ಬೆಂಗಳೂರು: ರಸ್ತೆಯಲ್ಲಿ ಮೆಡಿಕಲ್​ ವೇಸ್ಟ್​ಗಳನ್ನ ಸುರಿಯುತ್ತಿದ್ದ ನೈಸ್​ ರಸ್ತೆಯ ಮಾಧವ ಆಸ್ಪತ್ರೆಗೆ ಬಿಬಿಎಂಪಿ ಸೀನಿಯರ್​ ಹೆಲ್ತ್ ಇನ್ಸ್​ಸ್ಪೆಕ್ಟರ್​ ಹನುಮಂತ ರಾಜ್​ 50 ಸಾವಿರ ರೂಪಾಯಿ ದಂಡ ಹಾಕಿದ್ದಾರೆ.

ಕಾನೂನಿನ ಪ್ರಕಾರ ಯಾವುದೇ ವೈದ್ಯಕೀಯ ಕಸವನ್ನ ಎಲ್ಲೆಂದ್ರಲ್ಲಿ ಹಾಕುವಂತಿಲ್ಲ, ಆದರೆ ಅದನ್ನ ಮೀರಿ ತನ್ನ ಆಸ್ಪತ್ರೆಯ ಕಸವನ್ನ ಹಾಕಿದ ಆಸ್ಪತ್ರೆಗೆ ಬಿಬಿಎಂಪಿ ದಂಡ ವಿಧಿಸಿದೆ. ಈ ಆಸ್ಪತ್ರೆಯಲ್ಲಿ ಬಳಕೆ ಮಾಡಲಾದ ಪಿಪಿಇ ಕಿಟ್, ಗ್ಲೌಸ್​, ಮಾಸ್ಕ್​, ಔಷಧಿ ಬಾಟಲ್​ಗಳನ್ನ ವಾರ್ಡ್​ ನಂಬರ್​ 72 ಮುದ್ದಿನಪಾಳ್ಯ ರಸ್ತೆಯಲ್ಲಿ ರಾಶಿ ರಾಶಿ ತಂದು ಸುರಿಯುತ್ತಿತ್ತು ಎನ್ನಲಾಗಿದೆ. ಇದನ್ನು ಪರಿಶೀಲಿಸಿದ ಬಿಬಿಎಂಪಿ ಹೆಲ್ತ್​ ಇನ್ಸ್​ಸ್ಪೆಕ್ಟರ್​ ಆಸ್ಪತ್ರೆಗೆ 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

The post ರಸ್ತೆಯಲ್ಲಿ ಮೆಡಿಕಲ್​ ವೇಸ್ಟ್​ ಸುರಿದ ಆಸ್ಪತ್ರೆಗೆ BBMPಯಿಂದ ₹50,000 ದಂಡ appeared first on News First Kannada.

Source: News First Kannada
Read More