ರಾಕಿಂಗ್​​ ಸ್ಟಾರ್​​ ಯಶ್​​ ಕ್ಷಮೆ ಕೇಳಿದ ಆಮೀರ್​​ ಖಾನ್; ಇದರ ಹಿಂದಿದೆ ಒಂದು ಕಾರಣ


ಬಹುನಿರೀಕ್ಷಿತ ರಾಕಿಂಗ್​​ ಸ್ಟಾರ್​​ ಯಶ್​​ ಕೆಜಿಎಫ್​​-2 ಸಿನಿಮಾ ಎದುರಿಗೆ ನಟ ಆಮೀರ್​​ ಖಾನ್​​​ ‘ಲಾಲ್​ ಸಿಂಗ್​ ಚಡ್ಡಾ’ ತೆರೆಗೆ ಬರುತ್ತಿದೆ. ಒಂದೇ ದಿನ ಏಪ್ರಿಲ್​ 14ರಂದು ಎರಡು ದೊಡ್ಡ ಬಜೆಟ್​ ಸಿನಿಮಾಗಳು ತೆರೆಗೆ ಬರುತ್ತಿರುವ ಕಾರಣ ಬಾಕ್ಸಾಫೀಸ್​​ ಕ್ಲಾಶ್​​ ಆಗಲಿದೆ. ಈ ಬೆನ್ನಲ್ಲೀಗ ಈ ಎಲ್ಲಾ ಚರ್ಚೆಗೆ ಬಾಲಿವುಡ್​​ ನಟ ಆಮೀರ್​​ ಖಾನ್​​​​ ತೆರೆ ಎಳೆದಿದ್ದಾರೆ. ಈ ಸಂಬಂಧ ಯಶ್​​ ಬಳಿ ಕ್ಷಮೆ ಕೇಳಿರುವ ಆಮೀರ್​​ ಖಾನ್​ ಸ್ಪಷ್ಟನೆಯೂ ನೀಡಿದ್ದಾರೆ.

ನಾನು ಎಂದು ತರಾತುರಿಯಲ್ಲಿ ಕೆಲಸ ಮುಗಿಸೋದಿಲ್ಲ. ನಿಧಾನವಾಗಿಯೇ ಎಲ್ಲಾ ಕೆಲಸವನ್ನು ಮಾಡುತ್ತೇನೆ. ಹೀಗಾಗಿ ಲಾಲ್​ ಸಿಂಗ್​ ಚಡ್ಡಾ ಸಿನಿಮಾ ಡಿಲೇ ಆಯ್ತು. ಇದಕ್ಕೆ ನಾನು ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ ಎಂದರು ಆಮೀರ್​​ ಖಾನ್​​.

ನಾನು ಮೊದಲ ಬಾರಿಗೆ ಸಿಖ್​ ಅವತಾರ ತಾಳಿದ್ದೇನೆ. ಏಪ್ರಿಲ್​ 14 ಬೈಸಾಖಿ ದಿನ. ನಾನು ಅಂದೇ ಸಿನಿಮಾ ರಿಲೀಸ್​ ಮಾಡಬೇಕಿದೆ. ಈ ಸಿನಿಮಾ ರಿಲೀಸ್​ ಡೇಟ್​ ಫೈನಲ್​​​ ಮಾಡುವ ಮುನ್ನ ಯಶ್​​ ಜೊತೆ ಮಾತಾಡಿದ್ದೇನೆ. ಇದಕ್ಕಾಗಿ ಡೈರೆಕ್ಟರ್​ ಪ್ರಶಾಂತ್​​ ನೀಲ್​​, ಯಶ್​ ಬಳಿ ಕ್ಷಮೆ ಕೇಳಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಕೆಜಿಎಫ್​​​-2 ಎದುರು ಲಾಲ್​ ಸಿಂಗ್​ ಚಡ್ಡಾ; ಅಮೀರ್​​ ಖಾನ್​​ರನ್ನು ಮಕಾಡೆ ಮಲಗಿಸುತ್ತಾರಾ ಯಶ್​​?

ನಮ್ಮ ಸಿನಿಮಾ ಏಪ್ರಿಲ್​ 14ರಂದು ಏಕೆ ತೆರೆಮೇಲೆ ತರುತ್ತಿದ್ದೇವೆ ಎಂದು ವಿವರಿಸಿದ್ದೇನೆ. ನನ್ನನ್ನು ಅರ್ಥ ಮಾಡಿಕೊಂಡು ಸಿನಿಮಾ ರಿಲೀಸ್​​ ಮಾಡಿ ಎಂದರು. ಯಶ್​ ಜತೆ ನಾನು ಕಾಲ್​​ ಮಾತಾಡಿದೆ, ಅವರು ನಡೆದುಕೊಂಡ ರೀತಿ ಇಷ್ಟವಾಯ್ತು ಎಂದು ಹೇಳಿದರು.

News First Live Kannada


Leave a Reply

Your email address will not be published. Required fields are marked *