ಕೊಪ್ಪಳ: ರಸ್ತೆ ದುರಸ್ತಿಗೆ ಆಗ್ರಹಿಸಿದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದ ಯವಕನ ಮೇಲೆ, ಪೊಲೀಸ್ ಅಧಿಕಾರಿಗಳು ಎಫ್ಐಆರ್ ಹಾಕೋ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಾರಟಗಿ ತಾಲೂಕು ಉಳೇನೂರು ಗ್ರಾಮದ ವೃತ್ತಿಯಲ್ಲಿ ಎಂಜೀನಿಯರ್ ಆಗಿರುವ ಸುರೇಶ್ ಮಡಿವಾಳರ್ ಎಂಬ ಯುವಕ ತಮ್ಮೂರಿನ ರಸ್ತೆ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿದ್ದ. ಈ ವೇಳೆ ಅಧಿಕಾರಿಗಳನ್ನು ಪ್ರಶ್ನಿಸಿ ಕಿಡಿಕಾರಿ ಆ ವಿಡಿಯೋವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ತಲುಪಿಸಿದ್ದ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಯುವಕನ ಮನೆಗೆ ಬಂದಿದ್ದು ಪೊಲೀಸ್ ಠಾಣೆಗೆ ಆಗಮಿಸುವಂತೆ ಹೇಳಿದ್ದಾರೆ. ಯುವಕ ಅದನ್ನು ನಿರಾಕರಿಸಿದ್ದು ಠಾಣೆಗೆ ಆಗಮಿಸದಿದ್ದರೆ ಎಫ್ಐಆರ್ ದಾಖಲಿಸೋದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ.