ಚಿತ್ರದುರ್ಗ: ಬೈಕ್‍ಗೆ ಗಣಿ ಲಾರಿಯೊಂದು ಡಿಕ್ಕಿಯಾದ ಪರಿಣಾಮ ನೋಟ್‍ಬುಕ್ ತರಲು ಪಟ್ಟಣದ ಬುಕ್ ಸ್ಟೋರ್‌ಗೆ ಬಂದಿದ್ದ ಬಾಲಕನೋರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ನಡೆದಿದೆ. ಇದನ್ನೂ ಓದಿ:  ‘ಕಿರಿಕ್ ಪಾರ್ಟಿ’ ವರ್ಸಸ್ ಲಹರಿ ಆಡಿಯೋ ಸಂಸ್ಥೆ ಫೈಟ್ ಸುಖಾಂತ್ಯ

ನಗರಂಗೆರೆ ಗ್ರಾಮದ ಲಕ್ಷ್ಮೀನಾರಾಯಣ(12) ಮೃತ ಬಾಲಕನಾಗಿದ್ದಾನೆ. ಆದರೆ ಅಧೃಷ್ಟವಶಾತ್ ಬೈಕ್ ಸವಾರ ರಮೇಶ್(28) ಗೆ ಕಾಲು ಹಾಗು ಎದೆ ಭಾಗಕ್ಕೆಬಲವಾದ ಪೆಟ್ಟುಗಳಾಗಿ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಪ್ರಕರಣ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದೂ, ಅಪಘಾತದ ಬಳಿಕ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾಗಬೇಕಿದ್ದ ಕೆಲ ಜನರು ನರಳಾಡುವ ವ್ಯಕ್ತಿಯ ವೀಡಿಯೋ ಮಾಡುತ್ತಾ ಗಾಯಾಳುವಿನ ಆಕ್ರಂದನ ನೋಡುತ್ತ ನಿಂತು ಅಮಾನವೀಯತೆ ಮೆರೆದಿದ್ದಾರೆ.

ಕೆಲ ಸ್ಥಳೀಯರು ತಕ್ಷಣ ಗಾಯಾಳು ರಮೇಶನನ್ನು ಆಸ್ಪತ್ರೆಗೆ ದಾಖಲು ಮಾಡಿ, ಅಪಘಾತದ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೇ ಮೃತನ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಗಾಯಾಳುವಿನ ಮೊಬೈಲ್ ಬಂದ ಫೋನ್ ಕರೆ ಮೂಲಕ ಇಸವರ ವಿಳಾಸ ಹಾಗೂ ಹೆಸರು ಪತ್ತೆಯಾಗಿದ್ದೂ, ತಕ್ಷಣ ಸಂಬಂಧ ಪಟ್ಟವರಿಗೆ ಮಾಹಿತಿಯನ್ನು ರವಾನಿಸಲಾಗಿದೆ.

ಬಳಿಕ ಸ್ಥಳಕ್ಕೆ ಧಾವಿಸಿದ ಚಳ್ಳಕೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದೂ,ಲಾರಿ ಚಾಲಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ದುರ್ವಿಧಿ ಎಂಬಂತೆ ಕಳೆದ ಎರಡು ತಿಂಗಳುಗಳಿಂದ ಮನೆಯಲ್ಲಿಯೇ ಉಳಿದಿದ್ದ ಲಕ್ಷ್ಮೀನಾರಾಯಣ ತನ್ನ ಸಂಬಂದಿ ಜೊತೆ ನೋಟ್‍ಬುಕ್ ತರಲು ಚಳ್ಳಕೆರೆಗೆ ಧಾವಿಸಿದ್ದೂ, ವಾಪಾಸ್ ತೆರಳುವಾಗ ಈ ದುರ್ಘಟನೆ ನಡೆದಿದೆ.

The post ರಸ್ತೆ ಅಪಘಾತ: ನೋಟ್‍ಬುಕ್ ತರಲು ಪಟ್ಟಣಕ್ಕೆ ಬಂದಿದ್ದ ವಿದ್ಯಾರ್ಥಿ ಸಾವು appeared first on Public TV.

Source: publictv.in

Source link