ರಶ್ಮಿಕಾ ಮಂದಣ್ಣ.. ಸ್ಯಾಂಡಲ್​ವುಡ್​​ನಿಂದ ಬಾಲಿವುಡ್​​ ತನಕ ಬೆಳೆದು ನಿಂತಿರೋ ಸ್ಟಾರ್ ನಟಿ ಮಣಿ. ಏನೋ ಲಕ್​ನಲ್ಲಿ ರಶ್ಮಿಕಾ ಸಿನಿಮಾ ಮಾಡ್ತಿದ್ದಾರೆ ಅನ್ನೋರ ಭಾವನೆ ಬದಲಾಗಿದೆ.. ರಶ್ಮಿಕಾ ಲಕ್ಕಿ ಅಲ್ಲ , ರಶ್ಮಿಕಾ ಇದ್ದ ಸಿನಿಮಾ ಲಕ್ಕಿ ಎಂಬುವಂತೆ ಆಗಿದೆ. ಈ ಕಾರಣಕ್ಕೆ ಟಾಲಿವುಡ್​​​​ನಲ್ಲಿ ರಶ್ಮಿಕಾ ಮಂದಣ್ಣರಿಗಾಗಿ ಸಿನಿಮಾ ಮಂದಿ ಕ್ಯೂನಲ್ಲಿರೋದು; ಯಾವುದೇ ಸ್ಟಾರ್ ನಟರ ಸಿನಿಮಾ ಲಾಂಚ್ ಆದ್ರು ರಶ್ಮಿಕಾ ಅವರ ಹೆಸರು ಮೊದಲು ಮುಂಚುಣಿಗೆ ಬರೋದು.

ಈ ರಶ್ಮಿಕಾ ಅವರ ಬಗ್ಗೆ ಒಂದು ಇಂಟರಸ್ಟಿಂಗ್ ಸಮಾಚಾರ ಹೊರಬಂದಿದೆ. ರಶ್ಮಿಕಾ ಅವರ ಸಿನಿಮಾದ ಬಗ್ಗೆ ಅಲ್ಲ. ರಶ್ಮಿಕಾ ಅವರ ಅಭಿಮಾನಿಯೊಬ್ಬನ ಬಗ್ಗೆ. ಈಗಾಗಲೇ ಮಡಕೇರಿ ನಲ್ಲೆಗೆ ಬೇಜಾನ್ ಪಡ್ಡೆ ಫ್ಯಾನ್ಸ್ ಸೌಥ್ ಇಂಡಿಯಾ ಮತ್ತು ನಾರ್ಥ್ ಇಂಡಿಯಾದಲ್ಲಿದ್ದಾರೆ. ಆ ಎಲ್ಲಾ ಫ್ಯಾನ್ಸ್​​​​​​​​​​​​​​​​ಗಳ ನಡುವೆ ಈ ಅಭಿಮಾನಿ ಡಿಫರೆಂಟು. ರಶ್ಮಿಕಾ ರನ್ನ ನೋಡೋದಕ್ಕಾಗಿ ಈ ಲಾಕ್ ಡೌನ್ ಟೈಮ್​​ನಲ್ಲಿ ನೂರಾರು ಕಿಲೋ ಮೀಟರ್​​ನಿಂದ ಓಡೋಡಿ ಬಂದಿದ್ದಾನೆ.

ಹೌದು.. ಚಮಕ್ ಸುಂದ್ರಿ ರಶ್ಮಿಕಾರನ್ನ ನೋಡಲು ಪಕ್ಕದ ತೆಲಂಗಾಣದಿಂದ ಕರ್ನಾಟಕದ ಗಡಿ ದಾಟಿ ರಶ್ಮಿಕಾ ಅವರ ಹುಟ್ಟುರು ವಿರಾಜಪೇಟೆ ಮಗ್ಗುಲ ಹಳ್ಳಿಗೆ ಬಂದಿದ್ದಾನೆ. ಅಷ್ಟಕ್ಕೂ ಈ ಕ್ರೇಜಿ ರಶ್ಮಿಕಾ ಅವರ ಆ ಕ್ರೇಜಿ ಫ್ಯಾನ್ ಹೆಸರು ಆಕಾಶ್ ತ್ರಿಪಾಠಿ..

ಪೊಲೀಸರಿಗೆ ಹೆದರಿದ ಅಭಿಮಾನಿ
ಎಲ್ಲಾ ಕಡೆ ಲಾಕ್ ಡೌನ್ ಆಗಿದೆ. ಊರಿಂದ ಊರಿಗೆ ಹೋಗೋಕೆ ಸರಿಯಾಗಿ ಬಸ್​ ವ್ಯವಸ್ಥೆ ಇಲ್ಲ. ಆದರ ಬಗ್ಗೆ ಒಂದ್ ಚೂರು ಚಿಂತೆ ಮಾಡದ ಆಕಾಶ್ ತ್ರಿಪಾಠಿ, ತೆಲಂಗಾಣದಿಂದ ಮೈಸೂರಿಗೆ ಬರೋ ರೈಲು ಹತ್ತಿದ್ದಾನೆ. ಕೊನೆಗೆ ಮೈಸೂರಿನಲ್ಲಿ ಬಂದಿಳಿದ ಅಭಿಮಾನಿ, ಕೊಡುಗಿನ ವಿರಾಜಪೇಟೆಗೆ ಹೋಗೋ ಗೂಡ್ಸ್ ಆಟೋ ಒಂದನ್ನ ಹಿಡಿದು ಅದರಲ್ಲಿ ರಶ್ಮಿಕಾಳ ತವರೂರು ವಿರಾಜಪೇಟೆ ತಲುಪಿದ್ದಾನೆ. ಗೂಗಲ್ ಮ್ಯಾಪ್ ಹಾಕಿಕೊಂಡು ವಿರಾಜಪೇಟೆಯ ಮಗ್ಗುಲ ಗ್ರಾಮದಲ್ಲಿ ಮಂದಣ್ಣ ಅನ್ನೋರಿಗೆ ಸೇರಿದ ಜಾಗಕ್ಕೆ ಬಂದು ತಲುಪಿದ್ದಾನೆ.

ಅಭಿಮಾನಿ ಆಕಾಶ್ ತ್ರಿಪಾಠಿ ತನ್ನ ನೆಚ್ಚಿನ ನಟಿ ರಶ್ಮಿಕಾ ಎಲ್ಲಿ ಎಂದು ಹುಡುಕುತ್ತಿದ್ದಾನೆ. ಸಿಗದೇ ಇದ್ದಾಗ ಪ್ರತಿಭಟಿಸಿದ್ದಾನೆ. ಕೊನೆಗೆ ಸ್ಥಳಿಯರಿಗೆ ಡೌಟ್ ಬಂದು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಪೊಲೀಸರು ವಿಚಾರಿಸಿದಾಗ ಅಸಲಿ ವಿಚಾರವನ್ನ ಬಾಯಿಟ್ಟಿದ್ದಾನೆ. ಕೊನೆಗೆ ರಶ್ಮಿಕಾರನ್ನ ಕಾಣದ ಪೊಲೀಸರಿಗೆ ಹೆದರಿ ಊರಿಗೆ ವಾಪಸ್ ಹೋಗಿದ್ದಾನೆ.

The post ರಶ್ಮಿಕಾ ಅಭಿಮಾನಿಗೆ ನಿರಾಸೆ: 970 ಕಿ.ಮೀ ದೂರದಿಂದ ಬಂದ ಸುಂದರಾಂಗ ಜಾಣ ಹೆದರಿ ವಾಪಸ್ appeared first on News First Kannada.

Source: newsfirstlive.com

Source link