ಟೀಮ್​ ಇಂಡಿಯಾ ಆಲ್​ರೌಂಡರ್​ ರವೀಂದ್ರ ಜಡೇಜಾ, ಐಸಿಸಿ ಟೆಸ್ಟ್​ ಱಂಕಿಂಗ್​​​ನ ನೂತನ​​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಆಲ್​ರೌಂಡರ್ ವಿಭಾಗದಲ್ಲಿ ವೆಸ್ಟ್​ ಇಂಡೀಸ್​ನ​​ ಜೇಸನ್​ ಹೋಲ್ಡರ್​ರನ್ನ ಹಿಂದಿಕ್ಕಿರುವ ಜಡೇಜಾ, ನಂಬರ್​.1 ಪಟ್ಟ ಅಲಂಕರಿಸಿದ್ದಾರೆ. ಇದಕ್ಕೂ ಮೊದಲು ಅಗ್ರಸ್ಥಾನದಲ್ಲಿದ್ದ ಹೋಲ್ಡರ್​, ಸೌತ್​​ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ರು. ಈ ಹಿನ್ನೆಲೆಯಲ್ಲಿ ಒಂದು ಸ್ಥಾನ ಕುಸಿದಿದ್ದು, 384 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಇಳಿದಿದ್ಧಾರೆ. ಇನ್ನು ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಒಂದು ವಿಕೆಟ್​ ಕಬಳಿಸಿ, 15ರನ್​ ಸಿಡಿಸಿದ ಜಡೇಜಾ 386 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇನ್ನುಳಿದಂತೆ ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್​​ನ ಬೆನ್​ ​ಸ್ಟೋಕ್ಸ್​, 4ನೇ ಸ್ಥಾನದಲ್ಲಿ ಭಾರತದ ರವಿಚಂದ್ರನ್​ ಅಶ್ವಿನ್ ಇದ್ದಾರೆ.

The post ರವೀಂದ್ರ ಜಡೇಜಾ ಟೆಸ್ಟ್​ ಕ್ರಿಕೆಟ್​ನ ನಂಬರ್.1 ಆಲ್​ರೌಂಡರ್ appeared first on News First Kannada.

Source: newsfirstlive.com

Source link