ಬೆಂಗಳೂರು: ರಸ್ತೆ ಅಪಘಾತದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರಿಗೆ ಬನ್ನೇರುಘಟ್ಟದಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ನಟ ವಿಜಯ್ ಆರೋಗ್ಯದ ಬಗ್ಗೆ ನ್ಯೂಸ್​ಫಸ್ಟ್​ಗೆ ಪ್ರತಿಕ್ರಿಯಿಸಿರುವ ಅಪೊಲೋ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ಅರುಣ್.. ಅಪಘಾತದ ಸಂಭವಿಸಿದ ಕೂಡಲೇ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಬಂದಾಗಲೇ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ನಂತರ ಸ್ಕ್ಯಾನ್​ ಮಾಡಿದಾಗ ಮೆದುಳಿನ ಬಲಭಾಗದಲ್ಲಿ ರಕ್ತಸ್ರಾವವಾಗಿತ್ತು.

ನ್ಯೂರೋ ಸರ್ಜನ್ ಡಾ.ಅರುಣ್ ಎಲ್​​.ನಾಯ್ಕ್

ಹೀಗಾಗಿ, ಅವರಿಗೆ ಮೆದುಳಿನ ಆಪರೇಷನ್ ಅನ್ನು ಇಂದು ಬೆಳಗಿನ ಜಾವ ಮಾಡಿ ಮುಗಿಸಲಾಗಿದೆ. ಮೆದುಳಿಗೆ ಹೊಡೆತ ಬಿದ್ದಿದೆ, 48 ಗಂಟೆಗಳ ಕಾಲ ತುಂಬಾ ನಿರ್ಣಾಯಕವಾಗಿದೆ. ವೆಂಟಿಲೇಟರ್​ ಮೂಲಕವೇ ಚಿಕಿತ್ಸೆ ಮುಂದುವರಿಯುತ್ತಿದೆ.

ಇದರೊಂದಿಗೆ ತೊಡೆ ಮೂಳೆಯ ಶಸ್ತ್ರ ಚಿಕಿತ್ಸೆ ಕೂಡ ನಡೆಸಬೇಕಿದೆ ಅಂತಾ ನ್ಯೂರೋ ಸರ್ಜನ್ ಡಾ. ಅರುಣ್ ನಾಯಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಸಂಚಾರಿ ವಿಜಯ್​ಗೆ ಕಿಚ್ಚನ ಸಹಾಯ; ರಾತ್ರೋರಾತ್ರಿ ಆಪರೇಷನ್​​ಗೆ ವ್ಯವಸ್ಥೆ ಮಾಡಿದ ಸುದೀಪ್

ಇದನ್ನೂ ಓದಿ: ರಸ್ತೆ ಅಪಘಾತ; ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಬಲ ತೊಡೆ, ತಲೆಗೆ ತೀವ್ರ ಪೆಟ್ಟು

The post ರಸ್ತೆ ಅಪಘಾತದಲ್ಲಿ ಸಂಚಾರಿ ವಿಜಯ್​​​ಗೆ ತೀವ್ರ ಪೆಟ್ಟು.. ಚಿಕಿತ್ಸೆ ನೀಡ್ತಿರೋ ವೈದ್ಯರು ಹೇಳಿದ್ದೇನು? appeared first on News First Kannada.

Source: newsfirstlive.com

Source link