ಈ ಕೊರೊನಾ ಕಾಲದಲ್ಲಿ ಅದೇನೇನು ಐಡಿಯಾ ಹೊಳೆಯುತ್ತೊ ಗೊತ್ತಾಗಲ್ಲ. ಅನೇಕ ದೇಶಗಳು ಕೊರೊನಾ ಸಂಕಷ್ಟ ಕಾಲವನ್ನೇ ದೊಡ್ಡ ಅವಕಾಶವನ್ನಾಗಿ ಪರಿವರ್ತಿಸಿಕೊಳ್ತಾ ಇವೆ. ಚೀನಾವಂತೂ ಇದರಲ್ಲೂ ಎಲ್ಲರಿಗಿಂತ ಮುಂದೆ. ಈಗ ರಷ್ಯಾ ಕೂಡ ಇಂಥದ್ದೇ ಒಂದು ಪ್ರಯತ್ನಕ್ಕೆ ಜೈ ಎಂದಿದೆ.

ಕೊರೊನಾ ಬರೋದಕ್ಕಿಂತ ಮುನ್ನ ವಿಶ್ವದ ಪ್ರಮುಖ ಪ್ರವಾಸಿ ತಾಣಗಳು ತುಂಬಿ ತುಳುಕಿರುತ್ತಿದ್ದವು. ನಯಾಗರ ಫಾಲ್ಸ್ ಆಗಲಿ​, ಪ್ಯಾರಿಸ್​​ಣ ಐಫೆಲ್​​ ಟವರ್ ಆಗಲಿ, ಇಂಗ್ಲೆಂಡಿನ್ ಅರಮನೆಯಾಗಲಿ, ದುಬೈನ ಅತಿ ಎತ್ತರದ ಬುರ್ಜ್ ಖಲೀಫಾ ಆಗಲಿ, ಸಿಂಗಾಪೂರ್ ಆಗಲಿ, ಜಪಾನಿನ ಟೋಕಿಯೊ ಆಗಲಿ.. ಎಲ್ಲೆಂದರಲ್ಲಿ ಪ್ರವಾಸಿಗಳ ದಂಡೇ ಇರ್ತಾ ಇತ್ತು. ಯಾವಾಗ ಕೊರೊನಾ ಬಂತೋ ಆವಾಗಿನಿಂದ ಜಗತ್ತಿನ ಎಲ್ಲಾ ಪ್ರವಾಸಿ ತಾಣಗಳು ಬಣಗುಡುತ್ತಿವೆ.  ಹಂಪಿಯಿಂದ ಹಿಡಿದು, ಹಿಮಾಲಯದವರೆಗೂ ಕೂಡ ಎಲ್ಲೂ ಪ್ರವಾಸಿಗರು ಕಾಣ್ತಾ ಇಲ್ಲ. ಕಾರಣ ಕೊರೊನಾ ಹಾಕಿರುವ ದಿಗ್ಬಂಧನ. ವಿಶ್ವದ ಪ್ರವಾಸೋದ್ಯಮ ನೆಲ ಕಚ್ಚಿ ವರ್ಷವೇ ಆಗಿ ಹೋಯ್ತು. ಇನ್ನೂ ಸುಧಾರಿಸಿಕೊಳ್ಳುವ ಮುನ್ಸೂಚನೆಯೇ ಸಿಗ್ತಾ ಇಲ್ಲ. ಆದ್ರೆ ರಷ್ಯಾ ಈ ಮಧ್ಯೆ ಒಂದು ಪ್ಲಾನ್ ಮಾಡಿದೆ. ಅದನ್ನ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.

ರಷ್ಯಾ ವಿಶ್ವದ ಪ್ರಬಲ ದೇಶಗಳಲ್ಲಿ ಒಂದು. ಅಷ್ಟೇ ಮುಂದುವರೆದ ದೇಶ ಕೂಡ. ಆದ್ರೆ, ಕೊರೊನಾಗೆ ಯಾವ ದೇಶವಾದರೂ ಏನಂತೆ. ಎಲ್ಲಾ ಕಡೆ ತನ್ನ ಹಾವಳಿ ಇಟ್ಟಿತ್ತು. ಆದ್ರೆ ರಷ್ಯಾ ಪರಿಣಾಮಕಾರಿ ಕ್ರಮಗಳಿಂದ ಕೊರೊನಾವನ್ನು ಹಿಮ್ಮೆಟ್ಟಿಸ್ತಾ ಇದೆ. ಕೊರೊನಾಗೆ ಲಸಿಕೆ ತಯಾರಿಕೆ ಮಾಡ್ತಾ ಇರುವ ವಿಶ್ವದ ಕೆಲವೇ ಕೆಲವು ದೇಶಗಳಲ್ಲಿ ರಷ್ಯಾ ಕೂಡ ಒಂದು. ಅಷ್ಟೇ ಏಕೆ ರಷ್ಯಾದ ಸ್ಫುಟ್ನಿಕ್ ಲಸಿಕೆಯನ್ನ ಭಾರತಕ್ಕೂ ಕೂಡ ಈಗ ತರಿಸಿಕೊಳ್ಳಲಾಗ್ತಾ ಇದೆ. ಈ ಲಸಿಕೆಯ ಹಿಂದೆಯೇ ಒಂದು ಅದ್ಭುತವಾದ ಕಲ್ಪನೆ ಮತ್ತು ಯೋಜನೆಯೊಂದನ್ನು ದುಬೈ ಮೂಲದ ಕಂಪನಿ ರೂಪಿಸಿದೆ.

ವ್ಯಾಕ್ಸಿನ್ ಟೂರಿಸಂ
ಭಾರತಕ್ಕೆ ಸ್ಫುಟ್ನಿಕ್ ಲಸಿಕೆ ಪೂರೈಕೆ ಮಾಡೊದೊಂದೇ ಅಲ್ಲ, ಈಗ ಈ ಲಸಿಕೆಯ ಜೊತೆ ಇನ್ನೊಂದು ಆಫರ್ ನೀಡ್ತಾ ಇದೆ ದುಬೈ ಮೂಲದ ಕಂಪನಿ.  ಅದೇನಂದ್ರೆ ದುಬೈ ಕಂಪನಿ ಸ್ಫುಟ್ನಿಕ್ ಲಸಿಕೆಯ ಟೂರ್ ಆಯೋಜಿಸ್ತಾ ಇದೆ. ಸ್ಪೆಷಲ್ ಆಗಿ ಭಾರತಿಯರಿಗೆ ಮಾತ್ರ ಈ ಆಫರ್ ಕೊಡ್ತಾ ಇದೆ. ಆದ್ರೆ ಪ್ರವಾಸ ಹೋಗಬೇಕಾಗಿರೋದು ರಷ್ಯಾಕ್ಕೆ ಮಾತ್ರ. ದೆಹಲಿ ಟು ಮಾಸ್ಕೋ ಟ್ರಿಪ್ ತುಂಬಾ ಖುಷಿ ಕೊಡಲಿದೆ ಅಂತ ಹೇಳ್ತಿದೆ ಈ ಕಂಪನಿ. ಇದಕ್ಕೆ ಒಂದು ಪ್ಯಾಕೇಜ್ ಕೂಡ ರಿಲೀಸ್ ಮಾಡಲಾಗ್ತಾ ಇದೆ. ಅಂದಹಾಗೆ ಇದರಿಂದ ಆ ಕಂಪನಿಗೂ ಲಾಭ. ಪ್ರವಾಸೋದ್ಯಮದ ದೃಷ್ಟಿಯಿಂದ ರಷ್ಯಾಕ್ಕೂ ಲಾಭ. ರಷ್ಯಾ ಕೂಡ ಈ ಆಲೋಚನೆಯನ್ನು ಸ್ವಾಗತಿಸಿದೆ. ಕಾರಣ ಈ ಪ್ಲಾನ್ ಅನ್ನೇ ಬೇರೆ ಬೇರೆ ದೇಶಗಳಲ್ಲೂ ಮುಂದಿನ ದಿನಗಳಲ್ಲಿ ಆಫರ್ ಮಾಡಬಹುದು ಅಂತಾ. ಇದಕ್ಕೆ ಹೇಳೋದು ಕೊರೊನಾ ಸಂಕಷ್ಟ ಕಾಲವನ್ನೂ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳೋದು ಅಂತಾ.

ಕೊರೊನಾ ಕೊರೊನಾ ಕೊರೊನಾ ಅನ್ನೊ ಮಾತು ಕೇಳಿ ಬೇಸುತ್ತು ಹೋಗಿದೆ. ಸಾವು ನೋವುಗಳ ಎಣಿಕೆ ಭಯ ಹುಟ್ಟಸ್ತಾನೆ ಇದೆ. ಲಸಿಕೆ ರೆಡಿ ಇದೆ, ಆದ್ರೆ ಅದಕ್ಕೂ ಹಲವಾರು ರಿಸ್ಟ್ರಿಕ್ಷನ್ಸ್. ಒಮ್ಮೆ ಯುವಕರಿಗೆ ಲಸಿಕೆ ಅನ್ತಾರೆ, ಒಮ್ಮೆ ಯುವಕರಿಗೆ ಈಗ್ಲೇ ಇಲ್ಲ ಅನ್ತಾರೆ. ಲಸಿಕೆ ಖಾಲಿ ಅನ್ತಾರೆ, ಒಮ್ಮೆ ಹಿರಿಯರಿಗೆ ಮಾತ್ರ ಅಂತ ಬೋರ್ಡ್ ಹಾಕ್ತಾರೆ. ಈ ಕೊರೊನಾ ವಿರುದ್ಧ ಸಂಕಷ್ಟದಿಂದ ಹೊರ ಬರಲು ಇನ್ನು ಎಷ್ಟು ದಿನವಾಗುತ್ತೋ. ಯಾವಾಗ ಮಾಸ್ಕ್ ತೆಗೆದು, ಸಾಮಾಜಿಕ ಅಂತರ ದೂರವಿಟ್ಟು ನಮ್ಮ ಫ್ಯಾಮೆಲಿ- ಫ್ರೆಂಡ್ಸ್​ ಜೊತೆ ಪ್ರವಾಸ ಮಾಡ್ತೀವೋ ಅನ್ನಿಸಿಬಿಟ್ಟಿದೆ. ಇದು ಕೇವಲ ಮೇಲ್ನೋಟಕ್ಕೆ ಹೀಗೆ. ಮನೆಯಲ್ಲೆ ಇದ್ದು ಇದ್ದು ಎಷ್ಟೊ ಹುಡುಗ ಹುಡುಗಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ತಕ್ಷಣಕ್ಕೆ ಕೊರೊನಾ ಮಾಯವಾದರೆ ಮನೆಯಿಂದ ಹೊರ ಬಂದ್ರೆ ಎಲ್ರೂ ಯೋಚನೆ ಮಾಡ್ತಾ ಇರೋದೆ ಎಲ್ಲಾದ್ರೂ ಟೂರ್ ಹೋಗಣ ಅಂತ.

ಅಮೆರಿಕದಲ್ಲಿ ಎಲ್ಲರಿಗೂ ಲಸಿಕೆ ಕೊಡ್ತಾ ಇದರೆ. ಈಗಾಗಲೇ ಶೇ. 70 ಕ್ಕೂ ಹೆಚ್ಚು ಜನಸಂಖ್ಯೆಗೆ ಲಸಿಕೆ ಹಾಕಾಗಿದೆ. ಇದರಿಂದ ದೊಡ್ಡಣ್ಣ ಮಾಸ್ಕ್ ಬೇಡ, ಸೋಷಿಯಲ್ ಡಿಸ್ಟೆಂಸಿಂಗ್ ಅಗತ್ಯ ಇಲ್ಲ ಅಂತ ಸ್ಟೇಟ್ಮೆಂಟ್ ಕೊಟ್ಟಿ ಹೋಗ್ತಾನೆ. ಹೀಗಾಗಿ ಅಮೆರಿಕದಲ್ಲಿ ಪ್ರವಾಸೋದ್ಯಮ ನಿಧಾನವಾಗಿ ಚೇತರಿಸಿಕೊಳ್ತಾ ಇದೆ.ಆದ್ರೆ ಭಾರತದಂತಹ ಜನಬಾಹುಳ್ಯ ಹೆಚ್ಚಿರುವ ದೇಶದಲ್ಲಿ ಇದು ಕಷ್ಟ. ಕಾರಣ ಲಸಿಕೆ ಹಾಕಿಸೋಕೇ ಇನ್ನೂ ಕನಿಷ್ಠ ಆರು ತಿಂಗಳು ಬೇಕು ಭಾರತಕ್ಕೆ. ಹೀಗಾದಾಗ ಎಲ್ಲರಿಗೂ ಲಸಿಕೆ ಹಾಕಿಸಿ ಮಾಸ್ಕ್ ತೆಗೆಸಿ ಪ್ರವಾಸಕ್ಕೆ ಕರೆದುಕೊಂಡು ಹೋಗೋದು ಅಂದ್ರೆ ಸದ್ಯಕ್ಕಂತೂ ಕನಸು.ನಾರ್ಮಲ್ ಲೈಫ್ ಲೀಡ್ ಮಾಡೋದೇ ಕಷ್ ಎಂಬಂತಿರುವಾಗ ಇನ್ನೂ ಟೂರ್ ಬೇರೆ ಅಂತ ಗೊಣಗಿಕೊಂಡೇ ಇರಬೇಕಾದ ಸ್ಥಿತಿ.

ದುಬೈ ಮೂಲದ ಕಂಪನಿ ಹೇಳ್ತಾ ಇರೋದು ಸ್ಫುಟ್ನಿಕ್ ಲಸಿಕೆ ತೆಗೆದುಕೊಳ್ಳಿ. ರಷ್ಯಾದ ಪ್ರವಾಸ ಮಾಡಿ ಅಂತಾ. ಅಂದ್ರೆ ಒಂದು ಕಡೆ ಲಸಿಕೆಯ ಮಾರ್ಕೆಟಿಂಗ್ ಇನ್ನೊಂದು ಕಡೆ ಟೂರಿಸಂ ಪ್ಯಾಕೇಜ್. ಎರಡೂ ಲಾಭದಾಯಕವೇ. ರಷ್ಯಾದ ಸ್ಫುಟ್ನಿಕ್ ಇನ್ನೇನು ಜನರಿಗೆ ಸಿಗಲಿದೆ. ಇದು ಭಾರತದಲ್ಲೂ ತಯಾರಾಗಲಿದೆ. ಈ ಮಧ್ಯೆ, ರಷ್ಯಾದ ಟೂರಿಸಂ ಪ್ಯಾಕೇಜ್ ಕೂಡ ಆಕರ್ಷಕವಾಗಿದೆ. ಲಸಿಕೆಯನ್ನೂ ಹಾಕಿಸಿಕೊಳ್ಳಿ, ಪ್ರವಾಸಕ್ಕೂ ಬನ್ನಿ ಅಂತಿದೆ ರಷ್ಯಾದ ಪ್ಲಾನ್.

ರಷ್ಯಾ ತನ್ನದೆ ಆದ ವಿಶೇಷವಾದ ಸಂಸ್ಕೃತಿ ಹೊಂದಿರುವ ದೇಶ. ಅಲ್ಲಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಉತ್ತಮ ನೈಸರ್ಗಿಕ ವೈವಿಧ್ಯತೆಯು ರಷ್ಯಾವನ್ನು ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ರಷ್ಯಾದ ಪ್ರಮುಖ ಟೂರಿಸಂನಲ್ಲಿ ಪ್ರಾಚೀನ ನಗರಗಳ ಗೋಲ್ಡನ್ ರಿಂಗ್ ಸುತ್ತಲಿನ ಪ್ರಯಾಣ, ವೋಲ್ಗಾ ಸೇರಿದಂತೆ ದೊಡ್ಡ ನದಿಗಳ ಪ್ರಯಾಣ ಮತ್ತು ಪ್ರಸಿದ್ಧ ಟ್ರಾನ್ಸ್-ಸೈಬೀರಿಯನ್ ರೈಲ್ವೆಯ ದೀರ್ಘ ಪ್ರಯಾಣಗಳಿರುತ್ತದೆ. ಅತ್ತ ಆರ್ಟಿಕ್ ಸಮುಸದ್ರ ಇತ್ತ ಪೆಸಿಫಿಕ್ ಸಮುದ್ರಗಳಿವೆ. ಅದ್ಭತ ಆರ್ಕಿಟೆಕ್ಚರ್ ಇರುವ ಹಳೆ ಚರ್ಚ್ ಗಳು, ವೈವಿದ್ಯಮಯ ಬಿಲ್ಡಿಂಗ್ ಗಳು, ಕಲ್ಚರಲ್ ಫೆಸ್ಟ್ ಗಳು ಸೇರಿ ರಷ್ಯಾ ಪ್ರವಾಸಿಗರನ್ನು ಆಕರ್ಷಿಸದೆ ಬಿಡುವುದಿಲ್ಲ. ಅಲ್ಲಿನ ರಿಚ್ನೆಸ್ ನಿಂದ ಒಮ್ಮೆಯಾದರೂ ರಷ್ಯಾಗೆ ಬೇಟಿ ನೀಡಲೆಬೇಕು ಅನ್ನೊ ಮನ್ಸು ಬರೋದು ಸಹಜ. ಈಗ ರಷ್ಯಾ ಟೂರ್ ಗೆ ಒಂದೊಳ್ಳೆ ಸದಾವಾಕಾಶ ಅನ್ಸುತ್ತೆ.

ಡೆಲ್ಲಿ ಟೂ ಮಾಸ್ಕೊ ಲಸಿಕೆ ಟೂರ್
ಕೊರೊನಾ ಸಾಂಕ್ರಮಿಕದಿಂದ ಇಡೀ ವಿಶ್ವವೇ ಅಲ್ಲೋಲಕಲ್ಲೋಲವಾಗಿದೆ. ಆರ್ಥಿಕವಾಗಿ ಕುಗ್ಗಿರುವುದರ ಜೊತಗೆ ಟೂರಿಸಂ ತಲೆಕೆಳಗಾಗಿದೆ. ಇನ್ನೊಂದೆಡೆ ಎಲ್ಲ ದೇಶ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ತಲುಪಿಸುವ ಜವಾಬ್ದಾರಿಯನ್ನು ಹೊಂದಿದೆ. ದೇಶದ ಶೇ.75 ರಷ್ಟು ಜನರಿಗೆ ವ್ಯಾಕ್ಸಿನ್ ತಲುಪಿಸುವಲ್ಲಿ ಯಶಸ್ವಿಯಾಗಿರುವ ದೇಶಗಳಲ್ಲಿ ರಷ್ಯಾ ಸಹ ಒಂದು. ಈಗ ರಷ್ಯಾದಲ್ಲಿ ಎಲ್ಲವೂ ಚೇತರಿಕೆ ಕಾಣಿಸುತ್ತಿದೆ. ಹಾಗೆ ರಷ್ಯಾ ಟೂರಿಸಂ ಮರು ಸ್ಥಾಪಿಸಲು ಟೂರ್ ಗೆ ಅವಕಾಶ ಕಲ್ಪಿಸಿದೆ.  ದುಬೈ ಮೂಲದ ಟೂರಿಸಂ ಕಂಪನಿಯೊಂದು ಭಾರತೀಯರಿಗಾಗಿ ಈ ವಿಶೇಷವಾದ ಪ್ಯಾಕೇಜ್ ಘೋಷಣೆ ಮಾಡಿದೆ. ಇದು ದಿಲ್ಲಿ ಟೂ ಮಾಸ್ಕೊ ಲಸಿಕೆ ಟೂರ್ ಪ್ಯಾಕೇಜ್. ಕಂಪ್ಲೀಟ್ 24 ದಿನಗಳ ರಷ್ಯಾ ಪ್ರವಾಸದ ಪ್ಯಾಕೇಜ್.

24 ದಿನಗಳ ಟೂರ್​ನಲ್ಲಿ 2 ಡೋಸ್​ ಲಸಿಕೆ
ದಿಲ್ಲಿಯಿಂದ ಈ ಕಂಪನಿ ಕಡೆಯಿಂದ ಬುಕ್ ಆಗಿರುವ ವಿಮಾನದಲ್ಲಿ ನೇರವಾಗಿ ಮಾಸ್ಕೊ ತಲುಪಿಸಲಾಗುವುದು. ಮಾಸ್ಕೊ ತಲುಪಿದ ಕೂಡಲೆ ಮೊದಲ ಡೋಸ್ ಸ್ಪುಟ್ನಿಕ್-ವಿ ನೀಡಲಾಗುವುದು. ಅದಾದ ನಂತರ 20 ದಿನಗಳ ಕಾಲ ಮಾಸ್ಕೊದಲ್ಲಿ ಸೈಟ್ ಸೀಯಿಂಗ್, ಪ್ರವಾಸಿ ತಾಣಗಳಿಗೆ ಭೇಡಟಿ. ಇದಾದ ಬಳಿಕ ಸ್ಪುಟ್ನಿಕ್ ಎರಡನೇ ಡೋಸ್ ಲಸಿಕೆ ನೀಡಲಾಗುವುದು ನಂತರ ಮಾಸ್ಕೊವಿನಿಂದ ಪೀಟ್ಸ್ಬರ್ಗ್ ಗೆ ರೈಲಿನ ಮೂಲಕ ದೀರ್ಘ ಪ್ರಯಾಣ. ಅಲ್ಲಿನ ಇವೆಂಟ್ಸ್, ಕಲ್ಚರಲ್ ಫೆಸ್ಟ್ಗಳನ್ನು ಮುಗಿಸಿದ ಬಳಿಕ 25ನೇ ದಿನ ಭಾರತಕ್ಕೆ ವಾಪಸ್. ಇಷ್ಟು ದಿನಗಳ ಕಾಲ 3 ಸ್ಟಾರ್ ಹೋಟಲ್ನಲ್ಲಿ ವಾಸ್ತವ್ಯದ ಜೊತೆಗೆ ಊಟ- ಉಪಾಹಾರ ಪ್ಯಾಕೇಜ್ನಲ್ಲಿ ಸೇರಿವೆ.

ಈ ಟೂರ್​ ಪ್ಯಾಕೇಜ್​ನ ದರ ಎಷ್ಟು?
ಭಾರತದಲ್ಲಿ ಲಸಿಕೆ ಸಿಗದೆ, ಇದ್ದಲ್ಲೆ ಇದ್ದು ಇದ್ದು ಬೇಸತ್ತಿರುವ ಜನತೆಗೆ ಇದು ರಷ್ಯಾದ ಕಡೆಯಿಂದ ಒಳ್ಳೆ ಪ್ಯಾಕೇಜ್. ಲಸಿಕೆ ಅಭಾವದ ಮಧ್ಯೆ ಆರಂಭಿಸಲಾದ  25 ದಿನಗಳ ರಷ್ಯಾ ಪ್ರವಾಸಕ್ಕೆ ಬರಲು ಇಚ್ಛಿಸುವರು ಒಂದು ಲಕ್ಷದ ಇಪ್ಪತೊಂಬ್ಬತ್ತು ಸಾವಿರ ರೂಪಾಯಿಗಳನ್ನು ಪಾವತಿಸಬೇಕು. ಈ ಪ್ರವಾಸಕ್ಕೆ ಹೋಗಲು ಭಾರತೀಯರು ಉತ್ಸಾಹಕರಾಗಿದ್ದಾರೆ. ಪ್ರವಾಸ ಮೇ 29 ರಿಂದ ಆರಂಭವಾಗಲಿದೆ ಎಂದು ಘೋಷಿಸಲಾಗಿದೆ. ಅದರ ಮೊದಲ ಹಂತದ ಬುಕ್ಕಿಂಗ್ ಈಗ ಶುರುವಾಗಿದ್ದು ಈಗಾಗಲೇ 28 ಜನರು ಬುಕ್ ಮಾಡಿದ್ದಾರೆ. ಈ ಪ್ರವಾಸ ಯಶಸ್ವಿಯಾದ ಬೆನ್ನಲ್ಲೆ ಎರಡನೆ ಹಂತದ ಪ್ಯಾಕೇಜ್ ನಡೆಸುವುದಾಗಿ, ಜೂನ್ 7ರಿಂದ ಜೂನ್ 15ರೊಳಗೆ ರಷ್ಯಾ ಪ್ರವಾಸದ ಸೆಂಕೆಂಡ್ ಫೇಸ್ ಬಗ್ಗೆ ನಿಗದಿತ ಮಾಹಿತಿ ಹೊರಹಾಕುವುದಾಗಿ ದುಬೈ ಮೂಲದ ಕಂಪನಿ ತಿಳಿಸಿದೆ.

ಭಾರತದಲ್ಲಿ ಇದೀಗ ಕೇಸ್ ಗಳು ಹೆಚ್ಚಾಗುತ್ತಲೆ ಇದ್ದ ಕಾರಣ ಎಷ್ಟೊ ದೇಶಗಳಿಗೆ ಭಾರತದಿಂದ ಬರುವ ವಿಮಾನವನ್ನು ನಿಲ್ಲಿಸಲಾಗಿದೆ. ಹೀಗಿರುವಾಗ ರಷ್ಯಾ ಭಾರತೀಯರನ್ನು ಹೇಗೆ ಬರಮಾಡಿಕೊಳ್ಳುತ್ತಿದೆ ಎನ್ನುವ ಸಹಜ ಅನುಮಾನ ಇದ್ದೆ ಇದೆ. ಇದಕ್ಕೆ ರಷ್ಯಾ ಸರ್ಕಾರ ಪ್ರತಿಕ್ರಿಯಿಸಿದ್ದು ಭಾರತೀಯರಿಗೆ ರಷ್ಯಾ ಬಾಗಿಲು ಯಾವಾಗಲು ತೆರೆದಿರುತ್ತದೆ. ಯಾವುದೇ ಸಂಕೋಚ ಹಾಗೂ ಭಯವಿಲ್ಲದೆ ರಷ್ಯಾಗೆ ಬಂದು ಲಸಿಕೆ ಪಡೆಯಿರಿ ಹಾಗ ರಷ್ಯಾದ ಸೌಂದರ್ಯವನ್ನು ಅನುಭವಿಸಿ ಎನ್ನುವ ರೀತಿಯಲ್ಲಿ ಭಾರತೀಯರನ್ನು ಸ್ವಾಗತಿಸಿದೆ.

ವ್ಯಾಕ್ಸಿನ್ ಜೊತೆಗೆ ಫಾರಿನ್ ಟೂರ್ ಪ್ಯಾಕೇಜ್ ನಿಜಕ್ಕೂ ಹೊಸ ಕಾನ್ಸೆಪ್ಟ್. ಒಂದು ಕಡೆ ಲಸಿಕೆಯ ಮಾರ್ಕೆಟಿಂಗ್, ಇನ್ನೊಂದು ಕಡೆ ಟೂರಿಸಂ ಡೆವಲಪ್ಮೆಂಟ್. ದುಬೈ ಮೂಲದ ಕಂಪನಿಯ ಪ್ಲಾನ್ ಗೆ ರಷ್ಯಾ ಕೂಡ ತಲೆ ತೂಗಿದೆ. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ರಷ್ಯಾಕ್ಕೆ ಇಂತಾ ಕಷ್ಟ ಕಾಲದಲ್ಲಿ ಪ್ರವಾಸಕ್ಕೆ ಹೋಗ್ತಾರಾ.. ನೋಡಬೇಕು.

The post ರಷ್ಯಾಗೆ ಕರೆದೊಯ್ದು ಸ್ಪುಟ್ನಿಕ್ ವ್ಯಾಕ್ಸಿನೇಷನ್.. ಭಾರತೀಯರಿಗಾಗಿ ವಿಶೇಷ ಟೂರ್ ಪ್ಯಾಕೇಜ್ appeared first on News First Kannada.

Source: newsfirstlive.com

Source link