ರಸ್ತೆಯಲ್ಲೇ, ಆ್ಯಂಬ್ಯುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸುಸೂತ್ರ ಹೆರಿಗೆ; ‌ತಾಯಿ-ಮಗು ಸುರಕ್ಷಿತ | Woman deliver baby on road travelling to hospital near mulgund gadag by 108 ambulance staff


ರಸ್ತೆಯಲ್ಲೇ, ಆ್ಯಂಬ್ಯುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸುಸೂತ್ರ ಹೆರಿಗೆ; ‌ತಾಯಿ-ಮಗು ಸುರಕ್ಷಿತ

ರಸ್ತೆಯಲ್ಲೇ ಆ್ಯಂಬ್ಯುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸುಸೂತ್ರ ಹೆರಿಗೆ; ‌ತಾಯಿ-ಮಗು ಸುರಕ್ಷಿತ

ಗದಗ: ಗರ್ಭಿಣಿಯೊಬ್ಬರು ಆಸ್ಪತ್ರೆಗೆ ದಾಖಲಾಗುವ ವೇಳೆ ಆ್ಯಂಬ್ಯುಲೆನ್ಸ್​ನಲ್ಲಿಯೇ ಹೆರಿಗೆಯಾಗಿ ಮಗುವಿಗೆ ಜನ್ಮವಿತ್ತ ವಿರಳ ಘಟನೆ ನಡೆದಿದೆ. ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ. ಗದಗ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಹುಬ್ಬಳ್ಳಿ ಆಸ್ಪತ್ರಗೆ ಸದರಿ ಗರ್ಭಿಣಿಯನ್ನು ಚಿಕಿತ್ಸೆಗಾಗಿ ರೆಫರ್ ಮಾಡಲಾಗಿತ್ತು. ಅದರಂತೆ ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆಯೇ ಆ್ಯಂಬ್ಯುಲೆನ್ಸ್​ನಲ್ಲಿ ಹೆರಿಗೆಯಾಗಿದೆ. ಆ್ಯಂಬ್ಯುಲೆನ್ಸ್​ನಲ್ಲಿದ್ದ 108 ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸುಸೂತ್ರ ಹೆರಿಗೆ‌ಯಾಗಿದೆ. ಗಜೇಂದ್ರಗಡ ತಾಲೂಕಿನ ನಿಡಗುಂದಿಕೊಪ್ಪ ಗ್ರಾಮದ ಕವಿತಾ ಪೂಜಾರಿಗೆ ನಗರದ ಖಾಸಗಿ ಆಸ್ಪತ್ರೆಯಿಂದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಬರುತ್ತಿದ್ದ ವೇಳೆ ಹೆರಿಗೆಯಾಗಿದೆ.

ರಕ್ತ ಕಡಿಮೆ ಇದ್ದ ಕಾರಣ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಕಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಖಾಸಗಿ ಆಸ್ಪತ್ರೆಯ ವೈದ್ಯರೂ ಸಹ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಲಹೆ ನೀಡಿದ್ದರು. ಆ ಸಂದರ್ಭದಲ್ಲಿ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಮುಳಗುಂದ ನಾಕಾ ಬಳಿ ಕವಿತಾ ಪೂಜಾರಿಗೆ ಹೆರಿಗೆಯಾಗಿದೆ.

ಕರುಳ ಬಳ್ಳಿ ಮಗುವಿನ ಕುತ್ತಿಗೆಗೆ ಸಿಕ್ಕು ಗರ್ಭಿಣಿ ಪರದಾಡುತ್ತದ್ದರು. ತುರ್ತು ತಜ್ಞರಾದ ರವಿ ಬಡಿಗೇರ್ ಮತ್ತು 108 ಪೈಲೆಟ್ ದಸ್ತಗೀರ್ ಸಾಬ್ ಹುಡೇದ್, ಆಶಾ ಕಾರ್ಯಕರ್ತೆ ಮುತ್ತವ್ವ ಅವರ ತಂಡ ಕವಿತಾ ಪೂಜಾರಿಗೆ ಸುಸೂತ್ರ ಹೆರಿಗೆ ಮಾಡಿಸಿದ್ದಾರೆ. ಸದ್ಯ ಮಗು, ತಾಯಿಗೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆ್ಯಂಬ್ಯುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

TV9 Kannada


Leave a Reply

Your email address will not be published. Required fields are marked *