ರಾಕೇಶ್​​ಗೆ ಸ್ಫೂರ್ತಿ ಗೌಡ ಮೇಲೆ ಲವ್​​? ‘ಬಿಗ್​​ ಬಾಸ್​’ನಲ್ಲಿ ಮೊದಲ ವಾರವರವೇ ಹುಟ್ಟಿತು ಪ್ರೀತಿ-ಪ್ರೇಮದ ಚರ್ಚೆ | Rakesh Adiga Flirt with Spoorthi Shetty In Bigg Boss OTT Kannada


‘ಬಿಗ್​ ಬಾಸ್​ ಒಟಿಟಿಗೆ’ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ ಅನೇಕರು ಎಂಟ್ರಿ ಕೊಟ್ಟಿದ್ದಾರೆ. ಇನ್ನು, ನಟ ರಾಕೇಶ್ ಅಡಿಗ ಕೂಡ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರ ನಡುವೆ ಕೆಲ ಸಂಭಾಷಣೆ ನಡೆದಿದೆ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ.

‘ಬಿಗ್ ಬಾಸ್​’ (Bigg Boss) ಮನೆಯಲ್ಲಿ ಸಾಕಷ್ಟು ಪ್ರೀತಿ-ಪ್ರೇಮಗಳು ಹುಟ್ಟಿಕೊಂಡಿವೆ. ಕೆಲವು ಮನೆಯಲ್ಲೇ ಅಂತ್ಯವಾದರೆ, ಇನ್ನೂ ಕೆಲವು ಮದುವೆವರೆಗೆ ಹೋದ ಉದಾಹರಣೆ ಇದೆ. ಈಗ ಕನ್ನಡದಲ್ಲಿ ‘ಬಿಗ್ ಬಾಸ್​ ಒಟಿಟಿ’ ಶುರುವಾಗಿದೆ. ದೊಡ್ಮನೆಗೆ ಒಟ್ಟು 16 ಸ್ಪರ್ಧಿಗಳ ಎಂಟ್ರಿ ಆಗಿದೆ. ಮೊದಲ ವಾರವರೇ ಪ್ರೀತಿ-ಪ್ರೇಮದ ವಿಚಾರ ಪ್ರಸ್ತಾಪ ಆಗಿದೆ. ಈ ಮೂಲಕ ಹಲವು ರೀತಿಯ ಚರ್ಚೆಗಳು ಹುಟ್ಟಿಕೊಳ್ಳುತ್ತಿವೆ. ಅಷ್ಟಕ್ಕೂ ಇದು ಹಾಸ್ಯಕ್ಕೆ ಸೀಮಿತವಾಗುತ್ತದೆಯೋ ಅಥವಾ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆಯೋ ಎಂಬುದು ಸದ್ಯದ ಕುತೂಹಲ.

‘ಬಿಗ್​ ಬಾಸ್​ ಒಟಿಟಿಗೆ’ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ ಅನೇಕರು ಎಂಟ್ರಿ ಕೊಟ್ಟಿದ್ದಾರೆ. ಇನ್ನು, ನಟ ರಾಕೇಶ್ ಅಡಿಗ ಕೂಡ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರ ನಡುವೆ ಕೆಲ ಸಂಭಾಷಣೆ ನಡೆದಿದೆ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ. ಇಬ್ಬರ ನಡುವೆ ಏನಾದರೂ ನಡೆಯುತ್ತಿದೆಯೇ ಎಂಬ ಕುತೂಹಲ ಮೂಡಿದೆ.

ರಾಕೇಶ್ ಅವರ ಕೈಹಿಡಿದುಕೊಂಡು ಭವಿಷ್ಯ ಹೇಳುವುದಾಗಿ ಹೇಳಿದರು ಸ್ಫೂರ್ತಿ ಗೌಡ. ‘ದುಡ್ಡು ಎಷ್ಟೇ ಬಂದರೂ ಅರ್ಧಂಬರ್ಧ ಬರುತ್ತದೆ’ ಎಂದು ಮಾತು ಆರಂಭಿಸಿದರು. ನಂತರ ಅದೂ ಇದು ಎಂದು ಕಥೆ ಹೇಳೋಕೆ ಶುರು ಮಾಡಿದರು. ಇದನ್ನು ರಾಕೇಶ್ ಹಾಗೂ ರೂಪೇಶ್ ಆಡಿಕೊಂಡು ನಕ್ಕರು. ನಂತರ ರಾಕೇಶ್​ ಅವರು ಸ್ಫೂರ್ತಿ ಅವರ ಕೈ ಹಿಡಿದುಕೊಂಡು ಭವಿಷ್ಯ ನುಡಿಯುವುದಾಗಿ ಹೇಳಿದರು.

‘ನಿಮಗೆ ಬಿಗ್ ಬಾಸ್ ಮನೆಯ ಮೇಲೆ ಲವ್​ ಆಗುತ್ತದೆ. ಅವರು ನಿಮ್ಮ ಕೈ ನೋಡುತ್ತಿರುತ್ತಾರೆ’ ಎಂದರು ರಾಕೇಶ್​. ಅವರು ಫ್ಲರ್ಟ್​ ಮಾಡಿದ್ದನ್ನು ನೋಡಿ ಸ್ಫೂರ್ತಿ ನಕ್ಕರು. ಇಬ್ಬರ ನಡುವೆ ಏನೋ ಶುರುವಾಗುವ ಸೂಚನೆ ಸಿಗುತ್ತಿದೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *