ಚಿಕ್ಕಮಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಹೆಗ್ಗರವಳ್ಳಿ ಮನೆಯಲ್ಲಿ ಅವರಿಗೆ ಹೃದಯಘಾತ ಸಂಭವಿಸಿದ್ದು.. ತಕ್ಷಣ ಅಸ್ಪತ್ರೆಗೆ ರವಾನಿಸಲು ಪ್ರಯತ್ನಿಸಲಾಗಿದೆ.. ಆದ್ರೆ ದಾರಿ ಮಧ್ಯೆ ಸುನೀಲ್ ಹೆಗ್ಗರವಳ್ಳಿ ಕೊನೆಯುಸಿರೆಳೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯಲ್ಲಿ ಸುನೀಲ್ ಅವರಿಗೆ ಹೃದಯಾಘಾತ ಸಂಭವಿದ್ದು ತಕ್ಷಣ ಮೂಡಿಗೆರೆಯ ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯುವಾಗ ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಈ ಹಿಂದೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಸುನಿಲ್ ಕೆಲಸ ಮಾಡುತ್ತಿದ್ದರು. ದಿವಂಗರ ರವಿ ಬೆಳಗೆರೆಯವರಿಗೆ ಆತ್ಮೀಯರಾಗಿದ್ದರು.

The post ರವಿ ಬೆಳಗೆರೆ ಆಪ್ತ, ಪತ್ರಕರ್ತ ಸುನೀಲ್​ ಹೆಗ್ಗರವಳ್ಳಿ ಹೃದಯಾಘಾತದಿಂದ ಸಾವು appeared first on News First Kannada.

Source: newsfirstlive.com

Source link