ರಷ್ಯಾ-ಉಕ್ರೇನ್ ಯುದ್ಧ | ರಷ್ಯಾದ ಯುದ್ಧ ಚಿಹ್ನೆ Z ಮತ್ತು V ಅಕ್ಷರಗಳನ್ನು ನಿಷೇಧಿಸಿದ ಉಕ್ರೇನ್ ಸಂಸತ್ತು | Ukraine Parliament Bans Russian War Symbol Z and V


ರಷ್ಯಾ-ಉಕ್ರೇನ್ ಯುದ್ಧ | ರಷ್ಯಾದ ಯುದ್ಧ ಚಿಹ್ನೆ Z ಮತ್ತು V ಅಕ್ಷರಗಳನ್ನು ನಿಷೇಧಿಸಿದ ಉಕ್ರೇನ್ ಸಂಸತ್ತು

ರಷ್ಯಾದ ಯುದ್ಧ ಟ್ಯಾಂಕರ್

Image Credit source: NDTV

ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗಿ 88ದಿನಗಳಾಗಿದ್ದು, ಉಕ್ರೇನ್ ಸಂಸತ್ತು ರಷ್ಯಾದ ಮಿಲಿಟರಿ ಬಳಸುವ “Z” ಮತ್ತು “V” ಚಿಹ್ನೆಗಳನ್ನು ಭಾನುವಾರ ನಿಷೇಧಿಸಿದೆ.

ಉಕ್ರೇನ್: ರಷ್ಯಾ-ಉಕ್ರೇನ್ (Russia-Ukraine War) ಯುದ್ಧ ಪ್ರಾರಂಭವಾಗಿ 88 ದಿನಗಳಾದವು. ಇನ್ನು ಕೂಡಾ ಯುದ್ದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ರಷ್ಯಾ (Russia) ಉಕ್ರೇನ್ (Ukraine) ಮೇಲೆ ಯುದ್ಧ ಪ್ರಾರಂಭಿಸಿದಾಗಿನಿಂದ ತನ್ನ ಯುದ್ಧ ಟ್ಯಾಂಕರ್ ಮತ್ತು ಸಲಕರಣೆಗಳ ಮೇಲೆ Z ಮತ್ತು V ಅಕ್ಷರಗಳನ್ನು ಬರೆದುಕೊಂಡಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಉಕ್ರೇನ್ ಸಂಸತ್ತು, ರಷ್ಯಾದ ಮಿಲಿಟರಿ ಬಳಸುವ “Z” ಮತ್ತು “V” ಚಿಹ್ನೆಗಳನ್ನು ಭಾನುವಾರ ನಿಷೇಧಿಸಿದೆ. ಆದರೆ ಇದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲಸ್ಕಿ (volodymyr zelensky) ಶೈಕ್ಷಣಿಕ ಅಥವಾ ಐತಿಹಾಸಿಕ ಉದ್ದೇಶಗಳಿಗಾಗಿ ಅವುಗಳನ್ನು ಬಳಸಲು ಅನುಮತಿ ನೀಡಿದ್ದಾರೆ.

ಇದನ್ನು ಓದಿ: ಜಪಾನ್ ತಲುಪಿದ ಪ್ರಧಾನಿ ಮೋದಿ: ಎರಡು ದಿನಗಳ ಕ್ವಾಡ್ ಸಮಾವೇಶದಲ್ಲಿ ಭಾಗಿ

ಅಧ್ಯಕ್ಷ ವೊಲೊಡಿಮಿರ್ ಝೆಲಸ್ಕಿ ಅವರ ನಿರ್ಧಾರಕ್ಕೆ 423 ಸದಸ್ಯರನ್ನು ಹೊಂದಿರುವ ಉಕ್ರೇನ್​ನ ವರ್ಕೋವ್ನಾ ರಾಡಾ ಸಂಸತ್ತಿನ 313 ಸದಸ್ಯರು ಅಧ್ಯಕ್ಷರ ನಿರ್ಧಾರದ ಪರ ಮತ ಚಲಾಯಿಸಿದ್ದಾರೆ. ವಿರೋಧ ಪಕ್ಷದ ಸದಸ್ಯ ಯಾರೋಸ್ಲಾವ್ ಝೆಲೆಜ್ನ್ಯಾಕ್ ಅವರು ಟೆಲಿಗ್ರಾಮ್ ಸಂದೇಶ ಕಳುಹಿಸುವ ಮೂಲಕ ಅಧ್ಯಕ್ಷರ ನಿರ್ಧಾರದ ಪರ ಮತ ಚಲಾಯಿಸಿದರು. ವೀಟೋ ಮೂಲಕ ಮಸೂದೆಯನ್ನು ಅಂಗಿಕಾರಗೊಳಿಸಿರುವ ಝೆಲಸ್ಕಿ ವಸ್ತುಸಂಗ್ರಹಾಲಯ, ಗ್ರಂಥಾಲಯ, ವೈಜ್ಞಾನಿಕ ಕೃತಿಗಳು, ಮರು-ಸಂಗ್ರಹಣೆಗಳು, ಪಠ್ಯಪುಸ್ತಕಗಳು ಮತ್ತು ಪ್ರದರ್ಶನಗಳಲ್ಲಿ ಎರಡು ಚಿಹ್ನೆಗಳನ್ನು ಬಳಸಲು ಕರೆ ನೀಡಿದರು.

ಮೂಲತಃ ರಷ್ಯಾದ ವರ್ಣಮಾಲೆಯಲ್ಲಿ ಎರಡು ಅಕ್ಷರಗಳು ಅಸ್ತಿತ್ವದಲ್ಲಿಲ್ಲ. ಸಂಘರ್ಷದ ಗುರಿಗಳನ್ನು ಉತ್ತೇಜಿಸಲು ಅವುಗಳನ್ನು ವಿಶೇಷವಾಗಿ ರಷ್ಯಾದ ಮಿಲಿಟರಿ ತನ್ನ ವಾಹನಗಳು ಮತ್ತು ಸಲಕರಣೆಗಳ ಮೇಲೆ ವ್ಯಾಪಕವಾಗಿ ಬಳಸುತ್ತಿದೆ.

ಇದನ್ನು ಓದಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜತೆ ರಷ್ಯಾ ಅಧ್ಯಕ್ಷ ಪುಟಿನ್ ಮಗಳ ಡೇಟಿಂಗ್?

ಕಳೆದ ವಾರ ರಷ್ಯಾ ಉಕ್ರೇನ್‌ನ ಪೂರ್ವ ಪ್ರದೇಶದ ಮೇಲೆ ದಾಳಿ ಮಾಡಿದೆ. ಡಾನ್‌ಬಾಸ್ ಮತ್ತು ಮೈಕೊಲೈವ್ ಪ್ರದೇಶಗಳನ್ನು ವೈಮಾನಿಕ ದಾಳಿ ಮತ್ತು ಫಿರಂಗಿ ಗುಂಡಿನ ದಾಳಿಯಿಂದ ಹೊಡೆದಿದೆ. ಭಾನುವಾರ ಉಕ್ರೇನಿಯನ್ ಸಂಸತ್ತು ಇನ್ನೂ 90 ದಿನಗಳವರೆಗೆ ಅಂದರೆ ಆಗಸ್ಟ್ 23 ರವರೆಗೆ ದೇಶದಲ್ಲಿ ಸಮರ ಕಾನೂನಿನ ಅವಧಿಯನ್ನು ವಿಸ್ತರಿಸಿತು.

ವಿದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *