ರಾಕೇಶ್ ಟಿಕಾಯತ್ ಭಯೋತ್ಪಾದಕ, ಕೃಷಿ ಕಾನೂನು ಹಿಂಪಡೆದಿರುವುದು ಖಲಿಸ್ತಾನಿ ಗೂಂಡಾಗಳಿಗೆ ಲಾಭವಾಗಲಿದೆ: ಬಿಜೆಪಿ ಮುಖಂಡ | BKU leader Rakesh Tikait a terrorist withdrawal of the farm laws profit for Khalistani gundas says BJP leader


ರಾಕೇಶ್ ಟಿಕಾಯತ್ ಭಯೋತ್ಪಾದಕ, ಕೃಷಿ ಕಾನೂನು ಹಿಂಪಡೆದಿರುವುದು ಖಲಿಸ್ತಾನಿ ಗೂಂಡಾಗಳಿಗೆ ಲಾಭವಾಗಲಿದೆ: ಬಿಜೆಪಿ ಮುಖಂಡ

ಹರಿನಾರಾಯಣ್ ರಾಜ್‌ಭರ್

ಬಲಿಯಾ : ಬಿಕೆಯು (BKU) ನಾಯಕ ರಾಕೇಶ್ ಟಿಕಾಯತ್ (Rakesh Tikait) “ಭಯೋತ್ಪಾದಕ”.ಕೇಂದ್ರ ಸರ್ಕಾರವು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದರಿಂದ ರೈತರಿಗೆ ನಷ್ಟ ಮತ್ತು “ಖಲಿಸ್ತಾನಿ ಗೂಂಡಾಗಳಿಗೆ” ಲಾಭವಾಗುತ್ತದೆ ಎಂದು ಬಿಜೆಪಿ (BJP) ನಾಯಕ ಹರಿನಾರಾಯಣ್ ರಾಜ್‌ಭರ್ (Harinarayan Rajbhar) ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ  ವಿಡಿಯೊವೊಂದರಲ್ಲಿ ಮಾಜಿ ಘೋಸಿ ಲೋಕಸಭಾ ಸಂಸದ ಹರಿನಾರಾಯಣ್ ರಾಜ್‌ಭರ್, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ (SBSP) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ “ಮಾಫಿಯಾ ಮುಖ್ತಾರ್ ಅನ್ಸಾರಿಯ ಶೂಟರ್” ಆಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.  ಕೃಷಿ ಕಾನೂನುಗಳ ವಿರುದ್ಧದ ಆಂದೋಲನದ ಸಂದರ್ಭದಲ್ಲಿ 700 ರೈತರ ಸಾವಿಗೆ ಟಿಕಾಯತ್ ಹೊಣೆಗಾರ ಎಂದು ಆರೋಪಿಸಿದ ರಾಜ್‌ಭರ್, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು, ಮೃತ ರೈತರ ಕುಟುಂಬಕ್ಕೆ ಪರಿಹಾರ ನೀಡಲು ಅವರ ಆಸ್ತಿಯನ್ನು ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಹೋರಾಟದ ವೇಳೆ 700ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದಾರೆ ಎಂದು ರೈತ ಸಂಘದ ಮುಖಂಡರು ಹೇಳಿದ್ದಾರೆ. ಟಿಕಾಯತ್ ಸೇರಿದಂತೆ ಪ್ರತಿಭಟನಾ ನಿರತ ರೈತ ಮುಖಂಡರು ಉಗ್ರವಾದಿಗಳು (ಭಯೋತ್ಪಾದಕರು) ಎಂದು ರಾಜ್‌ಭರ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ 700 ರೈತರ ಸಾವಿಗೆ ರಾಕೇಶ್ ಟಿಕಾಯತ್ ಕಾರಣರಾಗಿದ್ದಾರೆ. ಟಿಕಾಯತ್ ವಿರುದ್ಧ ಪ್ರಕರಣ ದಾಖಲಿಸಿ ಆತನ ಆಸ್ತಿಯನ್ನು ವಶಪಡಿಸಿಕೊಂಡು ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು” ಎಂದು ರಾಜ್‌ಭರ್ ಹೇಳಿದ್ದಾರೆ.

ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದರಿಂದ ರೈತರಿಗೆ ದೊಡ್ಡ ನಷ್ಟ ಮತ್ತು ಬೆರಳೆಣಿಕೆಯಷ್ಟು “ಖಲಿಸ್ತಾನಿ ಗೂಂಡಾಗಳಿಗೆ” ಲಾಭವಾಗಿದೆ ಎಂದು ಅವರು ಆರೋಪಿಸಿದರು. “ಸರ್ಕಾರದ ಹೊಂದಿಕೊಳ್ಳುವ ನಿಲುವಿನಿಂದ ರೈತ ಮುಖಂಡರು ಅನಗತ್ಯ ಲಾಭ ಪಡೆದರು. ಪ್ರತಿಭಟನಾಕಾರರು ರೈತರಲ್ಲ, ”ಎಂದು ಅವರು ಹೇಳಿದರು.

ಹರಿನಾರಾಯಣ್ ರಾಜ್‌ಭರ್ ಅವರು ಎಸ್‌ಬಿಎಸ್‌ಪಿ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜಕೀಯಕ್ಕೆ ಸೇರುವ ಮೊದಲು ವಿರೋಧ ಪಕ್ಷದ ನಾಯಕ “ಮಾಫಿಯಾ ಮುಕ್ತಾರ್ ಅನ್ಸಾರಿಯ ಶೂಟರ್” ಆಗಿದ್ದರು. ಅವರು ತಮ್ಮ ತಮ್ಮ ಕ್ರಿಮಿನಲ್ ಭೂತಕಾಲವನ್ನು ಮರೆಮಾಚಲು ರಾಜಕಾರಣಿಯ ಪೋಷಾಕನ್ನು ಧರಿಸಿದ್ದದ್ದರು ಎಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಸ್‌ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಅರುಣ್ ರಾಜ್‌ಭರ್, ಇದು ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಎದುರಿಸಲಿರುವ ಸಂಭವನೀಯ ಸೋಲಿನ ಪ್ರತಿಬಿಂಬವಾಗಿದೆ. ಹೇಳಿಕೆ ನೀಡಿದ ನಾಯಕ ತನ್ನ ಆರೋಪ ಸಾಬೀತುಪಡಿಸಲು ದಾಖಲೆಯನ್ನು ತೋರಿಸಬೇಕು ಎಂದಿದ್ದಾರೆ.

TV9 Kannada


Leave a Reply

Your email address will not be published. Required fields are marked *