‘ಸೀತಾ ರಾಮಂ’ ಸಿನಿಮಾ ಬಗ್ಗೆ ಕುತೂಹಲ ಮೂಡಲು ಕಾರಣ ರಶ್ಮಿಕಾ ಮಂದಣ್ಣ ಅವರ ಗೆಟಪ್. ರಶ್ಮಿಕಾ ಜನ್ಮದಿನದ ಪ್ರಯುಕ್ತ ಈ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಇದರಲ್ಲಿ ರಶ್ಮಿಕಾ ಅವರು ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದರು.
ನಟಿ ರಶ್ಮಿಕಾ ಮಂದಣ್ಣ ಅವರು (Rashmika Mandanna) ಸದ್ಯ ಸಖತ್ ಬ್ಯುಸಿ ಆಗಿದ್ದಾರೆ. ಟಾಲಿವುಡ್ ಮಾತ್ರವಲ್ಲದೆ ಹಿಂದಿ ಚಿತ್ರರಂಗದಲ್ಲೂ ಅವರು ತೊಡಗಿಕೊಂಡಿದ್ದಾರೆ. ಕೊವಿಡ್ ಕಾರಣದಿಂದ ಕೆಲ ಸಿನಿಮಾಗಳ ಕೆಲಸಗಳು ವಿಳಂಬ ಆದವು. ಈಗ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಸೀತಾ ರಾಮಂ’ ಸಿನಿಮಾ (Sita Ramam Movie) ರಿಲೀಸ್ಗೆ ರೆಡಿ ಇದೆ. ಆಗಸ್ಟ್ 5ರಂದು ಈ ಚಿತ್ರ ತೆರೆಗೆ ಬರುತ್ತಿರುವ ಬಗ್ಗೆ ಸಿನಿಮಾ ತಂಡ ಘೋಷಣೆ ಮಾಡಿದೆ. ಈ ಸಿನಿಮಾದಲ್ಲಿ ದುಲ್ಖರ್ ಸಲ್ಮಾನ್, ಮೃಣಲಾ ಠಾಕೂರ್ ಮೊದಲಾದವರು ನಟಿಸಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಸಾಕಷ್ಟು ಕುತೂಹಲ ಮೂಡಿಸಿದೆ.
‘ಸೀತಾ ರಾಮಂ’ ಸಿನಿಮಾ ಬಗ್ಗೆ ಕುತೂಹಲ ಮೂಡಲು ಕಾರಣ ರಶ್ಮಿಕಾ ಮಂದಣ್ಣ ಅವರ ಗೆಟಪ್. ರಶ್ಮಿಕಾ ಜನ್ಮದಿನದ ಪ್ರಯುಕ್ತ ಈ ಸಿನಿಮಾದ ಫಸ್ಟ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಇದರಲ್ಲಿ ರಶ್ಮಿಕಾ ಅವರು ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದರು. ಸದ್ಯ, ಹಿಜಾಬ್ ವಿಚಾರ ಕರ್ನಾಕಟದಲ್ಲಿ ಚರ್ಚೆಯಲ್ಲಿದೆ. ಹೀಗಿರುವಾಗಲೇ ಅವರು ಈ ರೀತಿಯ ವೇಷದಲ್ಲಿ ಕಾಣಿಸಿಕೊಂಡಿದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಅವರು ಈ ರೀತಿ ಕಾಣಿಸಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆಗೆ ಆಗಸ್ಟ್ 5ರಂದು ಉತ್ತರ ಸಿಗಲಿದೆ.