ಸ್ಯಾಂಡಲ್​​ವುಡ್​ ಖಳನಟರಾದ ಅನಿಲ್​, ಉದಯ್​ ಸಾವು ಬಹಳಷ್ಟು ಚರ್ಚೆಯನ್ನೇ ಎಬ್ಬಿಸಿಬಿಟ್ಟಿತ್ತು. ಅಷ್ಟೇ ಅಲ್ಲ, ಸ್ಟಂಟ್​ ಮಾಸ್ಟರ್​​ ರವಿವರ್ಮಾ ಮುಂದೆಂದೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಬಾರದು ಅನ್ನೋ ನಿರ್ಧಾರವನ್ನೇ ಮಾಡಲಾಗಿತ್ತು. ಈ ಘಟನೆಯಿಂದ ಮನನೊಂದ ರವಿವರ್ಮಾ ತಾವು ಪ್ರಾಣ ಕಳೆದುಕೊಳ್ಳೋದಕ್ಕೂ ಮುಂದಾಗಿದ್ದರು ಅಂತ ನ್ಯೂಸ್​ ಫಸ್ಟ್​​ ಜೊತೆ ಮಾತನಾಡುತ್ತಾ ಹೇಳಿಕೊಂಡಿದ್ದಾರೆ. ಅದಕ್ಕಿಂತಲೂ ಮುಖ್ಯವಾದ ಒಂದು ಸತ್ಯವನ್ನ ಎಕ್ಸ್​​ಕ್ಲೂಸಿವ್​ ಆಗಿ ನ್ಯೂಸ್​ ಫಸ್ಟ್​​ಗೆ ಬಿಚ್ಚಿಟ್ಟಿದ್ದಾರೆ.

ಹೌದು.. ಘಟನೆ ನಡೆದ ತಂಡದ ಜೊತೆಗಿದ್ದು ಉದಯ್​ ಹಾಗೂ ಅನಿಲ್​ ವಾಪಾಸ್ ಬರಬೇಕು ಅಂತ ಹಂಬಲಿಸುತ್ತಿದ್ದವರಲ್ಲಿ ರವಿವರ್ಮಾ ಕೂಡ ಒಬ್ಬರು. ಎಲ್ಲರೂ ಅವರನ್ನ ಹುಡುಕುವ ಕಾರ್ಯದಲ್ಲಿ ಮಗ್ನರಾಗಿದ್ರೆ, ಒಬ್ಬರು ಮಾತ್ರ ಸ್ಟಂಟ್​ ಮಾಸ್ಟರ್​ ರವಿವರ್ಮಾರನ್ನ ಜೈಲಿಗೆ ಕಳುಹಿಸುವ ಆತುರದಲ್ಲಿದ್ರಂತೆ. ಎಲ್ಲಿಂದಲೋ ನಟ ದುನಿಯಾ ವಿಜಿಗೆ ಕರೆ ಮಾಡಿ, ‘ಅದೇನು ಮಾಡ್ತೀರೋ ಗೊತ್ತಿಲ್ಲ. ಆದ್ರೆ ರವಿವರ್ಮಾ ಆಚೆ ಬರಬಾರದು’ ಅನ್ನೋ ಮಾತುಗಳನ್ನಾಡಿದ್ರು. ಆ ವ್ಯಕ್ತಿ ಯಾರು ಅನ್ನೋ ಬಗ್ಗೆ ರವಿವರ್ಮಾ ವಿವರವಾಗಿ ತಿಳಿಸದಿದ್ದರೂ, ಅದರಿಂದ ದೊಡ್ಡ ಪಾಠ ಕಲಿತಿರೋದಾಗಿ, ನೋವು ಪಟ್ಟಿರೋದಾಗಿ ಹೇಳಿಕೊಂಡಿದ್ದಾರೆ.

‘ಈ ಸನ್ನಿವೇಶದಿಂದ ನಾನು ವಿಲನ್​ ಆದೆ. ಆದ್ರೆ ಬಹಳ ಪಾಠ ಕಲಿತೆ. ಏನಾದ್ರು ತಗೊಂಡು ಸಾಯ್ಬೇಕು ಅಂತ ಫಿಕ್ಸ್​ ಆಗಿದ್ದೆ. ಈ ವಿಚಾರದಲ್ಲಿ ಯಾರದ್ದು ತಪ್ಪು ಅಂತ ಆ ದಿನ ಯಾರೂ ಯೋಚನೆ ಮಾಡಿಲ್ಲ. ಒಂದಷ್ಟು ಜನ ಯಾಱರೋ ದುನಿಯಾ ವಿಜಿಗೆ ಫೋನ್​ ಮಾಡಿ, ‘ಏನು ಮಾಡ್ತೀರೋ ಗೊತ್ತಿಲ್ಲ, ಆದ್ರೆ ರವಿವರ್ಮಾ **ಮಗ ಆಚೆ ಬರಬಾರದು’ ಅಂದ್ರಂತೆ. ಇನ್ನೂ ಅಲ್ಲಿ ಬಾಡಿ ಸಿಕ್ಕಿರಲಿಲ್ಲ, ಇಲ್ಲಿ ವಿಜಿಗೆ ಈ ಥರ ಕಾಲ್ಸ್​. ನಾನು ಜೈಲಿಗೆ ಹೋದ ಮೇಲೆ ಈ ಕಡೆ ಮೀಡಿಯಾದಲ್ಲಿ ಎಲ್ಲರೂ ಇನ್ನೊಂದು ಉತ್ತರ ಕೊಟ್ರು. ಅವರಿಬ್ಬರ ಫ್ಯಾಮಿಲಿಗೂ ತಲಾ ಒಂದು ಕೋಟಿ ಕೊಡ್ಬೇಕು ಇಲ್ಲಾ ಕೇಸ್​​ನ ಇನ್ನೂ ಉಲ್ಟಾ ಮಾಡ್ತೀವಿ ಅಂದ್ರು. ಇದಕ್ಕಿಂತ ಇನ್ನೇನು ಮಾಡ್ಬಹುದು?? ಏನಾಗುತ್ತೋ ನೋಡೇ ಬಿಡೋಣ, ಸರಿ ಗಲ್ಲಿಗೆ ಹಾಕ್ತೀರಾ.. ಹಾಕಿ ಅಂದೆ’ ಅಂತಾರೆ ಸ್ಟಂಟ್​​ ಮಾಸ್ಟರ್​ ರವಿವರ್ಮಾ.

The post ‘ರವಿವರ್ಮಾ **ಮಗ ಆಚೆ ಬರಬಾರ್ದು’ ಅಂತಾ ದುನಿಯಾ ವಿಜಿಗೆ ಫೋನ್ ಮಾಡಿದ್ರು appeared first on News First Kannada.

Source: newsfirstlive.com

Source link