ರವಿ ಶಾಸ್ತ್ರಿಗೆ ಟಿ20 ವಿಶ್ವಕಪ್​ ಪ್ರತಿಷ್ಠೆಯ ಟೂರ್ನಿ; ‘ಆ ಕನಸು’ ಈಡೇರಿಸಿಕೊಳ್ತಾರಾ ಕೋಚ್ ಶಾಸ್ತ್ರಿ.?

ರವಿ ಶಾಸ್ತ್ರಿ, ಟೀಮ್ ಇಂಡಿಯಾದ ಸಕ್ಸಸ್​​ಫುಲ್​ ಕೋಚ್.. ಟೀಮ್ ಇಂಡಿಯಾವನ್ನ ಯಶಸ್ಸಿನ ಉತ್ಸುಂಗದ ಹಾದಿಯಲ್ಲಿ ಮುನ್ನಡೆಸಿದ ಕೀರ್ತಿ, ಈ ದ್ರೋಣಾಚಾರ್ಯನಿಗೆ ಸೇರುತ್ತೆ. ಇದೀಗ ಈ ಯಶಸ್ವಿ ಕೋಚ್​ಗೆ, ಕೊನೆಯ ಅಗ್ನಿಪರೀಕ್ಷೆ ಗೆಲ್ಲುವ ಸವಾಲ್ ಎದುರಾಗಿದೆ.

ಶಾಸ್ತ್ರಿ ಆ್ಯಂಡ್​​​ ಟೀಮ್​ಗೆ​ ಟಿ20 ವಿಶ್ವಕಪ್ ಪ್ರತಿಷ್ಠೆ..!
ಟಿ20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ವಿಶ್ವಕಪ್​ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ವಿರಾಟ್​ ಬಾಯ್ಸ್​, ಇನ್ನೊಂದು ವಾರದಲ್ಲಿ ಟೀಮ್ ಇಂಡಿಯಾ ಕ್ಯಾಂಪ್ ಸೇರಲಿದ್ದಾರೆ. ಆದ್ರೆ ಇದಕ್ಕೂ ಮುನ್ನವೇ ಟೀಮ್ ಇಂಡಿಯಾ ಕೋಚಿಂಗ್ ಸ್ಟಾಫ್, ದುಬೈಗೆ ಹಾರಿದೆ.

ಸದ್ಯ ದುಬೈಗೆ ಹಾರಿರುವ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಶ್ರೀಧರ್​, ಅಕ್ಟೋಬರ್ 13ರ ತನಕ ಕ್ವಾರಂಟೀನ್​ಗೆ ಒಳಗಾಗಲಿದ್ದಾರೆ. ಬಳಿಕ ಟೀಮ್ ಇಂಡಿಯಾ ಆಟಗಾರರ ಜೊತೆ ಸೇರಲಿರೋ ತರಬೇತಿ ಸಿಬ್ಬಂದಿ, ಟಿ20 ವಿಶ್ವಕಪ್​ಗೆ ತಂತ್ರ-ರಣತಂತ್ರಗಳನ್ನ ಹೆಣಯಲಿದ್ದಾರೆ.

ಟಿ20 ವಿಶ್ವಕಪ್​ ಗೆಲುವಿಗೆ ಪಣತೊಟ್ಟ ಶಾಸ್ತ್ರಿ ಟೀಮ್..!
ಸದ್ಯ ದುಬೈಗೆ ಹಾರಿರುವ ಶಾಸ್ತ್ರಿ ಆ್ಯಂಡ್ ಟೀಮ್, ಟಿ20 ವಿಶ್ವಕಪ್ ಟೂರ್ನಿಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಅದ್ರಲ್ಲೂ ವಿಶ್ವಕಪ್​ ಬಳಿಕ ಕೋಚ್ ಹುದ್ದೆಯಿಂದ ನಿರ್ಗಮಿಸಲಿರುವ ಶಾಸ್ತ್ರಿ, ಶತಾಯ ಗತಾಯ ಟೀಮ್ ಇಂಡಿಯಾ ಮುಕುಟಕ್ಕೆ ವಿಶ್ವಕಪ್​ ಕಿರೀಟ ಮುಡಿಗೇರಿಸುವ ಶಪತ ಮಾಡಿದೆ.
2017ರಲ್ಲಿ ಕೋಚ್ ಹುದ್ದೆಗೇರಿದ್ದ ಶಾಸ್ತ್ರಿ, ತಮ್ಮ ಅಧಿಕಾರದ ಅವಧಿಯಲ್ಲಿ ಹಲವು ದಿಗ್ವಿಜಯಗಳನ್ನ ತಂದಿಟ್ಟಿದ್ದಾರೆ. ಆದ್ರೆ ಪ್ರಮುಖ ಐಸಿಸಿ ಟ್ರೋಫಿಗಳನ್ನ ಗೆದ್ದಿಲ್ಲ ಎಂಬ ಹಣೆಪಟ್ಟಿ ಬಿಟ್ಟರೆ, ಸ್ವದೇಶ, ವಿದೇಶಗಳಲ್ಲಿ ಉತ್ತಮ ಸಾಧನೆಯನ್ನೇ ಮಾಡಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಎರಡು ಪ್ರತಿಷ್ಠಿತ ಬಾರ್ಡರ್​ ಗವಾಸ್ಕರ್ ಟ್ರೋಫಿ ಗೆದ್ದು ಐತಿಹಾಸಿಕ ಸಾಧನೆ, ಜೊತೆಗೆ ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲೂ ಮೇಲುಗೈ ಸಾಧಿಸಿದೆ.

ಸತತ 5 ವರ್ಷಗಳಿಂದ ಟೆಸ್ಟ್​ ಕ್ರಿಕೆಟ್​ನ ಅಧಿಪತಿಯಾಗಿ ಮೆರೆಯುತ್ತಿದೆ. ಏಕದಿನ, ಟಿ20 ಫಾರ್ಮೆಟ್..​ ಹೀಗೆ ಪ್ರತಿಯೊಂದು ಮಾದರಿಯಲ್ಲಿ ಶ್ರೇಷ್ಠ ತಂಡವಾಗಿ ಗುರುತಿಕೊಂಡಿದೆ. ಇದರ ಹಿಂದೆ ಕೋಚ್ ರವಿ ಶಾಸ್ತ್ರಿ ಆ್ಯಂಡ್ ಟೀಮ್​ನ ಪರಿಶ್ರಮ ಮರೆಯುವಂತಿಲ್ಲ. ಆದ್ರೆ ಯಶಸ್ವಿ ಕೋಚ್​ ಆಗಿ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲೆಂಬ ಕೊರತೆ ಕಾಡುತ್ತಿದೆ. ಇದನ್ನೆಲ್ಲಾ ತೊಡೆದು ಹಾಕಲು ವಿಶ್ವಕಪ್​​ ಟ್ರೋಫಿ ಗೆದ್ದು ತೋರಿಸಬೇಕಾದ ಸವಾಲು ಶಾಸ್ತ್ರಿ ಆ್ಯಂಡ್ ಟೀಮ್ ಮುಂದಿದೆ. ಹೀಗಾಗಿ ನಿರ್ಗಮನದ ಮುನ್ನ ವಿಶ್ವಕಪ್ ಗೆಲ್ಲಲು ಶಾಸ್ತ್ರಿ ಆ್ಯಂಡ್ ಟೀಮ್ ಪಣತೊಟ್ಟಿದೆ.

News First Live Kannada

Leave a comment

Your email address will not be published. Required fields are marked *