ರಸ್ತೆ ದಾಟುತ್ತಿದ್ದ ಕರಡಿಗೆ ಕೀಟಲೆ.. ‘ತಂಟೆಗೆ ಬಂದ್ರೆ ಹುಷಾರ್’​ ಎಂದ ಜಾಂಬವಂತ

ರಸ್ತೆ ದಾಟುತ್ತಿದ್ದ ಕರಡಿಗೆ ಕೀಟಲೆ.. ‘ತಂಟೆಗೆ ಬಂದ್ರೆ ಹುಷಾರ್’​ ಎಂದ ಜಾಂಬವಂತ

ಮೈಸೂರು: ಅಭಯಾರಣ್ಯ ಪ್ರದೇಶದ ರಸ್ತೆಗಳಲ್ಲಿ ಹೋಗುವಾಗ ಜಾಗೃತೆಯಿಂದ ಹೋಗಿ, ಪ್ರಾಣಿ-ಪಕ್ಷಿಗಳಿಗೆ ಯಾವುದೇ ತೊಂದರೆ ಮಾಡಬೇಡಿ ಎಂದು ಪದೇ ಪದೇ ಎಚ್ಚರಿಕೆಯನ್ನ ನೀಡಲಾಗುತ್ತೆ. ಆದರೆ ಕೆಲವು ವಾಹನ ಚಾಲಕರು ಪ್ರಾಣಿಗಳ ಜೊತೆ ತುಂಟಾಟಕ್ಕೆ ಇಳಿಯುತ್ತಾರೆ. ಅದರಂತೆ ಇತ್ತೀಚೆಗೆ ಕರಡಿ ಜೊತೆ ಮಂಗ್ಯಾಸಕ್ಕೆ ಮುಂದಾಗಿದ್ದ ವಿಡಿಯೋ ಒಂದು ವೈರಲ್ ಆಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕರಡಿಯೊಂದು ರಸ್ತೆ ದಾಟುತ್ತಿತ್ತು. ಈ ವೇಳೆ ವಾಹನವೊಂದು ಮುಂದೆ ಬಂದಿದೆ. ಕರಡಿ ನೋಡಿದ ಚಾಲಕ ಅಲ್ಲಿಯೇ ಕಾರನ್ನ ನಿಲ್ಲಿಸುವ ಬದಲಾಗಿ, ಕರಡಿ ಹತ್ತಿರವೇ ಚಲಾಯಿಸಿಕೊಂಡು ಹೋಗಿದ್ದಾನೆ. ಇದಕ್ಕೆ ಕೋಪಿಸಿಕೊಂಡ ಕರಡಿ ಎರಡು ಕಾಲಲ್ಲಿ ನಿಂತು ಅಟ್ಯಾಕ್ ಮಾಡಲು ಮುಂದಾಗಿದೆ. 

ನಂತರ ಕಾರಿನಲ್ಲಿದ್ದವರು ಫೋಟೋ ತೆಗಿ ಅಂತಾ ಜೋರಾಗಿ ಕೂಗಿಕೊಂಡಿದ್ದಾರೆ. ನಂತರ ಅಲ್ಲಿಂದ ಕರಡಿ ಕಾಲ್ಕಿತ್ತಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

The post ರಸ್ತೆ ದಾಟುತ್ತಿದ್ದ ಕರಡಿಗೆ ಕೀಟಲೆ.. ‘ತಂಟೆಗೆ ಬಂದ್ರೆ ಹುಷಾರ್’​ ಎಂದ ಜಾಂಬವಂತ appeared first on News First Kannada.

Source: newsfirstlive.com

Source link