Categories
News

ರಸ್ತೆ ಮಧ್ಯೆ ಕೆಟ್ಟು ನಿಂತ ಆ್ಯಂಬುಲೆನ್ಸ್.. ಮೃತದೇಹಗಳ ವಾಸನೆಗೆ ಓಡಿಹೋದ್ರು ಜನರು..

ಹಾವೇರಿ: ಜಿಲ್ಲೆಯ ಅರೋಗ್ಯ ಇಲಾಖೆ ಮಹಾ ಯಡವಟ್ಟಿನ ಕೆಲಸವೊಂದನ್ನ ಮಾಡಿಕೊಂಡಿದೆ. ಕೊರೊನಾ ಸೋಂಕಿತರ ಮೃತ ದೇಹ ಸಾಗಿಸಲು ಗುಜರಿಗೆ ಹೋಗುವ ವಾಹನ ಬಳಕೆ ಮಾಡುತ್ತಿದ್ದು ಗ್ರಾಮದ ನಡು ಬೀದಿಯಲ್ಲಿ ಸರ್ಕಾರಿ ಆ್ಯಂಬುಲೆನ್ಸ್ ಕೆಟ್ಟು ನಿಂತ ಘಟನೆ ನಡೆದಿದೆ.

ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಹಾವೇರಿ ತಾಲೂಕಿನ ಕನಕಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು ಮೂರು ಗಂಟೆಗೂ ಹೆಚ್ಚು ಕಾಲ ಶವ ಸಾಗಿಸುವ ವಾಹ ಕೆಟ್ಟು ನಿಂತಿತ್ತು.

ಆ್ಯಂಬುಲೆನ್ಸ್​ನಲ್ಲಿದ್ದ ಇಬ್ಬರು ಸೋಂಕಿತರ ಮೃತ ದೇಹಗಳು ವಾಸನೆ ಕಂಡುಹಿಡಿದು ವಿಚಾರಿಸಿದಾಗ ಡ್ರೈವರ್ ಸತ್ಯ ಹೇಳಿದ್ದಾನೆ ಎನ್ನಲಾಗಿದೆ, ನಂತರ ಭಯಬೀತಗೊಂಡ ಜನರು ಅ್ಯಂಬುಲೆನ್ಸ್ ನಿಂದ ದೂರ ಓಡಿಹೋಗಿದ್ದಾರೆ ಎನ್ನಲಾಗಿದೆ.

ಹಿರೇಕೆರೂರು ತಾಲೂಕಿನ ಹಂಸಬಾವಿ ಹಾಗೂ ಅರಳಿಕಟ್ಟಿ ಗ್ರಾಮಗಳಿಗೆ ಮೃತದೇಹ ಸಾಗಿಸುತ್ತಿದ್ದಾಗ ಅಂಬುಲೆನ್ಸ್​ ಕೆಟ್ಟು ನಿಂತಿದೆ. ಇನ್ನು ಪರ್ಯಾಯ ವಾಹನ ಸಿಗದೆ ಆ್ಯಂಬುಲೆನ್ಸ್ ಮೂರು ತಾಸು ನಿಂತಲ್ಲಿಯೇ ನಿಂತಿತ್ತು.

The post ರಸ್ತೆ ಮಧ್ಯೆ ಕೆಟ್ಟು ನಿಂತ ಆ್ಯಂಬುಲೆನ್ಸ್.. ಮೃತದೇಹಗಳ ವಾಸನೆಗೆ ಓಡಿಹೋದ್ರು ಜನರು.. appeared first on News First Kannada.

Source: newsfirstlive.com

Source link

Leave a Reply