ರಸ್ತೆ ದುರಸ್ಥಿಗಾಗಿ ಪ್ರತಿಭಟಿಸಿದವರ ಮೇಲೆಯೇ ಎಫ್ಐಆರ್ ದಾಖಲಿಸಿದ ಪೊಲೀಸರು!

ರಸ್ತೆ ದುರಸ್ಥಿಗಾಗಿ ಪ್ರತಿಭಟಿಸಿದವರ ಮೇಲೆಯೇ ಎಫ್ಐಆರ್ ದಾಖಲಿಸಿದ ಪೊಲೀಸರು!

ದಾವಣಗೆರೆ: ರಸ್ತೆ ದುರಸ್ಥಿಗಾಗಿ ಪ್ರತಿಭಟನೆ ಮಾಡಿದ 9 ಜನರ ಮೇಲೆ ಎಫ್ಐಆರ್ ದಾಖಲಿಸಿದ ಘಟನೆ ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ.

ತಾಲೂಕಿನ ಸಾರಥಿ, ದೀಟೂರು, ಚಿಕ್ಕಬಿದರಿ ಗ್ರಾಮಗಳ ಮಧ್ಯ 10 ವರ್ಷದಿಂದ ಸರಿಯಾದ ರಸ್ತೆ ಇಲ್ಲವಾದರಿಂದ ರಸ್ತೆಯನ್ನು ದುರಸ್ತಿ ಮಾಡುವಂತೆ ಅಕ್ಕ ಪಕ್ಕದ ಗ್ರಾಮದ 50ಕ್ಕೂ ಅಧಿಕ ಜನ ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರತಿಭಟನಾಕಾರರು ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಪ್ರತಿಭಟನೆಗೆ ಯಾವುದೇ ಅನುಮತಿ ಪಡೆದಿಲ್ಲ ಎಂದು ಆರೋಪಿಸಿ ಕೋವಿಡ್​ ನಿಯಮ ಉಲ್ಲಂಘನೆ ಆರೋಪದಡಿ 9 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಪೊಲೀಸರ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

The post ರಸ್ತೆ ದುರಸ್ಥಿಗಾಗಿ ಪ್ರತಿಭಟಿಸಿದವರ ಮೇಲೆಯೇ ಎಫ್ಐಆರ್ ದಾಖಲಿಸಿದ ಪೊಲೀಸರು! appeared first on News First Kannada.

Source: newsfirstlive.com

Source link