ರಶ್ಮಿಕಾ ಮಂದಣ್ಣ ತೊಟ್ಟ ಈ ಸೀರೆಯ ಬೆಲೆಯನ್ನು ಊಹಿಸ್ತೀರಾ? ಅಬ್ಬಾಬ್ಬಾ ಇಷ್ಟೊಂದು ದುಬಾರಿಯಾ? | Rashmika Mandanna wore saree worth rupees of 31 thousand rupees


ರಶ್ಮಿಕಾ ಮಂದಣ್ಣ ತೊಟ್ಟ ಈ ಸೀರೆಯ ಬೆಲೆಯನ್ನು ಊಹಿಸ್ತೀರಾ? ಅಬ್ಬಾಬ್ಬಾ ಇಷ್ಟೊಂದು ದುಬಾರಿಯಾ?

ರಶ್ಮಿಕಾ

ನಟಿ ರಶ್ಮಿಕಾ ಮಂದಣ್ಣ ಅವರು ಸ್ಯಾಂಡಲ್​ವುಡ್​ಗಿಂತ ಹೆಚ್ಚು ಪರಭಾಷೆಯಲ್ಲಿ ಬ್ಯುಸಿ ಆಗಿದ್ದಾರೆ. ಟಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಅವರ ಕಾಲ್​ಶೀಟ್​ ಪಡೆಯೋಕೆ ನಿರ್ಮಾಪಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಹಾಗಲ್ಲ. ತುಂಬಾನೇ ಎಚ್ಚರಿಕೆ ವಹಿಸಿ ಕಥೆ ಒಪ್ಪಿಕೊಳ್ಳುತ್ತಿದ್ದಾರೆ. ಅವರ ಪಾತ್ರಕ್ಕೆ ಸ್ಕೋಪ್​ ಇದೆ ಎಂದಾದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಖ್ಯಾತಿ ಹೆಚ್ಚುತ್ತಿದ್ದಂತೆ ಅವರಿಗೆ ಬರುವ ಜಾಹೀರಾತುಗಳ​ ಸಂಖ್ಯೆ ಕೂಡ ಹೆಚ್ಚಿದೆ.  ಸಾಕಷ್ಟು ಬ್ರ್ಯಾಂಡ್​ಗಳಿಗೆ ರಶ್ಮಿಕಾ ಮಂದಣ್ಣ ರಾಯಭಾರಿ ಆಗಿದ್ದಾರೆ. ಈಗ ಅವರು ತೊಟ್ಟ ಸೀರೆಯ ಬೆಲೆಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.  

ಜನವರಿ 22ರಂದು ರಶ್ಮಿಕಾ ಮಂದಣ್ಣ ಅವರು ಎರಡು ಫೋಟೋಗಳನ್ನು ಪೋಸ್ಟ್​ ಮಾಡಿದ್ದಾರೆ. ಈ ಫೋಟೋದಲ್ಲಿ ಅವರು ಸೀರೆ ಉಟ್ಟಿದ್ದಾರೆ. ಇದರಲ್ಲಿ ಅವರು ಸಖತ್​ ಟ್ರೆಡಿಷನಲ್​ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಅಚ್ಚರಿ ಎಂದರೆ ಈ ಸೀರೆಯ ಬೆಲೆ ಬರೋಬ್ಬರಿ 31 ಸಾವಿರ ರೂಪಾಯಿ! ಈ ಸೀರೆಯ ಬೆಲೆ ಕೇಳಿ ಅಭಿಮಾನಿಗಳು ನಿಜಕ್ಕೂ ಅಚ್ಚರಿ ಪಟ್ಟಿದ್ದಾರೆ. ಇನ್ನೂ ಕೆಲವರು ಈ ಸೀರೆ ಅವರಿಗೆ ಹೊಂದುತ್ತದೆ ಎಂದು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ದಿನದಿಂದ ದಿನಕ್ಕೆ ಅವರನ್ನು ಫಾಲೋ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ತಮ್ಮ ಪ್ರತಿದಿನದ ಚಟುವಟಿಕೆಗಳ ಬಗ್ಗೆ ಇನ್​ಸ್ಟಾಗ್ರಾಮ್​ ಮೂಲಕ ರಶ್ಮಿಕಾ ಅಪ್​ಡೇಟ್​ ನೀಡುತ್ತಾರೆ. ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಜೊತೆಯಲ್ಲಿ ಸಂಪರ್ಕದಲ್ಲಿರುತ್ತಾರೆ. ಇತ್ತೀಚೆಗೆ ಅವರೊಂದು ಹೊಸ ಫೋಟೋ ಅಪ್​ಲೋಡ್​ ಮಾಡಿಕೊಂಡಿದ್ದರು. ಸಿನಿಮಾ ಕೆಲಸಗಳ ನಡುವೆ ಎಷ್ಟೇ ಬ್ಯುಸಿ ಇದ್ದರೂ ಕೂಡ ರಶ್ಮಿಕಾ ವರ್ಕೌಟ್​ ಮಾಡೋದನ್ನು ತಪ್ಪಿಸುವುದಿಲ್ಲ. ಹೆಚ್ಚು ಹೊತ್ತು ಅವರು ಜಿಮ್​ನಲ್ಲಿ ಕಳೆಯುತ್ತಾರೆ. ಫೋಟೋ ಒಂದನ್ನು ಹಂಚಿಕೊಂಡು ‘ನಾನು ಜಿಮ್​ನಲ್ಲಿಯೇ ಜೀವಿಸುವ ಸೈಕೋ ಅಂತ ಸಾಬೀತಾಯ್ತು’ ಎಂದು ಅವರು ಕ್ಯಾಪ್ಷನ್​ ನೀಡಿದ್ದರು

‘ಪುಷ್ಪ’ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಚಿತ್ರರಂಗದಲ್ಲಿ ಅವರು ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ಸದ್ಯಕ್ಕಂತೂ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಬಹುಬೇಡಿಕೆ ಸೃಷ್ಟಿಸಿಕೊಂಡಿರುವ ರಶ್ಮಿಕಾ ಫಿಟ್ನೆಸ್​ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಾರೆ. ಹಾಗಾಗಿ ಸಮಯ ಸಿಕ್ಕಾಗಲೆಲ್ಲ ಜಿಮ್​ನಲ್ಲಿ ಕಸರತ್ತು ನಡೆಸುತ್ತಾರೆ.

‘ಪುಷ್ಪ’ ಚಿತ್ರಕ್ಕೆ ಭಾರಿ ಗೆಲುವು ಸಿಕ್ಕ ಬಳಿಕ ರಶ್ಮಿಕಾ ಮಂದಣ್ಣ ಸಂಭಾವನೆ ಕೂಡ ಹೆಚ್ಚಿದೆ ಎಂಬ ಬಗ್ಗೆ ಗುಸುಗುಸು ಹಬ್ಬಿದೆ. ಈಗಾಗಲೇ ತಿಳಿದಿರುವಂತೆ ‘ಪುಷ್ಪ’ ಚಿತ್ರದ ಎರಡನೇ ಪಾರ್ಟ್ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲೂ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅಭಿನಯಿಸಲಿದ್ದಾರೆ. ಮೊದಲ ಪಾರ್ಟ್​ ಗೆದ್ದ ಬಳಿಕ ಎರಡನೇ ಪಾರ್ಟ್​ಗೆ ರಶ್ಮಿಕಾ ಹೆಚ್ಚು ಸಂಬಳ ಕೇಳುತ್ತಿದ್ದಾರಂತೆ. ಮೊದಲ ಪಾರ್ಟ್​ಗೆ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದ ಅವರು ಈಗ 3 ಕೋಟಿ ರೂ. ಡಿಮ್ಯಾಂಡ್​ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂದರೆ, ಅವರು ಶೇ.50ರಷ್ಟು ಸಂಭಾವನೆಯನ್ನು ಹಚ್ಚಿಸಿಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *