ರಸ್ತೆ ಗುಂಡಿ ಮುಚ್ಚದ ಅಧಿಕಾರಿಗೆ ಅಮಾನತು ಶಿಕ್ಷೆ, ಬಿಬಿಎಂಪಿಯ ಇಇ ಎಂ.ಜಿ.ನಾಗರಾಜು ಅಮಾನತು | BBMP suspend EE mg nagaraju for The omission of duty in bengaluru


ರಸ್ತೆ ಗುಂಡಿ ಮುಚ್ಚದ ಅಧಿಕಾರಿಗೆ ಅಮಾನತು ಶಿಕ್ಷೆ, ಬಿಬಿಎಂಪಿಯ ಇಇ ಎಂ.ಜಿ.ನಾಗರಾಜು ಅಮಾನತು

ಎಂ.ಜಿ.ನಾಗರಾಜು

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ಮುಚ್ಚದ ಅಧಿಕಾರಿಗೆ ಬಿಬಿಎಂಪಿ ಅಮಾನತುಗೊಳಿಸಿ ಶಿಕ್ಷೆ ನೀಡಿದೆ. ಇದೇ ಮೊದಲ ಬಾರಿಗೆ ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ಕಾರ್ಯಪಾಲಕ ಅಭಿಯಂತರ ಅಮಾನತುಗೊಳಿಸಿ ಆದೇಶ ನೀಡಲಾಗಿದೆ.

ಬಿಬಿಎಂಪಿ ಪೂರ್ವ ವಲಯದ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಇಇ ಎಂ.ಜಿ.ನಾಗರಾಜು ಅಮಾನತುಗೊಳಿಸಲಾಗಿದೆ. ರಸ್ತೆ ಗುಂಡಿಗಳನ್ನ ಮುಚ್ಚಲು ಸೂಚಿಸಿದ್ರು ಸಹ ರಸ್ತೆ ಗುಂಡಿಗಳನ್ನ ಮುಚ್ಚದೆ ಕರ್ತವ್ಯ ಲೋಪ ಎಸಗಿದ ಕಾರಣ ಹಾಗೂ ಸಾರ್ವಜನಿಕರ ಹಿತಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಹಿನ್ನೆಲೆ ನಾಗರಾಜು ಅಮಾನತು ಮಾಡಿ ಬಿಬಿಎಂಪಿ ವಿಶೇಷ ಆಯುಕ್ತ ಆದೇಶ ಹೊರಡಿಸಿದ್ದಾರೆ.

ಹೇಳಿದ್ದು 2 ಸಾವಿರ ರಸ್ತೆ ಗುಂಡಿ, ಆದ್ರೆ ಮುಚ್ಚಿದ್ದು 31 ಸಾವಿರ
ಗುತ್ತಿಗೆದಾರನದ್ದು ಒಂದು ಲೆಕ್ಕವಾದ್ರೆ ಬಿಬಿಎಂಪಿದೊಂದು ಲೆಕ್ಕವಾಗಿದೆ. ಈ ಎರಡು ಲೆಕ್ಕಾಚಾರಕ್ಕೆ ಎಲ್ಲೂ ತಾಳೆಯೇ ಆಗುತ್ತಿಲ್ಲ. ಲೆಕ್ಕಾಚಾರದಲ್ಲಿ ಅಜಗಜಾಂತರ ಹೇಗೆ ಆಯಿತೆಂಬ ಪ್ರಶ್ನೆ ಉದ್ಭವಿಸಿದೆ. ನಗರದಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ, JMC ಕಂಪನಿಗೆ ಗುತ್ತಿಗೆ ನೀಡಿತ್ತು. ಹೀಗಾಗಿ 2 ತಿಂಗಳಲ್ಲಿ 31 ಸಾವಿರ ರಸ್ತೆ ಗುಂಡಿ ಮುಚ್ಚಿದ್ದಾಗಿ JMC ಕಂಪನಿ ಲೆಕ್ಕ ನೀಡಿದೆ. ಆದ್ರೆ ಬೆಂಗಳೂರಿನಲ್ಲಿ ಕೇವಲ ಒಂದೆರಡು ಸಾವಿರ ರಸ್ತೆ ಗುಂಡಿಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಸದ್ಯ ಈಗ ಗುಂಡಿಗಳ ಲೆಕ್ಕಚಾರದಲ್ಲಿ ಗೊಂದಲ ಉಂಟಾಗಿದೆ.

JMC ಕಂಪನಿ ಆಗಸ್ಟ್ ತಿಂಗಳ ಅಂತ್ಯದಿಂದ ಗುಂಡಿ ಮುಚ್ಚುವ ಕಾರ್ಯ ಶುರು ಮಾಡಿದ್ದು ಈವರೆಗೆ 31 ಸಾವಿರ ರಸ್ತೆ ಗುಂಡಿ ಮುಚ್ಚಿದ್ದಾಗಿ ಲೆಕ್ಕ ನೀಡಿದೆ. ಆದ್ರೆ ಬಿಬಿಎಂಪಿ ಹೇಳಿರುವುದು ಕೇವಲ ಒಂದೆರಡು ಸಾವಿರ ಲೆಕ್ಕ. ನಗರದಲ್ಲಿ 1-2 ಸಾವಿರ ರಸ್ತೆ ಗುಂಡಿ ಇದೆ ಎಂದು ಸೆಪ್ಟೆಂಬರ್‌ನಲ್ಲಿ BBMP ಲೆಕ್ಕ ಕೊಟ್ಟಿತ್ತು. ಬಿಬಿಎಂಪಿ ಪ್ರಕಾರ ರಸ್ತೆ ಗುಂಡಿ ಇರೋದು 1-2 ಸಾವಿರ. ಆದ್ರೆ ಗುತ್ತಿಗೆದಾರ 31 ಸಾವಿರ ರಸ್ತೆ ಗುಂಡಿ ಮುಚ್ಚಿದ್ದು ಹೇಗೆ? ರಸ್ತೆ ಗುಂಡಿ ಲೆಕ್ಕ ತಪ್ಪಾಗಿ ನೀಡುತ್ತಿರುವುದು ಯಾರೆಂಬ ಪ್ರಶ್ನೆ ಎದುರಾಗಿದೆ. ರಸ್ತೆ ಗುಂಡಿ ಮುಚ್ಚಲು 760 ಲೋಡ್ ಟಾರ್ ಬಳಸಿದ್ದ ಲೆಕ್ಕ ನೀಡಲಾಗಿದ್ದು ಗುತ್ತಿಗೆದಾರನ ಬಳಿ 7 ಕೋಟಿ ರೂಪಾಯಿ ಬಿಲ್ ಲೆಕ್ಕ ಇದೆ.

ಇದನ್ನೂ ಓದಿ: ರಸ್ತೆ, ಪಾರ್ಕ್​, ಮೈದಾನಕ್ಕೆ ಪುನೀತ್​ ಹೆಸರು; ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತಾ ಹೇಳೋದೇನು?

ಲೆಕ್ಕಚಾರದಲ್ಲಿ ಗೊಂದಲ! ಹೇಳಿದ್ದು 2 ಸಾವಿರ ರಸ್ತೆ ಗುಂಡಿ, ಆದ್ರೆ ಮುಚ್ಚಿದ್ದು 31 ಸಾವಿರ; 7 ಕೋಟಿ ಬಿಲ್ ನೋಡಿ ತಲೆ ಮೇಲೆ ಕೈ ಹೊತ್ತ ಬಿಬಿಎಂಪಿ

TV9 Kannada


Leave a Reply

Your email address will not be published. Required fields are marked *