‘ರಹಾನೆ ಬದಲಿಗೆ ಈ ಆಟಗಾರನಿಗೆ ಅವಕಾಶ ನೀಡಬೇಕಿತ್ತು’- ಗಂಭೀರ್​​ ಆಕ್ರೋಶ


ಸೌತ್​​ ಆಫ್ರಿಕಾ ವಿರುದ್ಧದ ಟೀಂ ಇಂಡಿಯಾ ಮೂರನೇ ಟೆಸ್ಟ್​ ಕೇಪ್​ ಟೌನ್​ನಲ್ಲಿ ನಡೆಯುತ್ತಿದೆ. ಈಗ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್​​ ಗಂಭೀರ್​​ ತಂಡದ ಪ್ಲೇಯಿಂಗ್​​​​ ಇಲೆವೆನ್​ ಆಯ್ಕೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಈ ಸಂಬಂಧ ಮಾತಾಡಿದ ಗೌತಮ್​​ ಗಂಭೀರ್​​, ಕೊಹ್ಲಿ ಕಮ್​ಬ್ಯಾಕ್​ನಿಂದ ಹನುಮ ವಿಹಾರಿಗೆ ಕೊಕ್​ ನೀಡಲಾಗಿದೆ. ನಾನ ಆಗಿದ್ರೆ ವಿಹಾರಿಗೆ ಅವಕಾಶ ನೀಡಿ ಅಜಿಂಕ್ಯಾ ರಹಾನೆಗೆ ಕೊಕ್​​ ನೀಡ್ತಿದ್ದೆ ಎಂದಿದ್ದಾರೆ.

ಎಷ್ಟು ಬಾರಿ ಅವಕಾಶ ನೀಡಿದ್ರೂ ರಹಾನೆ ಎಡವುತ್ತಲೇ ಇದ್ದಾರೆ. ಕೇವಲ 9 ರನ್​ ಗಳಿಸಿ ನಿರಾಸೆ ಮೂಡಿಸಿದ್ದಾರೆ. ಇವರ ಬದಲಿಗೆ ವಿಹಾರಿಗೆ ಅವಕಾಶ ನೀಡಿದ್ರೆ ಉತ್ತಮವಾಗಿ ಆಡೋರು. ರಹಾನೆಗೆ ಚಾನ್ಸ್​ ನೀಡಿ ಟೀಂ ಇಂಡಿಯಾ ಯುವ ಆಟಗಾರರಿಗೆ ಅನ್ಯಾಯ ಮಾಡಲಾಗ್ತಿದೆ ಎಂದರು.

News First Live Kannada


Leave a Reply

Your email address will not be published. Required fields are marked *