ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಇಡೀ ದೇಶವೇ ನಲುಗಿ ಹೋಗಿದೆ. ಕೊರೊನಾ ಕಂಟ್ರೋಲ್​ ಮಾಡೋದಕ್ಕೆ ಹಲವು ರಾಜ್ಯಗಳಲ್ಲಿ ಈಗಾಗಲೇ ಲಾಕ್​ಡೌನ್​ ಹೇರಲಾಗಿದ್ದು, ಬಹಳಷ್ಟು ಜನ ದುಡ್ಡಿಲ್ಲದೇ, ರೇಷನ್​ ಇಲ್ಲದೇ ಕಷ್ಟ ಪಡುತ್ತಿದ್ದಾರೆ. ಇದೀಗ ಬಡ ಜನರಿಗೆ ಫುಡ್​ ಕಿಟ್​ಗಳನ್ನ ನೀಡುವ ಮೂಲಕ ರಾಕಿಂಗ್​ ಸ್ಟಾರ್​ ಯಶ್​ ಅಭಿಮಾನಿಗಳು ನೆರವಾಗ್ತಿದ್ದಾರೆ.

ಹೌದು.. ಅಖಿಲ ಕರ್ನಾಟಕ ರಾಕಿಂಗ್​ ಸ್ಟಾರ್​ ಯಶ್​​ ಅಭಿಮಾನಿಗಳ ಬಳಗ ಸಂಕಷ್ಟದಲ್ಲಿರುವವರ ಸಹಾಯಕ್ಕೆ ನಿಂತಿದ್ದಾರೆ. ಸದ್ಯ ಹೊಸಕೋಟೆಯಲ್ಲಿ ಬಡ ಜನರಿಗೆ ತರಕಾರಿ ಹಾಗೂ ದಿನಸಿ ಕಿಟ್​ಗಳನ್ನ ಹಂಚಿದ್ದಾರೆ.

ಈಗಾಗಲೇ ಸ್ಯಾಂಡಲ್​ವುಡ್​​ನ ಸ್ಟಾರ್​ ನಟರು- ನಟಿಯರು ಹಾಗೂ ನಟರ ಅಭಿಮಾನಿ ಬಳಗ ಈ ಪರಿಸ್ಥಿತಿಯಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗ್ತಿದ್ದಾರೆ. ನಟ ಉಪೇಂದ್ರ, ಕಿಚ್ಚ ಸುದೀಪ್​, ಚೇತನ್​ ಅಹಿಂಸಾ, ನಟಿ ರಾಗಿಣಿ ಹಾಗೂ ಇನ್ನಷ್ಟು ಸೆಲೆಬ್ರಿಟಿಗಳು ಚಿತ್ರರಂಗದ ಕಲಾವಿದರಿಗೆ ಮಾತ್ರವಲ್ಲದೇ ಜನಸಾಮಾನ್ಯರಿಗೂ ದಿನಸಿ ಕಿಟ್​​ಗಳನ್ನ ವಿತರಿಸುತ್ತಿದ್ದಾರೆ.

The post ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಂದ ಫುಡ್ ಕಿಟ್ ವಿತರಣೆ appeared first on News First Kannada.

Source: newsfirstlive.com

Source link