ವಿಮಾನ ಅಪಘಾತ ಸಂಭವಿಸಿ ನಾಲ್ಕು ಮಂದಿ ಸಾವನ್ನಪ್ಪಿದ ಘಟನೆ ರಷ್ಯಾದ ಕೆಮೆರೊವೊದಲ್ಲಿ ನಡೆದಿದೆ.

ಸ್ಕೈ ಡೈವರ್​ಗಳನ್ನ ಹೊತ್ತ ಎಲ್-410 ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಕೆಲವೊಂದು ವರದಿಗಳ ಪ್ರಕಾರ ನಾಲ್ವರು ಸಾವನ್ನಪ್ಪಿದ್ದು, ಇನ್ನೂ ನಾಲ್ವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಇ

ವಿಮಾನದ ಒಂದು ಎಂಜಿನ್ ವಿಫಲವಾಗಿದೆ ಎಂದು ಪೈಲಟ್‌ಗಳಲ್ಲಿ ಒಬ್ಬರು ಸಂದೇಶ ರವಾನಿಸಿದದ್ದರು. ವಿಮಾನ ವಾಯುನೆಲೆಗೆ ಹಿಂತಿರುಗುತ್ತಿದ್ದ ವೇಳೆ, ಅದರ ರೆಕ್ಕೆ ಮರವೊಂದಕ್ಕೆ ಬಡಿದು ಅಪಘಾತಕ್ಕೀಡಾಯ್ತು ಎನ್ನಲಾಗಿದೆ. ಘಟನೆ ಕುರಿತಂತೆ ತನಿಖೆ ನಡೆಸಲಾಗ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.

The post ರಷ್ಯಾದಲ್ಲಿ ವಿಮಾನ ಅಪಘಾತ: 4 ಸ್ಕೈ ಡೈವರ್​ಗಳ ದುರ್ಮರಣ appeared first on News First Kannada.

Source: newsfirstlive.com

Source link