ರಸ್ತೆ ಬದಿ ಹೋಟೆಲ್​ನಲ್ಲಿ ಊಟ ಮಾಡಿದ ಈ ಸ್ಟಾರ್​ ನಟನನ್ನು ಗುರುತಿಸುತ್ತೀರಾ? ಇಲ್ಲಿದೆ ವೈರಲ್ ವಿಡಿಯೋ | Kartik Aaryan Eat Road Side food after Bhool Bhulaiyaa 2 success


ರಸ್ತೆ ಬದಿ ಹೋಟೆಲ್​ನಲ್ಲಿ ಊಟ ಮಾಡಿದ ಈ ಸ್ಟಾರ್​ ನಟನನ್ನು ಗುರುತಿಸುತ್ತೀರಾ? ಇಲ್ಲಿದೆ ವೈರಲ್ ವಿಡಿಯೋ

ಕಾರ್ತಿಕ್ ಆರ್ಯನ್

ಕಾರ್ತಿಕ್ ಆರ್ಯನ್ ಅವರನ್ನು ಹೊರಗಿನವರು ಎಂದು ಟ್ರೀಟ್ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದವು. ಇವೆಲ್ಲದಕ್ಕೂ ‘ಭೂಲ್​ ಭುಲಯ್ಯ 2’ ಸಿನಿಮಾ ಯಶಸ್ಸಿನ ಮೂಲಕ ಅವರು ಉತ್ತರ ನೀಡಿದ್ದಾರೆ.

ಸೆಲೆಬ್ರಿಟಿಗಳು (Celebrity) ಸದಾ ಲೆವೆಲ್ ಕಾಯ್ದುಕೊಂಡು ಹೋಗೋಕೆ ಪ್ರಯತ್ನಿಸುತ್ತಾರೆ. ಐಷಾರಾಮಿ ಹೋಟೆಲ್​​ಗಳಲ್ಲಿ ಊಟ ಸವಿಯುತ್ತಾರೆ. ಓಡಾಡುವುದು ಐಷಾರಾಮಿ ಕಾರಿನಲ್ಲೇ. ಆದರೆ, ಕೆಲವರು ಹಾಗಲ್ಲ. ಸೆಲೆಬ್ರಿಟಿ ಪಟ್ಟ ಸಿಕ್ಕರೂ ಜನಸಾಮಾನ್ಯರಂತೆ ಇರಲು ಬಯಸುತ್ತಾರೆ. ಈ ಸಾಲಿಗೆ ನಟ ಕಾರ್ತಿಕ್ ಆರ್ಯನ್ (Kartik Aryan) ಕೂಡ ಸೇರುತ್ತಾರೆ. ‘ಭೂಲ್​ ಭುಲಯ್ಯ 2’ (Bhool Bhulaiyaa) ಮೂಲಕ ದೊಡ್ಡ ಯಶಸ್ಸು ಕಂಡ ಅವರು ರಸ್ತೆ ಬದಿಯ ಹೋಟೆಲ್​ನಲ್ಲಿ ಊಟ ಸವಿದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾರ್ತಿಕ್ ಆರ್ಯನ್ ಅವರು ಯಾವುದೇ ಗಾಡ್​ ಫಾದರ್ ಇದ್ದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರಲ್ಲ. ಸ್ವಂತ ಪ್ರಯತ್ನದಿಂದ ಅವರು ಬಾಲಿವುಡ್​ನಲ್ಲಿ ನೆಲೆ ಕಂಡುಕೊಂಡರು. ಅವರನ್ನು ಹೊರಗಿನವರು ಎಂದು ಟ್ರೀಟ್ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದವು. ಇವೆಲ್ಲದಕ್ಕೂ ‘ಭೂಲ್​ ಭುಲಯ್ಯ 2’ ಸಿನಿಮಾ ಯಶಸ್ಸಿನ ಮೂಲಕ ಅವರು ಉತ್ತರ ನೀಡಿದ್ದಾರೆ. ಇಂದು (ಮೇ 28) ಈ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಚಿತ್ರದಿಂದ ಅವರ ವೃತ್ತಿ ಜೀವನಕ್ಕೆ ಮೈಲೇಜ್ ಸಿಕ್ಕಿದೆ. ಇಷ್ಟು ದೊಡ್ಡ ಯಶಸ್ಸು ಸಿಕ್ಕರೂ ಕಾರ್ತಿಕ್ ಆರ್ಯನ್ ಸರಳತೆ ಮೆರೆಯುವುದನ್ನು ಮರೆತಿಲ್ಲ.

‘ಭೂಲ್​ ಭುಲಯ್ಯ 2’ ಪ್ರಮೋಷನ್​ಗೆ ಕಾರ್ತಿಕ್ ಪುಣೆಗೆ ತೆರಳಿದ್ದಾರೆ. ಮುಂಜಾನೆ 2 ಗಂಟೆ ಸುಮಾರಿಗೆ ಅವರು ರಸ್ತೆ ಬದಿಯ ಅಂಗಡಿಯಲ್ಲಿ ಊಟ ಮಾಡಿದ್ದಾರೆ. ಈ ವೇಳೆ ಅವರ ಮುಖದಲ್ಲಿ ಸಂತಸ ಇತ್ತು. ‘ಸಿನಿಮಾದ ಕಲೆಕ್ಷನ್ ನೂರು ಕೋಟಿ ರೂಪಾಯಿ ದಾಟಿದೆ. ಹೀಗೆ ಊಟು ಮಾಡುತ್ತಿರುವುದು ನನ್ನ ನಿಜವಾದ ಖುಷಿ. ಎಲ್ಲರೂ ಒಂದೇ ರೀತಿಯ ಆಹಾರ ತಿನ್ನುತ್ತಾರೆ. ನಾನೇನು ಮಾಡಲು ಆಗುತ್ತದೆ. ಚಿತ್ರ 100 ಕೋಟಿ ಮಾಡಿದೆ, ಇಲ್ಲಿ ಪಾಪಡ್ ತಿನ್ನುತ್ತಿದ್ದೇನೆ’ ಎಂದಿದ್ದಾರೆ ಅವರು.

ಕಾರ್ತಿಕ್ ಆರ್ಯನ್​ ಸರಳತೆ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಎಲ್ಲಾ ಹೀರೋಗಳು ಈ ರೀತಿ ಇರಬೇಕು ಎನ್ನುವ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ಈ ಮೊದಲು ಕೂಡ ಅವರು ಇದೇ ರೀತಿಯ ವಿಡಿಯೋ ವೈರಲ್ ಆಗಿತ್ತು. ಮುಂಬೈನಲ್ಲಿ ರಸ್ತೆ ಬದಿ ಅಂಗಡಿಗೆ ಲ್ಯಾಂಬೋರ್ಗಿನಿಯಲ್ಲಿ ಬಂದು ಸ್ಟ್ರೀಟ್ ಫುಡ್ ತಿಂದಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *