ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮುಂದುವರೆದಿದ್ದು ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಳ್ಳರು ಎಗರಿಸಿ ಪರಾರಿಯಾಗಿರುವ ಘಟನೆ ವಿಜಯನಗರದಲ್ಲಿ ನಡೆದಿದೆ.

ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧೆಯೊಬ್ಬರ ಮೇಲೆ ಹಿಂಬದಿಯಿಂದ ಬೈಕ್​ ಮೇಲೆ ಅಟ್ಯಾಕ್​ ಮಾಡಿದ ಖದೀಮರು ಕುತ್ತಿಗೆಯಲ್ಲಿದ್ದ 35 ಗ್ರಾಂ ಚಿನ್ನದ ಸರವನ್ನ ಕಿತ್ತೊಯ್ದಿದ್ದಾರೆ ಎನ್ನಲಾಗಿದೆ. 72 ವರ್ಷದ ಇಂದಿರಮ್ಮ ಎಂಬುವವರೆ ಸರ ಕಳೆದುಕೊಂಡಿರುವ ವೃದ್ಧೆ. ಇನ್ನು ವಿಜಯನಗರ ಪೊಲೀಸ ಠಾಣೆಯಲ್ಲಿ ಇಂದಿರಮ್ಮ ಪ್ರಕರಣ ದಾಖಲಿಸಿದ್ದು ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

The post ರಸ್ತೆಯಲ್ಲಿ ಹೋಗ್ತಿದ್ದ ವೃದ್ಧೆಯ ಸರ ಎಗರಿಸಿದ ಖದೀಮರು appeared first on News First Kannada.

Source: newsfirstlive.com

Source link