ಕೊಡಗು: ಕೆಲವು ಸಿನಿಪ್ರಿಯರು ತಮ್ಮ ನೆಚ್ಚಿನ ನಟ ನಟಿಯರ ಬಗ್ಗೆ ಯಾವ ಮಟ್ಟಿಗೆ ಹಚ್ಚಿಕೊಂಡಿರ್ತಾರೆ ಅಂದ್ರೆ ತಮ್ಮ ಅಭಿಮಾನ ಪ್ರೂವ್ ಮಾಡಲು ಒಂದು ಹೆಜ್ಜೆ ಮುಂದೆ ಹೋಗ್ತಾರೆ. ಅದೇ ರೀತಿ ನ್ಯಾಷನಲ್ ಕ್ರಶ್​​ ಅಂತ ಫೇಮಸ್​ ಆಗಿರೋ ನಟಿ ರಶ್ಮಿಕಾ ಮಂದಣ್ಣರ ಅಭಿಮಾನಿಯೊಬ್ಬರ ಹುಚ್ಚು ಸಾಹಾಸದ ಕಥೆ ಇದು. ರಶ್ಮಿಕಾ ಅವರನ್ನ ಭೇಟಿಯಾಗಬೇಕೆಂದು ಅವರ ಅಭಿಮಾನಿ ಮೈಲಿಗಟ್ಟಲೆ ದೂರದಿಂದ ಕೊಡಗಿಗೆ ಬಂದಿದ್ದಾರೆ.

ತೆಲಂಗಾಣ ಮೂಲದ ಆಕಾಶ್ ತ್ರಿಪಾಠಿ ರಶ್ಮಿಕಾ ಮಂದಣ್ಣರನ್ನ ಹುಡುಕಿಕೊಂಡು ಕೊಡಗಿಗೆ ಬಂದ ಫ್ಯಾನ್. ತೆಲಂಗಾಣದಿಂದ ರೈಲಿನಲ್ಲಿ ಮೈಸೂರಿಗೆ ಬಂದ ಇವರು, ಬಳಿಕ ಮೈಸೂರಿನಿಂದ ಗೂಡ್ಸ್ ಆಟೋ ಮೂಲಕ ವಿರಾಜಪೇಟೆ ತಲುಪಿದ್ದಾರೆ. ವಿರಾಜಪೇಟೆಗೆ ಬಂದು ರಾತ್ರಿ ಪೂರ್ತಿ ನೆಚ್ಚಿನ ನಟಿಯ ಮನೆಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ ಮಗ್ಗುಲ ಗ್ರಾಮಕ್ಕೆ ತೆರಳಿ ರಶ್ಮಿಕಾ ಮನೆ ಎಲ್ಲಿ ಅಂತ ಸ್ಥಳೀಯರ ಬಳಿ ವಿಚಾರಣೆ  ಮಾಡಿ ಹುಡುಕಾಡುತ್ತಿದ್ದರು ಎನ್ನಲಾಗಿದೆ.

ವ್ಯಕ್ತಿಯ ವರ್ತನೆ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ವಿಚಾರಿಸಿದಾಗ ಅವರು ತೆಲಂಗಾಣದವವರೆಂದು ತಿಳಿದುಬಂದಿದೆ. ಬಳಿಕ ವಿರಾಜಪೇಟೆ ಪೊಲೀಸರು ಆಕಾಶ್​ಗೆ ವಾರ್ನಿಂಗ್ ನೀಡಿ ವಾಪಸ್ ಕಳಿಸಿದ್ದಾರೆ.

The post ರಶ್ಮಿಕಾ ಮಂದಣ್ಣ ಭೇಟಿಯಾಗಲು ತೆಲಂಗಾಣ ಅಭಿಮಾನಿಯ ಹುಚ್ಚು ಸಾಹಸ appeared first on News First Kannada.

Source: newsfirstlive.com

Source link