮನು ಮುಗಿಲ್​ ಪೇಟೆಯ ಭವಿಷ್ಯ ಬರೆಯಲಿದ್ದಾರೆ.

News First Live Kannada


Leave a Reply

Your email address will not be published. Required fields are marked *