ಕೆಲವು ದಿನಗಳ ಹಿಂದಷ್ಟೆ ನಟ ರಾಕಿಂಗ್​ ಸ್ಟಾರ್​ ಯಶ್​, ಚಿತ್ರೋದ್ಯಮದ ಸದಸ್ಯರಿಗೆ ಹಣಕಾಸಿನ ನೆರವು ನೀಡೋದಾಗಿ ಅಧಿಕೃತವಾಗಿ ಅನೌನ್ಸ್​​ ಮಾಡಿದ್ದರು. ಅದರಂತೆ ಎರಡು ದಿನಗಳ ಹಿಂದೆ 3000 ಕಾರ್ಮಿಕರ ಅಕೌಂಟ್​​ಗಳಿಗೆ ತಲಾ 5000 ರೂಪಾಯಿಗಳನ್ನ ಜಮಾ ಮಾಡಿದ್ದಾರೆ. ಎಲ್ಲಾ ವರ್ಗದ 3000 ಸದಸ್ಯರಿಗೆ ತಲಾ 5000 ರೂಪಾಯಿಗಳಂದ್ರೆ ಸರಿ ಸುಮಾರು 1.60 ಕೋಟಿ ರೂಪಾಯಿಗಳಷ್ಟಾಗುತ್ತದೆ.

ಯಶ್​ ಅವರ ಈ ಸಹಾಯಕ್ಕೆ ಖುಷಿ ಪಟ್ಟ ಕಲಾವಿದರು,ತಂತ್ರಜ್ಞರು ಹಾಗೂ ಚಿತ್ರೋದ್ಯಮದ ಎಲ್ಲಾ ವರ್ಗಗಳ ಸದಸ್ಯರು, ಯಶ್​ಗೆ ಧನ್ಯವಾದಗಳನ್ನ ತಿಳಿಸುವ ಸಲುವಾಗಿ ವಿಡಿಯೋ ಮಾಡಿ ಪೋಸ್ಟ್​ ಮಾಡ್ತಿದ್ದಾರೆ.​ ವಿಡಿಯೋ ಮಾಡಿ ಖುಷಿ ಹಂಚಿಕೊಂಡವರಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಟ ಅರಸು ಕೂಡ ಒಬ್ಬರು. ಯಶ್​ ಹಾಗೂ ಯಶ್​ ಕುಟುಂಬದವರಿಗೆ ಒಳ್ಳೆಯ ಸಂದೇಶ ನೀಡಿದ್ದಾರೆ. ಇದೇ ಸಂದರ್ಭ, ‘ಯಶ್​ ಅವರಿಗೆ ಐದು ಸಾವಿರ ರೂಪಾಯಿ ಒಂದು ಮ್ಯಾಟರ್​ ಅಲ್ಲ.. ಆದ್ರೆ ಎಲ್ಲಾ ಅಕೌಂಟ್​ಗೂ ಸೇರಿ 1.60 ಕೋಟಿ ಹಾಕೋದು ದೊಡ್ಡ ಅಮೌಂಟ್​’ ಅಂದಿದ್ದಾರೆ.

ನಮ್ಮ ರಾಕಿಂಗ್​ ಸ್ಟಾರ್​ ಯಶ್​ ಅವರು ನಮ್ಮ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ, ಎಲ್ಲಾ ವರ್ಗದವರಿಗೂ 5000 ರೂಪಾಯಿ ದುಡ್ಡು ಹಾಕಿದ್ದಾರೆ. ಸೋ..ಅವರಿಗೆ ಐದು ಸಾವಿರ ರೂಪಾಯಿ ದೊಡ್ಡ ಮ್ಯಾಟರ್​ ಅಲ್ಲ. ಆದ್ರೆ ಎಲ್ಲರ ಅಕೌಂಟ್​ಗೆ ಹಾಕುವಾಗ ಆಗುವ ಒಂದು ಕೋಟಿ ಅರವತ್ತು ಲಕ್ಷ ಇದೆಯಲ್ಲಾ, ಅದು ದೊಡ್ಡ ಅಮೌಂಟ್​. ಅವರ ಧಾರಾಳ ಮನಸ್ಸಿಗೆ ಆ ದೇವರು ಹೀಗೇ ಯಾವತ್ತೂ ಸಹಾಯ ಮಾಡುವ ಶಕ್ತಿ ಕೊಡಲಿ, ಅವರ ಎಲ್ಲಾ ಆಸೆಗಳನ್ನೂ ನೆರವೇರಿಸಲಿ. ಹಾಗೇ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಆ ದೇವರು ಒಳ್ಳೆಯದು ಮಾಡಲಿ ಅಂತ ನಾನು ಈ ಸಂದರ್ಭದಲ್ಲಿ ಬೇಡಿಕೊಳ್ತಿತ್ತೀನಿ.

ಅರಸು, ನಟ

ಇನ್ನು, ನಿರ್ಮಾಣ ನಿರ್ವಾಹಕರ ಸಂಘದ ಕಾರ್ಯದರ್ಶಿ ಉಮೇಶ್ ಕೂಡ ವಿಡಿಯೋ ಮಾಡುವ ಮೂಲಕ ಯಶ್​ಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ‘ಯಶ್​ ಸರ್​, ಇಂಥಾ ಸಂದರ್ಭದಲ್ಲಿ ನೀವು ಕಾರ್ಮಿಕರಿಗೆ ಮಾಡಿರುವ ಈ ದೊಡ್ಡ ಸಹಾಯವನ್ನ ನಾವು ಯಾವತ್ತೂ ಮರೆಯೋದಿಲ್ಲ. ದೇವರು ನಿಮಗೆ ಒಳ್ಳೆಯದು ಮಾಡಲಿ’ ಅಂತ ಪ್ರಾರ್ಥಿಸಿದ್ದಾರೆ.

ಇವರಷ್ಟೇ ಅಲ್ಲದೇ, ನಟ ಯಶ್​ ಸಹಾಯ ಪಡೆದಿರುವ ಅನೇಕ ಕಲಾವಿದರು, ಲೈಟ್​ಮ್ಯಾನ್​ ಕಾರ್ಮಿಕರು, ವಿವಿಧ ವರ್ಗದ ಕಾರ್ಮಿಕರು ಯಶ್​ ಹಾಗೂ ಕುಟುಂಬದವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನ ತಿಳಿಸಿ, ಅವರೆಲ್ಲರ ಯೋಗ-ಕ್ಷೇಮಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ. ನುಡಿದಂತೆ ನಡೆದ ಯಶ್​ ಇದೀಗ ತಮ್ಮ ಅಭಿಮಾನಿಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದ್ದಾರೆ ಅಂದ್ರೂ ತಪ್ಪಾಗಲ್ಲ.

The post ರಾಕಿಂಗ್​ ಸ್ಟಾರ್​ ಯಶ್​ಗೆ ₹5000 ಒಂದು ಮ್ಯಾಟರ್​ ಅಲ್ಲ.. ಆದರೆ..? appeared first on News First Kannada.

Source: newsfirstlive.com

Source link