‘ರಹಾನೆ ಫಾರ್ಮ್​​ಗೆ ಬರೋಕೆ ಒಂದೇ ಒಂದು ಇನ್ನಿಂಗ್ಸ್​ ಸಾಕು’ ಚೇತೇಶ್ವರ್ ಪೂಜಾರ ಭರವಸೆ

ಭಾರತ ತಂಡದ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ ತನ್ನ ಫಾರ್ಮ್​​ ಕಳೆದುಕೊಂಡ ಕಾರಣ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಈ ಹಿಂದೆ ತವರಿನಲ್ಲಿ ನಡೆದ ಇಂಗ್ಲೆಂಡ್​ ಸರಣಿಯಲ್ಲಂತೂ ಸಾಧಾರಣ ಪ್ರದರ್ಶನ ತೋರಿದ ಮೇಲಂತೂ ಹಲವರು ಅಜಿಂಕ್ಯಾ ರಹಾನೆಯನ್ನು ಟೀಕಿಸಿದ್ದರು. ರಹಾನೆ ಇನ್ನೂ ಟೀಮ್ ಇಂಡಿಯಾದಲ್ಲಿ ಆಡುತ್ತಿದ್ದಾರೆ ಎಂದರೆ ಅದು ಅದೃಷ್ಟ ಎಂದು ಗೇಲಿ ಮಾಡಿದ್ದರು. ಈ ಬೆನ್ನಲ್ಲೇ ರಹಾನೆ ಬೆನ್ನಿಗೆ ಟೀಂ ಇಂಡಿಯಾ ಟೆಸ್ಟ್​​ ಉಪನಾಯಕ ಚೇತೇಶ್ವರ್ ಪೂಜಾರ ನಿಂತಿದ್ದಾರೆ.

ಈ ಸಂಬಂಧ ಮಾತಾಡಿದ ಚೇತೇಶ್ವರ್ ಪೂಜಾರ, ಟೆಸ್ಟ್​ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರಹಾನೆ ಶೀಘ್ರದಲ್ಲಿ ಲಯಕ್ಕೆ ಮರಳಲಿದ್ದಾರೆ. ರಹಾನೆ ಒಬ್ಬ ಅದ್ಭುತ ಆಟಗಾರ. ಎಲ್ಲರಿಗೂ ಜೀವನದಲ್ಲಿ ಕಷ್ಟ ಎದುರಾಗಲಿದೆ. ರಹಾನೆ ಲಯಕ್ಕೆ ಒಂದೇ ಒಂದು ಇನ್ನಿಂಗ್ಸ್​ ಸಾಕು ಎಂದು ಅಭಿಪ್ರಾಯಪಟ್ಟರು.

News First Live Kannada

Leave a comment

Your email address will not be published. Required fields are marked *